ನವದೆಹಲಿ :ಮೈಕ್ರೋಸಾಫ್ಟ್ ಕಂಪನಿಯು ನೂತನ ತಂತ್ರಜ್ಞಾನದ ಮೂಲಕ ಕೆಲಸದ ಸಾಮರ್ಥ್ಯ ಹೆಚ್ಚಿಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ‘ಇಂದು ನಾವು ಹೊಸ ಆವಿಷ್ಕಾರಗಳನ್ನು ಪ್ರಕಟಿಸಿದ್ದು, ‘ರೂಮ್ಸ್, ಫ್ಲೂಯಿಟ್ ಮತ್ತು ಮೈಕ್ರೋಸಾಫ್ಟ್ ವಿವಾ’ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಕೆಲಸದ ಸಾಮರ್ಥ್ಯ ಹೆಚ್ಚಲಿದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2021ರ ಮೇ ತಿಂಗಳಿನಲ್ಲಿ ಕಂಪನಿಯು ಸಂಶೋಧನೆಯ ಆಧಾರದ ಮೇಲೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸುವ ವಿಡಿಯೋವೊಂದನ್ನು ಪ್ರಸಾರ ಮಾಡಿತ್ತು. ಈ ಟೆಕ್ನಾಲಜಿ ಬಳಸಿ ತಂಡಗಳು ಹೇಗೆ ಕಾರ್ಯ ನಿರ್ವಹಿಸಬಲ್ಲವು. ಸಣ್ಣ, ಮಧ್ಯಮ ಮತ್ತು ದೊಡ್ಡ ರೂಂಗಳಲ್ಲಿ ನಡೆಯುವ ಸಭೆಗಳಲ್ಲಿ ಸ್ಪೀಕರ್, ಕ್ಯಾಮೆರಾ ಮತ್ತು ಸ್ಕ್ರೀನ್‌ಗಳನ್ನು ಯಾವ ರೀತಿ ಬಳಸಬೇಕೆಂಬುದರ ಕುರಿತು ಇದರಲ್ಲಿ ಮಾಹಿತಿಯಿದೆ.