ಸ್ಯಾನ್ ಫ್ರಾನ್ಸಿಸ್ಕೋ : ಸಣ್ಣದಾಗಿ ಹಾಡೊಂದನ್ನು ಗುನುಗುನಿಸುವ ಮೂಲಕ ಆ ಹಾಡನ್ನು ಹುಡುಕುವ ವೈಶಿಷ್ಟ್ಯವನ್ನು ಯೂಟ್ಯೂಬ್ ಪರೀಕ್ಷೆ ಮಾಡುತ್ತಿದೆ. ಸದ್ಯ ಈ ಪರೀಕ್ಷೆಯನ್ನು ಆ್ಯಂಡ್ರಾಯ್ಡ್ ಸಾಧನಗಳಿಗಾಗಿ ನಡೆಸಲಾಗುತ್ತಿದೆ. "ಪ್ರಸ್ತುತ ಪ್ಲೇ ಆಗುತ್ತಿರುವ ಹಾಡನ್ನು ತಾವು ಹಾಡುವ ಮೂಲಕ ಅಥವಾ ರೆಕಾರ್ಡಿಂಗ್ ಮಾಡುವ ಮೂಲಕ ಜನರು ಯೂಟ್ಯೂಬ್ನಲ್ಲಿ ಹಾಡನ್ನು ಹುಡುಕುವ ವೈಶಿಷ್ಟ್ಯದ ಬಗ್ಗೆ ನಾವು ಪ್ರಯೋಗ ಮಾಡುತ್ತಿದ್ದೇವೆ" ಎಂದು ಕಂಪನಿ ಮಂಗಳವಾರ 'ಯೂಟ್ಯೂಬ್ ಪರೀಕ್ಷಾ ವೈಶಿಷ್ಟ್ಯಗಳು ಮತ್ತು ಪ್ರಯೋಗಗಳು' (YouTube test features and experiments) ಪುಟದಲ್ಲಿ ತಿಳಿಸಿದೆ.
ಪ್ರಯೋಗದಲ್ಲಿ ಭಾಗಿಯಾಗಿರುವ ಬಳಕೆದಾರರು ಯೂಟ್ಯೂಬ್ ಧ್ವನಿ ಹುಡುಕಾಟದಿಂದ ಹೊಸ ಹಾಡಿನ ಹುಡುಕಾಟ ವೈಶಿಷ್ಟ್ಯದ ಟಾಗಲ್ ಮಾಡಬಹುದು ಮತ್ತು ಹಾಡನ್ನು ಗುರುತಿಸಲು ತಾವು ಹುಡುಕುತ್ತಿರುವ ಹಾಡನ್ನು ಮೂರು ಸೆಕೆಂಡುಗಳಿಗಿಂತ ಹೆಚ್ಚು ಕಾಲ ಹಮ್ (ಗುನುಗುನಿಸುವುದು) ಮಾಡಬಹುದು ಅಥವಾ ರೆಕಾರ್ಡ್ ಮಾಡಬಹುದು. ಹಾಡನ್ನು ಗುರುತಿಸಿದ ನಂತರ, ಸಂಬಂಧಿತ ಅಧಿಕೃತ ಸಂಗೀತ, ಬಳಕೆದಾರರು ರಚಿಸಿದ ವೀಡಿಯೊಗಳು ಮತ್ತು ಹುಡುಕಿದ ಹಾಡನ್ನು ಒಳಗೊಂಡಿರುವ ಶಾರ್ಟ್ಗಳು ಯೂಟ್ಯೂಬ್ ಅಪ್ಲಿಕೇಶನ್ನಲ್ಲಿ ಕಾಣಿಸಿಕೊಳ್ಳುತ್ತವೆ.
ಈ ತಿಂಗಳ ಆರಂಭದಲ್ಲಿ, ಕೃತಕ ಬುದ್ಧಿಮತ್ತೆ (ಎಐ)ಯಿಂದ ಸಮರಿಗಳನ್ನು ಸೃಷ್ಟಿಸಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಯೂಟ್ಯೂಬ್ ಘೋಷಿಸಿತ್ತು. ಈ ವೈಶಿಷ್ಟ್ಯವು ಬಳಕೆದಾರರಿಗೆ ವೀಡಿಯೊದ ಬಗ್ಗೆ ತ್ವರಿತ ಸಾರಾಂಶವನ್ನು ಓದಲು ಮತ್ತು ಅದು ಅವರಿಗೆ ಸೂಕ್ತವಾಗಿದೆಯೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.