ಕರ್ನಾಟಕ

karnataka

ETV Bharat / science-and-technology

ಮಾರ್ಕ್​ ಜುಕರ್​ಬರ್ಗ್​ರ ಮೆಟಾದಿಂದ ಅಕ್ಟೋಬರ್​ನಲ್ಲಿ ಹೊಸ ವಿಆರ್ ಹೆಡ್‌ಸೆಟ್‌ ಬಿಡುಗಡೆ

ಅತಿ ಹೆಚ್ಚು ಬೇಡಿಕೆ ಇರುವ ವರ್ಚುಯಲ್​ ರಿಯಾಲಿಟಿ ಹೆಡ್​ಸೆಟ್​ ಹೊಸ ಮಾದರಿಯನ್ನು ಫೇಸ್​ಬುಕ್​ ಸಂಸ್ಥಾಪಕ ಜುಕರ್​ಬರ್ಗ್​ ಅವರ ಮೆಟಾ ಸಂಸ್ಥೆ ಹೊರತರಲಿದೆ. ಅಕ್ಟೋಬರ್​ನಲ್ಲಿ ಇದು ಲಭ್ಯವಾಗಲಿದೆ.

met-announces-new-vr-headsets
ಹೊಸ ವಿಆರ್ ಹೆಡ್‌ಸೆಟ್‌ ಬಿಡುಗಡೆ

By

Published : Aug 27, 2022, 7:19 AM IST

ನ್ಯೂಯಾರ್ಕ್(ಅಮೆರಿಕ):ದೂರದ ಯಾವುದೇ ವಸ್ತುವನ್ನು ಕಂಪ್ಯೂಟರ್ ಸಹಾಯದಿಂದ ಅತಿ ಸಮೀಪವಾಗಿ ತೋರಿಸುವ ವರ್ಚುಯಲ್​ ರಿಯಾಲಿಟಿ ಹೆಡ್​ಸೆಟ್​ನ ಹೊಸ ಮಾದರಿಯನ್ನು ಮೆಟಾ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಅಕ್ಟೋಬರ್​ನಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್​ ಘೋಷಿಸಿದ್ದಾರೆ.

ಮಾಧ್ಯಮ ಸಂವಾದದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜುಕರ್​ಬರ್ಗ್​, ಸಂಸ್ಥೆಯ ಪ್ರಸ್ತುತ ಇರುವ ಕ್ವೆಸ್ಟ್ 2 ಗಿಂತ ಉನ್ನತ ಮಟ್ಟದ ಹೆಡ್​ಸೆಟ್​​ ಇದಾಗಿದೆ. ಇದನ್ನು ಧರಿಸಿರುವವರ ದೇಹ ಭಾಷೆ ಹೆಚ್ಚು ನೈಜವಾಗಿರಲಿದೆ. ಹೆಡ್​ಸೆಟ್​ನಲ್ಲಿ ಸುಧಾರಿತ ನೋಟ, ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.

ಇತ್ತೀಚೆಗೆ ಜನರು ಮೌಖಿಕಕ್ಕಿಂತಲೂ ಅಮೌಖಿಕ ಸಂವಹನಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ಇದನ್ನು ವಿರ್​ ಹೆಡ್​​ಸೆಟ್​​ಗಳು ಪೂರ್ತಿ ಮಾಡಲಿವೆ. ಇದನ್ನು ಧರಿಸಿ ನಗುತ್ತಿದ್ದರೆ ಅಥವಾ ಮುಖ ಗಂಟಿಕ್ಕಿದರೆ, ಕುಟುಕಿದರೆ ಅಥವಾ ಯಾವುದೇ ಅಭಿವ್ಯಕ್ತಿಯನ್ನು ತೋರಿಸಿದಲ್ಲಿ ಅದು ನೈಜವಾಗಿರುವಂತೆ ಈ ಹೆಡ್​ಸೆಟ್​ ಮಾಡುತ್ತದೆ ಎಂದು ಅವರು ತಿಳಿಸಿದರು.

ಹೊಸ ಹೆಡ್‌ಸೆಟ್‌ನ ಬೆಲೆಯ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ಮೆಟಾ ಕ್ವೆಸ್ಟ್ 2 ಗಿಂತ ಎರಡು ಪಟ್ಟು ಹೆಚ್ಚು ದುಬಾರಿಯಾಗಿದೆ. 800 ಡಾಲರ್​ ಬೆಲೆಯಲ್ಲಿ ಇದು ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಆಂತರಿಕ ಫೀಚರ್​ಗಳ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಓದಿ:ಅ.12ರೊಳಗೆ ಬೆಂಗಳೂರು ಸೇರಿ 13 ನಗರಗಳಲ್ಲಿ 5ಜಿ ಸೇವೆ ಆರಂಭಿಸಲಿರುವ ಕೇಂದ್ರ ಸರ್ಕಾರ

ABOUT THE AUTHOR

...view details