ಕರ್ನಾಟಕ

karnataka

ETV Bharat / science-and-technology

ಇಸ್ರೇಲ್ ವೆಬ್​ಸೈಟ್​ಗಳ ಮೇಲೆ ಸೈಬರ್​ ದಾಳಿ: ಹಲವಾರು ಪೋರ್ಟಲ್​ಗಳು ಸ್ಥಗಿತ - ಇಸ್ರೇಲ್ ಮೇಲೆ ಸೈಬರ್ ದಾಳಿಗಳು

ಇಸ್ರೇಲ್​ನ ವೆಬ್​ಸೈಟ್​ಗಳ ಸೈಬರ್ ದಾಳಿ ತೀವ್ರಗೊಂಡಿದ್ದು, ಹಲವಾರು ಸರ್ಕಾರಿ ವೆಬ್​ಸೈಟ್​ಗಳು ಸ್ಥಗಿತಗೊಂಡಿವೆ.

Hackers target Israeli websites with floods of malicious messages
Hackers target Israeli websites with floods of malicious messages

By ETV Bharat Karnataka Team

Published : Oct 10, 2023, 12:35 PM IST

ಜೆರುಸಲೇಮ್ : ಹಮಾಸ್ ಮತ್ತು ಇಸ್ರೇಲ್ ನಡುವಿನ ಸಮರ ತೀವ್ರಗೊಳ್ಳುತ್ತಿರುವ ಮಧ್ಯೆ ಇಸ್ರೇಲ್ ಮೇಲೆ ಸೈಬರ್ ದಾಳಿಗಳು ಕೂಡ ಹೆಚ್ಚಾಗುತ್ತಿವೆ. ಹ್ಯಾಕರ್​ಗಳು ವ್ಯಾಪಕ ಪ್ರಮಾಣದಲ್ಲಿ ಇಸ್ರೇಲ್ ವೆಬ್​ಸೈಟ್​ಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇಸ್ರೇಲ್ ವಿರುದ್ಧ ಹಮಾಸ್ ಶನಿವಾರ ಬೆಳಗ್ಗೆ ದಾಳಿ ಆರಂಭಿಸಿದ ನಂತರ ನಮ್ಮ ವೆಬ್​ಸೈಟ್​ ಮೇಲೆ ತೀವ್ರವಾಗಿ ದಾಳಿ ನಡೆಸಲಾಗುತ್ತಿದ್ದು, ವೆಬ್​ಸೈಟ್ ಸ್ಥಗಿತಗೊಂಡಿದೆ ಎಂದು ಇಸ್ರೇಲ್ ನ ಪ್ರಮುಖ ವೃತ್ತ ಪತ್ರಿಕೆ ದಿ ಜೆರುಸಲೇಮ್ ಪೋಸ್ಟ್​ ಎಕ್ಸ್​ ನಲ್ಲಿ ಹೇಳಿಕೊಂಡಿದೆ.

"ನಾವು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲಿದ್ದೇವೆ ಮತ್ತು ಶೀಘ್ರದಲ್ಲೇ ನಿಮ್ಮೆದುರಿಗೆ ಬರಲಿದ್ದೇವೆ. ಆಪರೇಷನ್ ಸ್ವೋರ್ಡ್ಸ್​ ಆಫ್ ಐರನ್ ಮತ್ತು ಹಮಾಸ್​ನ ಹಿಂಸಾತ್ಮಕ ದಾಳಿಗಳ ಬಗ್ಗೆ ನಿಮಗೆ ಮಾಹಿತಿ ನೀಡುವುದನ್ನು ಮುಂದುವರಿಸಲಿದ್ದೇವೆ" ಎಂದು ಅದು ಹೇಳಿದೆ. "ಇಸ್ರೇಲ್​ನ ಹಲವಾರು ವೆಬ್​ಸೈಟ್​ಗಳ ಮೇಲೆ denial of service (DDoS) ದಾಳಿಗಳು ನಡೆದಿದ್ದು, ಅನೇಕ ವೆಬ್​ಸೈಟ್​ಗಳನ್ನು ವಿರೂಪಗೊಳಿಸಲಾಗಿದೆ. ಆದರೆ ಯಾವ ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂಬುದು ಇನ್ನೂ ತಿಳಿದಿಲ್ಲ" ಎಂದು ಇಸ್ರೇಲ್​ನ ರಾಷ್ಟ್ರೀಯ ಭದ್ರತಾ ಏಜೆನ್ಸಿಯ ಸೈಬರ್ ಸೆಕ್ಯುರಿಟಿ ನಿರ್ದೇಶಕ ರಾಬ್ ಜಾಯ್ಸ್ ಹೇಳಿದ್ದಾರೆ.

ಡಿಡಿಒಎಸ್ ದಾಳಿಯಿಂದ 60ಕ್ಕೂ ಹೆಚ್ಚು ವೆಬ್​ಸೈಟ್​ಗಳನ್ನು ಹಾಳು ಮಾಡಲಾಗಿದೆ ಎಂದು ಸೈಬರ್ ಸೆಕ್ಯುರಿಟಿ ಸಂಶೋಧಕ ವಿಲ್ ಥಾಮಸ್ ಹೇಳಿದ್ದಾರೆ. ಪ್ಯಾಲೆಸ್ಟೈನ್ ಪರವಾಗಿರುವ ಹ್ಯಾಕ್ಟಿವಿಸ್ಟ್​ಗಳು ಇಸ್ರೇಲ್​​ನ ಸರ್ಕಾರಿ ವೆಬ್​ಸೈಟ್​ಗಳು, ನಾಗರಿಕ ಸೇವಾ ಸಂಸ್ಥೆ ವೆಬ್​ಸೈಟ್​ಗಳು, ಸುದ್ದಿ ಮಾಧ್ಯಮ ವೆಬ್​ಸೈಟ್​ಗಳು, ಹಣಕಾಸು ಸಂಸ್ಥೆಗಳು, ದೂರಸಂಪರ್ಕ ಮತ್ತು ಇಂಧನ ಕಂಪನಿಗಳ ವೆಬ್​ಸೈಟ್​ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಥಾಮಸ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ನೆಟ್​ವರ್ಕ್​, ಕಂಪ್ಯೂಟರ್ ಸಿಸ್ಟಮ್ ಅಥವಾ ಡಿಜಿಟಲ್ ಸಾಧನಕ್ಕೆ ಅನಧಿಕೃತ ಪ್ರವೇಶದ ಮೂಲಕ ಡೇಟಾ, ಅಪ್ಲಿಕೇಶನ್​ಗಳು ಅಥವಾ ಇತರ ಸ್ವತ್ತುಗಳನ್ನು ಕದಿಯುವ, ಬಹಿರಂಗಪಡಿಸುವ, ಬದಲಾಯಿಸುವ, ನಿಷ್ಕ್ರಿಯಗೊಳಿಸುವ ಅಥವಾ ನಾಶಪಡಿಸುವ ಯಾವುದೇ ಉದ್ದೇಶಪೂರ್ವಕ ಪ್ರಯತ್ನವನ್ನು ಸೈಬರ್ ದಾಳಿ ಎಂದು ಕರೆಯಲಾಗುತ್ತದೆ.

ಶನಿವಾರದಂದು ಹಮಾಸ್​ ಆರಂಭಿಸಿದ ಶಸ್ತ್ರಸಜ್ಜಿತ ದಾಳಿಯ ನಂತರ ಎರಡೂ ಪ್ರದೇಶಗಳ ಮಧ್ಯೆ ಭೀಕರ ಕದನ ಏರ್ಪಟ್ಟಿದೆ. ಎರಡೂ ಕಡೆಗಳ ಸುಮಾರು 1600ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, 2616ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. 25 ಕ್ಕೂ ಹೆಚ್ಚು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ಯಾಲೆಸ್ಟೈನ್​ ಎನ್​ಕ್ಲೇವ್​​ನಲ್ಲಿ 130 ಕ್ಕೂ ಹೆಚ್ಚು ಇಸ್ರೇಲ್ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವುದಾಗಿ ಗಾಜಾ ಉಗ್ರರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ :ಜಾಗತಿಕ ಉಷ್ಣಾಂಶ ಹೆಚ್ಚಳಕ್ಕೆ ಪ್ರಮುಖ 6 ಕಾರಣಗಳು ಇಲ್ಲಿವೆ...

ABOUT THE AUTHOR

...view details