ಕರ್ನಾಟಕ

karnataka

By

Published : Sep 9, 2021, 7:03 AM IST

ETV Bharat / science-and-technology

‘ಬ್ಲಾಕ್​’ ಆಯ್ಕೆ ಜೊತೆಗೆ ‘ಸಾಫ್ಟ್​ ಬ್ಲಾಕ್​​​’ ಫೀಚರ್ ಪರಿಚಯಿಸಲು ಮುಂದಾದ ಟ್ವಿಟರ್​​​..!

ಟ್ವಿಟರ್​ ಬಳಕೆದಾರರ ಟ್ವೀಟ್​​ನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಅದರಲ್ಲಿನ ಬ್ಲಾಕ್​​​ ಯೂಸರ್​​, ಮ್ಯೂಟ್ ಟೂಲ್​​ನ ಜೊತೆಗೆ ಇನ್ಮುಂದೆ ಸಾಫ್ಟ್ ಬ್ಲಾಕ್ ಎಂಬ ಟೂಲ್ ಸಹ ಕಾಣಸಿಗಲಿದೆ.

twitter-testing-new-privacy-feature
‘ಬ್ಲಾಕ್​’ ಆಯ್ಕೆ ಜೊತೆಗೆ ‘ಸಾಫ್ಟ್​ ಬ್ಲಾಕ್​​​’ ಫೀಚರ್ ಪರಿಚಯಿಸಲು ಮುಂದಾದ ಟ್ವಿಟರ್​​​..!

ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್​ ಸದ್ಯ ಹೊಸ ಫೀಚರ್ ಹೊರತರಲು ಮುಂದಾಗಿದೆ. ಮೊದಲು ಟ್ವಿಟರ್​ನಲ್ಲಿ ಯೂಸರ್​ಗಳನ್ನ ಬ್ಲಾಕ್​ ಮಾಡುವ ಅವಕಾಶವಿತ್ತು. ಆದರೆ, ಈ ರೀತಿ ಬ್ಲಾಕ್ ಮಾಡಿದರೆ, ಅವರ ಮುಂದಿನ ಟ್ವೀಟ್​​ಗಳು ಸಹ ನಮ್ಮ ಪೇಜ್​​ನಲ್ಲಿ ಕಾಣಿಸುತ್ತಿರಲಿಲ್ಲ. ಆದರೆ, ಇದೀಗ ಹೊಸದಾಗಿ ‘ಸಾಫ್ಟ್​ ಬ್ಲಾಕ್’​ ಫೀಚರ್ ಪರಿಚಯಿಸಿದೆ.

ಇದರಲ್ಲಿ ಟ್ವಿಟರ್​ ಬಳಕೆದಾರರು ಅನಗತ್ಯವಾದ ಟ್ವೀಟ್ ಹ್ಯಾಂಡ್ಲರ್​ ಅನ್ನು ಪ್ರೊಫೈಲ್​​​ನಿಂದ ರಿಮೂವ್ ಮಾಡಬಹುದಾಗಿದೆ. ಹೀಗಂತ ಟ್ವಿಟರ್ ತನ್ನ ಅಧಿಕೃತ ಹ್ಯಾಂಡಲ್​​ನಲ್ಲಿ ಮಾಹಿತಿ ನೀಡಿದೆ. ಇದೊಂದು ಇನ್ಸಸ್ಟಾಗ್ರಾಮ್​​​ ಪ್ರೈವಸಿ ಪಾಲಿಸಿಯ ‘ಕ್ಲೋಸ್ ಫ್ರೆಂಡ್​​’ ಆಯ್ಕೆಯಂತೆ ಕೆಲಸ ಮಾಡಲಿದೆ.

ಟ್ವಿಟರ್​ ಬಳಕೆದಾರರ ಟ್ವೀಟ್​​ನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಅದರಲ್ಲಿನ ಬ್ಲಾಕ್​​​ ಯೂಸರ್​​, ಮ್ಯೂಟ್ ಟೂಲ್​​ನ ಜೊತೆಗೆ ಇನ್ಮುಂದೆ ಸಾಫ್ಟ್ ಬ್ಲಾಕ್ ಎಂಬ ಟೂಲ್ ಸಹ ಕಾಣಸಿಗಲಿದೆ. ಸಾಫ್ಟ್​​ ಬ್ಲಾಕ್​​​​ ಅಥವಾ ರಿಮೂವ್ ಫಾಲೋವರ್​ ಎಂಬ ಆಯ್ಕೆ ಇರಲಿದೆ. ನೀವು ಒಬ್ಬ ವ್ಯಕ್ತಿಯನ್ನ ಬ್ಲಾಕ್ ಮಾಡುವುದಕ್ಕಿಂತಲೂ ಆತನನ್ನು ರಿಮೂವ್ ಮಾಡುವುದು ಉತ್ತಮ ಎನ್ನುತ್ತಿದೆ ಸಂಸ್ಥೆ. ಆದರೆ, ಈ ಆಯ್ಕೆ ಪರೀಕ್ಷಾ ಹಂತವಾಗಿ ವೆಬ್​​ನಲ್ಲಿ ಮಾತ್ರ ಜಾರಿ ಮಾಡಲಾಗಿದೆ ಎಂದು ಟ್ವಿಟರ್ ತಿಳಿಸಿದೆ.

ABOUT THE AUTHOR

...view details