ಕರ್ನಾಟಕ

karnataka

ETV Bharat / science-and-technology

ಹೆಡ್​ಫೋನ್​, ಲೌಡ್​ ಮ್ಯೂಸಿಕ್​ನಿಂದ 1 ಬಿಲಿಯನ್​ಗೂ ಹೆಚ್ಚಿನ ಯುವಜನತೆಯಲ್ಲಿ ಶ್ರವಣ ಸಮಸ್ಯೆ! - ಲೌಡ್​ ಮ್ಯೂಸಿಕ್​ನಿಂದ ಶ್ರವಣ ಸಮಸ್ಯೆ

ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ 430 ಮಿಲಿಯನ್​ ಜನರು ಜಗತ್ತಿನಾದ್ಯಂತ ಈ ಶ್ರವಣ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಹೆಡ್​ಫೋನ್​, ಲೌಡ್​ ಮ್ಯೂಸಿಕ್​ನಿಂದ 1 ಬಿಲಿಯನ್​ಗೂ ಹೆಚ್ಚಿನ ಯುವಜನತೆಯಲ್ಲಿ ಶ್ರವಣ ಸಮಸ್ಯೆ; ಅಧ್ಯಯನದಲ್ಲಿ ಬಯಲು
hearing-problem-in-more-than-1-billion-youth-due-to-headphones-loud-music

By

Published : Nov 16, 2022, 5:34 PM IST

ವಾಷಿಂಗ್ಟನ್​:ಹೆಡ್​ಫೋನ್​, ಇಯರ್​ಬಡ್ಸ್​, ಹೆಚ್ಚು ಸದ್ದು ಮಾಡುವ ಸ್ಥಳಗಳಿಂದಾಗಿ ಒಂದು ಬಿಲಿಯನ್​ಗಿಂತ ಹದಿಹರೆಯದ ಮತ್ತು ಯುವ ಜತೆ ಶ್ರವಣ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಕುರಿತು ಬಿಎಂಜೆ ಗ್ಲೋಬಲ್​ ಹೆಲ್ತ್​ ಜರ್ನಲ್​ ಪ್ರಕಟಿಸಿದೆ. ಆರೋಗ್ಯ ರಕ್ಷಣೆ ಹಿನ್ನೆಲೆ ಸುರಕ್ಷಿತ ಕೇಳುವಿಕೆಗೆ ಸಂಬಂಧಿಸಿದಂತೆ ಸರ್ಕಾರಗಳು ಜಗತ್ತಿನಲ್ಲಿ ತ್ಕಷಣಕ್ಕೆ ನಿಯಮಗಳನ್ನು ಜಾರಿಗೆ ತರಬೇಕಿದೆ ಎಂದು ಕೂಡ ಈ ಸಂಶೋಧನೆಯಲ್ಲಿ ಒತ್ತಾಯಿಸಲಾಗಿದೆ.

ಜಾಗತಿಕ ಶ್ರವಣ ಸಮಸ್ಯೆ ಕುರಿತು ಸರ್ಕಾರ, ಕೈಗಾರಿಕೆ ಮತ್ತು ನಾಗರಿಕ ಸಮಾಜ ಕಾಳಜಿ ವಹಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ 430 ಮಿಲಿಯನ್​ ಜನರು ಜಗತ್ತಿನಾದ್ಯಂತ ಈ ಶ್ರವಣ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಯುವ ಜನತೆ ವೈಯಕ್ತಿಕ ಶ್ರವಣ ಸಾಧನದಿಂದಾಗಿ ತಮ್ಮ ಕೇಳುವಿಕೆ ಸಾಮರ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವೈಯಕ್ತಿಕ ಕೇಳುವಿಕೆ ಸಾಧನಗಳಲ್ಲಿ ಧ್ವನಿ 105 ಡೆಸಿಬಲ್​ಗಿಂತ ಹೆಚ್ಚಿದೆ. ಮನೋರಂಜನೆ ಉದ್ದೇಶಕ್ಕಾಗಿ ಬಳಸುವ ಸೌಂಡ್​ಗಳ ಮಟ್ಟ 104 ರಿಂದ 112 ಇರಬೇಕು.

ಇದು ಸೂಚಿತಗಿಂತ ತುಂಬಾ ಹೆಚ್ಚಾಗಿದೆ. ಯುವ ಮತ್ತು ಹದಿಹರೆಯದ ವಯಸ್ಸಿನ ಜನರು ಸುರಕ್ಷಿತ ಆಲಿಸುವಿಕೆ ನಿಯಮ ಪಾಲಿಸದ ಹಿನ್ನೆಲೆ ತೊಂದರೆಗೆ ಒಳಗಾಗುತ್ತಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಕೇಳುವಿಕೆ ಸಮಸ್ಯೆ ಅಪಾಯವನ್ನು ಹೆಚ್ಚಿಸುತ್ತಿದೆ.

ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಪ್ರಕಟವಾದ ಅಧ್ಯಯನಗಳನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದೆ. 12-34 ವರ್ಷ ವಯಸ್ಸಿನವರು ನಡೆಸಲಾದ ಅಧ್ಯಯನದಿಂದಾಗಿ ಈ ಸಂಶೋಧನೆ ವರದಿ ಮಾಡಿದರು. ಸಂಶೋಧನೆಯು ಹೆಚ್ಚು ಸದ್ದು ಹೊಂದಿರುವ ಮನರಂಜನಾ ಸ್ಥಳಗಳ ಮೇಲೆ ಕೇಂದ್ರೀಕೃತವಾಗಿವೆ.

ಜಾಗತಿಕ ಜನಸಂಖ್ಯೆಯಲ್ಲಿ ಹೆಚ್ಚು ಸದ್ದು ಹೊಂದಿರುವ ಮನರಂಜನೆ ಮಾಧ್ಯಮಗಳಿಂದಾಗಿ 12-34 ವರ್ಷದ ವಯಸ್ಸಿನ ಮಕ್ಕಳಲ್ಲಿ ಈ ಕೇಳುವಿಕೆ ನಷ್ಟದ ಅಪಾಯದಲ್ಲಿದ್ದಾರೆ. ಕೇಳುವಿಕೆಯಲ್ಲಿ ಅಸುರಕ್ಷಿತ ಅಭ್ಯಾಸಗಳ ಪಾಲನೆ ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ. ಹದಿಹರೆಯದವರು ಮತ್ತು ಯುವಜನರಲ್ಲಿ ಕ್ರಮವಾಗಿ ಶೇಕಡಾ 24 ಮತ್ತು 48 ರಷ್ಟು. ಸಂಶೋಧಕರು ಅಂದಾಜಿಸುವಂತೆ ಜಾಗತಿಕವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ 0.67 ರಿಂದ 1.35 ಬಿಲಿಯನ್ ಜನರು ಶ್ರವಣ ದೋಷದ ಅಪಾಯವನ್ನು ಹೊಂದಿರಬಹುದು.

ಇದನ್ನೂ ಓದಿ:ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ, ಭಾಗವಹಿಸದ ಮಕ್ಕಳ ನಡುವಿನ ಅಂತರ ಹೆಚ್ಚಿಲ್ಲ: ಅಧ್ಯಯನ

ABOUT THE AUTHOR

...view details