ಕರ್ನಾಟಕ

karnataka

ETV Bharat / science-and-technology

Google New Feature: ಮೀಟ್​ ಅಪ್ಲಿಕೇಶನ್‌ನಲ್ಲಿ ಗ್ರೂಪ್​ ಕರೆಗಳಿಗೆ 1080 ಪಿಕ್ಸೆಲ್ಸ್ ಸ್ಟ್ರೀಮಿಂಗ್ ವಿಸ್ತರಣೆ...

Google ಇದೀಗ ತನ್ನ Meet ಅಪ್ಲಿಕೇಶನ್‌ನಲ್ಲಿ ಗ್ರೂಪ್​ ಕರೆಗಳ ವಿಡಿಯೋ ಕ್ವಾಲಿಟಿಯನ್ನು 1080 ಪಿಕ್ಸೆಲ್ಸ್​ ಸ್ಟ್ರೀಮಿಂಗ್​ವರೆಗೆ ವಿಸ್ತರಣೆ ಮಾಡಿದೆ. ಮೊದಲು ಇಬ್ಬರು ಮಾತ್ರ ಸಂಭಾಷಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಪ್ರಸ್ತುತ ಮೂರು ಅಥವಾ ಹೆಚ್ಚಿನ ಜನರು ಭಾಗವಹಿಸುವ ಮೀಟ್​ನಲ್ಲಿ ವಿಡಿಯೋ ಕ್ವಾಲಿಟಿಯನ್ನು 1080 ಪಿಕ್ಸೆಲ್ಸ್​ಗೆ ವಿಸ್ತರಿಸಿದೆ.

Google New Feature
Google New Feature: ಮೀಟ್​ ಅಪ್ಲಿಕೇಶನ್‌ನಲ್ಲಿ ಗ್ರೂಪ್​ ಕರೆಗಳಿಗೆ 1080 ಪಿಕ್ಸೆಲ್ಸ್ ಸ್ಟ್ರೀಮಿಂಗ್ ವಿಸ್ತರಣೆ...

By ETV Bharat Karnataka Team

Published : Oct 12, 2023, 11:09 AM IST

ನವದೆಹಲಿ: ಗೂಗಲ್ ಇದೀಗ ತನ್ನ ಮೀಟ್ ಅಪ್ಲಿಕೇಶನ್‌ನಲ್ಲಿ ಗ್ರೂಪ್ ಕರೆಗಳಿಗೆ 1080 ಪಿಕ್ಸೆಲ್ಸ್​​ ಸ್ಟ್ರೀಮಿಂಗ್ ಅನ್ನು ವಿಸ್ತರಿಸಿದೆ. ಕಂಪನಿಯು ಈಗ ವೆಬ್‌ನಲ್ಲಿ ಮೂರು ಅಥವಾ ಹೆಚ್ಚಿನ ಜನರು ಪಾಲ್ಗೊಳ್ಳುವ ಮೀಟ್​ಗಳ ವಿಡಿಯೋ ಕ್ವಾಲಿಟಿಯನ್ನು 1080 ಪಿಕ್ಸೆಲ್ಸ್​ಗೆ ವಿಸ್ತರಿಸುತ್ತಿದೆ.

"ಪ್ರಸ್ತುತ ನಾವು ಮೂರು ಅಥವಾ ಹೆಚ್ಚಿನ ಜನರು ಭಾಗವಹಿಸುವ ಮೀಟ್​ಗಳಿಗೆ 1080p ಅನ್ನು ವಿಸ್ತರಿಸುತ್ತಿದ್ದೇವೆ. 1080p ಕ್ಯಾಮೆರಾದೊಂದಿಗೆ ಕಂಪ್ಯೂಟರ್‌ಗಳನ್ನು ಬಳಸುವಾಗ, ಹೆಚ್ಚಿನ ರೆಸಲ್ಯೂಶನ್ ವೆಬ್‌ನಲ್ಲಿ ಲಭ್ಯವಿದೆ" ಎಂದು ಗೂಗಲ್​ ಮಂಗಳವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ರೆಸಲ್ಯೂಶನ್ ಆಯ್ಕೆ ಸೆಟ್ಟಿಂಗ್ಸ್ ಮೆನುವಿನಲ್ಲಿ ಲಭ್ಯ:1080p ರೆಸಲ್ಯೂಶನ್ ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ. 1080p ಕ್ಯಾಮೆರಾಗಳನ್ನು ಹೊಂದಿರುವ ಬಳಕೆದಾರರಿಗೆ ಮೀಟ್​ಗೆ ಪ್ರವೇಶಿಸುವ ಮೊದಲು ಹೆಚ್ಚಿನ ರೆಸಲ್ಯೂಶನ್ ಆಯ್ಕೆಯನ್ನು ಆನ್ ಮಾಡಲು ಪ್ರೇರೇಪಿಸಲಾಗುತ್ತದೆ ಅಥವಾ ಸೆಟ್ಟಿಂಗ್ಸ್​ ಮೆನು ಮೂಲಕ ಅದನ್ನು ಆನ್ ಅಥವಾ ಆಫ್ ಮಾಡಬಹುದು ಎಂದು ಕಂಪನಿ ಹೇಳಿದೆ.

1080 ಪಿಕ್ಸೆಲ್ಸ್​​ ಸ್ಟ್ರೀಮಿಂಗ್:ಇದಲ್ಲದೇ, ಟೆಕ್ ದೈತ್ಯ "ಒಂದು ಅಥವಾ ಹೆಚ್ಚಿನ ಬಳಕೆದಾರರು 1080p ಸಕ್ರಿಯಗೊಳಿಸಿದ ಬಳಕೆದಾರರನ್ನು 1080p ವಿಡಿಯೋ ಫೀಡ್ ಅನ್ನು ನಿರೂಪಿಸಲು ಸಾಕಷ್ಟು ದೊಡ್ಡ ಸ್ಕ್ರೀನ್​ ಮೇಲೆ ಪಿನ್ ಮಾಡಬೇಕಾಗುತ್ತದೆ. ಆ ನಿರ್ದಿಷ್ಟ ಸನ್ನಿವೇಶಗಳಲ್ಲಿ, 1080p ವಿಡಿಯೋ ಕಳುಹಿಸಲು ಹೆಚ್ಚುವರಿ ಬ್ಯಾಂಡ್‌ವಿಡ್ತ್ ಅಗತ್ಯವಿರುತ್ತದೆ. ಈ ಸಾಧನವು ಬ್ಯಾಂಡ್‌ವಿಡ್ತ್ ನಿರ್ಬಂಧಿತವಾಗಿದ್ದರೆ, ಮೀಟ್​ ಸ್ವಯಂಚಾಲಿತವಾಗಿ ರೆಸಲ್ಯೂಶನ್ ಅನ್ನು ಸರಿಹೊಂದುತ್ತದೆ'' ಎಂದು ವಿವರಿಸಿದೆ.

ಜಿ-ಮೇಲ್​ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಹೇಳಿದ ಗೂಗಲ್: ಜೊತೆಗೆ ಸ್ಪ್ಯಾಮ್ ಮತ್ತು ಇತರ ಅನಗತ್ಯ ಇಮೇಲ್‌ಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಫೆಬ್ರವರಿ 2024 ರಿಂದ ಬಲ್ಕ್ ಆಗಿ ಇ-ಮೇಲೆ ಕಳುಹಿಸುವವರಿಗೆ Gmail ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಗೂಗಲ್ ಘೋಷಿಸಿದೆ. "ಒಂದು ದಿನದಲ್ಲಿ Gmail ಖಾತೆಗಳಿಗೆ 5,000ಕ್ಕೂ ಹೆಚ್ಚು ಸಂದೇಶಗಳನ್ನು ಕಳುಹಿಸುವವರಿಗೆ, ನಿಮ್ಮ ಇನ್‌ಬಾಕ್ಸ್ ಅನ್ನು ಇನ್ನಷ್ಟು ಸುರಕ್ಷಿತವಾಗಿ ಮತ್ತು ಹೆಚ್ಚು ಸ್ಪ್ಯಾಮ್ ಮುಕ್ತವಾಗಿಡಲು ನಾವು ಬೃಹತ್ ಇ-ಮೇಲ್​ ಕಳುಹಿಸುವವರಿಗೆ ಹೊಸ ಅವಶ್ಯಕತೆಗಳನ್ನು ಪರಿಚಯಿಸುತ್ತಿದ್ದೇವೆ" ಎಂದು ಕಂಪನಿ ಮಾಹಿತಿ ನೀಡಿದೆ.

ಗೂಗಲ್​ ಸೈನ್​ಇನ್​ಗೆ ಕಡ್ಡಾಯವಾಗಲಿರುವ ಪಾಸ್​ ಕೀ:ಮುಂಬರುವ ದಿನಗಳಲ್ಲಿ ಗೂಗಲ್ ಸೇವೆಗಳಿಗೆ ಸೈನ್ ಇನ್ ಆಗಲು ಪಾಸ್​ವರ್ಡ್​ ಬದಲಾಗಿ ಪಾಸ್​ಕೀ ಬಳಕೆ ಮಾಡುವುದು ಕಡ್ಡಾಯ ಆಗಲಿದೆ. ಪಾಸ್​ಕೀ (ಪಾಸ್​ವರ್ಡ್​ಗಳಿಗೆ ಪರ್ಯಾಯ) ಮೂಲಕವೇ ಡೀಫಾಲ್ಟ್ ಸೈನ್​ಇನ್ ಪ್ರಕ್ರಿಯೆ ಆಗಲಿದೆ ಎಂದು ಗೂಗಲ್ ತಿಳಿಸಿದೆ. ಪಾಸ್ ಕೀ ಮೂಲಕ ಬಳಕೆದಾರರು ಬಯೋಮೆಟ್ರಿಕ್ ಸೆನ್ಸರ್ (ಫಿಂಗರ್ ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ), ಪಿನ್ ಅಥವಾ ಪ್ಯಾಟರ್ನ್​ಗಳಿಂದ ಅಪ್ಲಿಕೇಶನ್​ಗಳು ಮತ್ತು ವೆಬ್​ಸೈಟ್​ಗಳಿಗೆ ಸೈನ್​ಇನ್ ಮಾಡಬಹುದು. ಇದರಿಂದಾಗಿ ಪಾಸ್​ವರ್ಡ್​ಗಳನ್ನು ನೆನಪಿಟ್ಟುಕೊಳ್ಳುವ ಕಿರಿಕಿರಿ ತಪ್ಪಲಿದೆ.

ಇದನ್ನೂ ಓದಿ:ಚಾಟ್​ ಜಿಪಿಟಿ ಆದಾಯ ಕುಸಿತ; ಷೇರು ಮಾರಿ ಬಂಡವಾಳ ಸಂಗ್ರಹಕ್ಕೆ ಮುಂದಾದ ಓಪನ್​ ಎಐ

ABOUT THE AUTHOR

...view details