ಶ್ರೀಹರಿಕೋಟಾ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 'ಚಂದ್ರಯಾನ'ಕ್ಕೆ ಎರಡು ದಶಕಗಳು ಸಂದಿವೆ. 2003ರಿಂದ ಆರಂಭವಾದ ಈ ಮಹಾತ್ವಾಕಾಂಕ್ಷೆ ಯೋಜನೆ ನಡೆದು ಬಂದ ಹಾದಿ (ಟೈಮ್‌ಲೈನ್) ಇಲ್ಲಿದೆ.
- ಆಗಸ್ಟ್ 15, 2003: ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ ಕಾರ್ಯಕ್ರಮವನ್ನು ಘೋಷಿಸಿದರು.
- ಅಕ್ಟೋಬರ್ 22, 2008: ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-1 ಉಡ್ಡಯನ.
- ನವೆಂಬರ್ 8, 2008: ಚಂದ್ರಯಾನ-1 ಚಂದ್ರನ ವರ್ಗಾವಣೆ ಪಥವನ್ನು ಪ್ರವೇಶಿಸಿತು.
- ನವೆಂಬರ್ 14, 2008: ಮೂನ್ ಇಂಪ್ಯಾಕ್ಟ್ ಪ್ರೋಬ್ ನೌಕೆಯು ಚಂದ್ರಯಾನ್-1 ನಿಂದ ಬೇರ್ಪಟ್ಟು ಹೊರಕ್ಕೆ ಚಿಮ್ಮುತ್ತದೆ ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಅಪ್ಪಳಿಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯನ್ನು ಇದು ದೃಢೀಕರಿಸಿದೆ.
- ಆಗಸ್ಟ್ 28, 2009: ಇಸ್ರೋ ಪ್ರಕಾರ ಚಂದ್ರಯಾನ-1 ಕಾರ್ಯಕ್ರಮ ಅಂತ್ಯ.
- ಜುಲೈ 22, 2019: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆ.
- ಆಗಸ್ಟ್ 20, 2019: ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲಾಯಿತು.
- ಸೆಪ್ಟೆಂಬರ್ 2, 2019: 100 ಕಿಲೋಮೀಟರ್ ಚಂದ್ರನ ಧ್ರುವ ಕಕ್ಷೆಯಲ್ಲಿ ಚಂದ್ರನನ್ನು ಸುತ್ತುತ್ತಿರುವಾಗ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿತು. ಆದಾಗ್ಯೂ, ಲ್ಯಾಂಡರ್‌ನಿಂದ ನೆಲದ ಕೇಂದ್ರಗಳಿಗೆ ಚಂದ್ರನ ಮೇಲ್ಮೈಯಿಂದ 2.1 ಕಿಮೀ ಎತ್ತರದಲ್ಲಿ ಸಂಪರ್ಕ ಕಡಿತಗೊಂಡಿತು.
- ಜುಲೈ 14, 2023: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ.
- ಆಗಸ್ಟ್ 23/24, 2023: ಇಸ್ರೋ ವಿಜ್ಞಾನಿಗಳು ತಾತ್ಕಾಲಿಕವಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್
- ಆಗಸ್ಟ್ 23 ಮತ್ತು 24 ಮಧ್ಯೆ ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ವಿಜ್ಞಾನಿಗಳಿಂದ ತಾತ್ಕಾಲಿಕ ಸಿದ್ಧತೆ. ಇದರಲ್ಲಿ ಸಫಲವಾದರೆ ಭಾರತ, ಈಗಾಗಲೇ ಇದನ್ನು ಸಾಧಿಸಿದ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಬಹು ನಿರೀಕ್ಷಿತ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಸಿದ್ಧವಾಗಿದೆ. ಇಸ್ರೋದ ಚಂದ್ರಯಾನ 3 ಮಿಷನ್ ರಾಕೆಟ್ ಜುಲೈ 14, 2023 ರ ಶುಕ್ರವಾರ ಮಧ್ಯಾಹ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ರಾಸಾಯನಿಕ ವಿಶ್ಲೇಷಣೆ ನಡೆಸಲು ಮತ್ತು ಭವಿಷ್ಯದ ಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಚಂದ್ರಯಾನ-3 ರ ಮುಖ್ಯ ಉದ್ದೇಶವಾಗಿದೆ.