ನ್ಯೂಯಾರ್ಕ್ :ಈ ಹಿಂದೆ ನಮಗೆ ತಿಳಿದಿರುವುದಕ್ಕಿಂತಲೂ ಹೆಚ್ಚು ದ್ರವ ನೀರಿನಿಂದ ಕೂಡಿದ ಭೂಮಿಯ ತರಹದ ಎಕ್ಸೋಪ್ಲಾನೆಟ್‌ಗಳಿವೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ. ಎಕ್ಸೊಪ್ಲಾನೆಟ್ಗಳಲ್ಲಿ ನೀರು ಇರುವ ಸಾಧ್ಯತೆ 100 ಪಟ್ಟು ಹೆಚ್ಚಾಗಿದ್ದು, ಭೂಮಿಯ ಹೊರಗಿನ ಮತ್ತೊಂದು ಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ ಕೂಡ ಇದರಿಂದ ಹೆಚ್ಚಾಗಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿರ್ದಿಷ್ಟ ಗ್ರಹವೊಂದರ ಮೇಲ್ಮೈನ ಪರಿಸ್ಥಿತಿಯು ದ್ರವ ನೀರು ಅಸ್ತಿತ್ವದಲ್ಲಿರಲು ಸೂಕ್ತವಾಗಿಲ್ಲದಿದ್ದರೂ ಸಹ, ಅನೇಕ ನಕ್ಷತ್ರಗಳು ಗ್ರಹದ ಮೇಲ್ಮೈ ಅಡಿ ದ್ರವ ನೀರಿಗೆ ಸೂಕ್ತವಾದ ಭೌಗೋಳಿಕ ಪರಿಸ್ಥಿತಿಗಳು ಕಂಡು ಬಂದಿವೆ.
"ಜೀವನಕ್ಕೆ ದ್ರವರೂಪದ ನೀರಿನ ಉಪಸ್ಥಿತಿಯು ಅತ್ಯಗತ್ಯ ಎಂದು ನಮಗೆ ತಿಳಿದಿದೆ. ನಾವು ಈವರೆಗೆ ನೀರಿಲ್ಲ ಎಂದುಕೊಂಡ ಗ್ರಹಗಳಲ್ಲಿ ನೀರನ್ನು ಕಾಣಬಹುದು ಎಂದು ನಮ್ಮ ಹೊಸ ಸಂಶೋಧನೆ ತೋರಿಸುತ್ತದೆ” ಎಂದು ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕ ಡಾ ಲುಜೆಂದ್ರ ಓಜಾ ಹೇಳಿದರು. "ಇದು ಜೀವಿಗಳು ಅಭಿವೃದ್ಧಿ ಹೊಂದುವ ಪರಿಸರವನ್ನು ಸೈದ್ಧಾಂತಿಕವಾಗಿ ಕಂಡುಹಿಡಿಯುವ ಸಾಧ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ" ಎಂದು ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆದ ಗೋಲ್ಡ್‌ಸ್ಮಿಡ್ಟ್ ಜಿಯೋಕೆಮಿಸ್ಟ್ರಿ ಸಮ್ಮೇಳನದಲ್ಲಿ, ಈ ಬಗೆಗಿನ ಸಂಶೋಧನೆಗಳನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಗ್ರಹದ ಮೇಲ್ಮೈ ಹೆಪ್ಪುಗಟ್ಟಿದರೂ, ವಿಕಿರಣಶೀಲತೆಯಿಂದ ಉತ್ಪತ್ತಿಯಾಗುವ ಶಾಖವು ನೀರನ್ನು ನೆಲದಡಿಯಲ್ಲಿ ದ್ರವೀಕರಿಸಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಅತ್ಯಂತ ಸಾಮಾನ್ಯವಾದ ನಕ್ಷತ್ರಗಳ ಸುತ್ತಲೂ ಕಂಡುಬರುವ M-ಡ್ವಾರ್ಫ್ಸ್ ಎಂದು ಕರೆಯಲ್ಪಡುವ ಸೂರ್ಯ ಗ್ರಹಗಳ ಮೇಲೆ ತಂಡವು ತನ್ನ ವಿಶ್ಲೇಷಣೆಯನ್ನು ಕೇಂದ್ರೀಕರಿಸಿದೆ. M-ಡ್ವಾರ್ಫ್ಸ್ ಇವು ಚಿಕ್ಕ ನಕ್ಷತ್ರಗಳಾಗಿವೆ ಮತ್ತು ಅವು ನಮ್ಮ ಸೂರ್ಯನಿಗಿಂತ ಹೆಚ್ಚು ತಂಪಾಗಿರುತ್ತವೆ.