ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸ್ಆ್ಯಪ್ನಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೂರು ಹೊಸ ಫೀಚರ್ಗಳನ್ನು ಪರಿಚಯಿಸಲು WhatsApp ಮುಂದಾಗಿದೆ. ಇವು ಬಳಕೆದಾರರು ತಮ್ಮ ಸಂಭಾಷಣೆಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಮತ್ತು ಸಂದೇಶ ಕಳುಹಿಸುವಾಗ ರಕ್ಷಣೆಯನ್ನೂ ಒದಗಿಸುತ್ತವೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
- ಮೂರು ಹೊಸ ಫೀಚರ್ಗಳಲ್ಲಿ ಪ್ರಮುಖವಾಗಿರುವುದು ಎಂದರೆ ಬಳಕೆದಾರರು ಯಾವುದೇ ವಾಟ್ಸ್ಆ್ಯಪ್ ಗ್ರೂಪ್ನಿಂದ ಯಾರಿಗೂ ತಿಳಿಯದಂತೆ ಎಕ್ಸಿಟ್ ಆಗಬಹುದಾಗಿದೆ. ಅಂದರೆ ಗ್ರೂಪ್ನಿಂದ ಹೊರ ಬರುವಾಗ ಗ್ರೂಪ್ನಲ್ಲಿರುವ ಎಲ್ಲರಿಗೂ ತಿಳಿಯುವುದಿಲ್ಲ. ಬದಲಿಗೆ ಅಡ್ಮಿನ್ಗೆ ಮಾತ್ರ ಗೊತ್ತಾಗಲಿದೆ. ಈ ಫೀಚರ್ ಇದೇ ತಿಂಗಳು ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.
- ಎರಡನೇಯದ್ದು ನೀವು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಬಹದಾಗಿದೆ. ಈ ಫೀಚರ್ ಕೂಡ ಇದೇ ತಿಂಗಳಲ್ಲಿ ಎಲ್ಲ ಬಳಕೆದಾರರಿಗೂ ಸಿಗಲಿದೆ.
- ಮೂರನೇಯದ್ದು ವೀವ್ ಓನ್ಸ್ ಮೆಸೇಜ್ಗಳನ್ನು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಕೂಡ ಬಳಕೆದಾರರು ಅವಕಾಶ ನೀಡದಂತೆ ಮಾಡಬಹುದಾಗಿದೆ. ಈ ಫೀಚರ್ ಸದ್ಯ ಪ್ರಯೋಗದಲ್ಲಿದ್ದು, ಶೀಘ್ರದಲ್ಲೇ ಇದು ಸಹ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.