ಕರ್ನಾಟಕ

karnataka

ETV Bharat / science-and-technology

ಸ್ಮಾರ್ಟ್​​ಫೋನ್ ತಯಾರಕ Foxconnನಿಂದ ಮಹತ್ವದ ನಿರ್ಧಾರ..  ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡುವುದಾಗಿ ಘೋಷಣೆ - ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿರುವ ಫಾಕ್ಸ್‌ಕಾನ್

ವಿಶ್ವದ ಮೂರನೇ ಅತಿ ದೊಡ್ಡ ಎಲೆಕ್ಟ್ರಿಕ್ ಸಾಧನಗಳ ಉತ್ಪಾದನಾ ಕಂಪನಿಯಾಗಿರುವ ಫಾಕ್ಸ್‌ಕಾನ್ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದಾಗಿ ಘೋಷಿಸಿದೆ.

Foxconn
ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡುವುದಾಗಿ ಘೋಷಣೆ

By

Published : Oct 18, 2021, 6:41 PM IST

ತೈಪೆ/ತೈವಾನ್​​:ಆ್ಯಪಲ್​​ ಮತ್ತು ಇತರ ಜಾಗತಿಕ ಬ್ರಾಂಡ್‌ಗಳಿಗಾಗಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ತೈವಾನ್​​ನ ಫಾಕ್ಸ್‌ಕಾನ್ ಕಂಪನಿಯು ಇದೇ ರೀತಿಯ ಗುತ್ತಿಗೆ ಮಾದರಿಯಡಿ ಆಟೋ ಬ್ರಾಂಡ್‌ಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದಾಗಿ ಸೋಮವಾರ ಘೋಷಿಸಿತು.

ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಚೀನಾ, ಉತ್ತರ ಅಮೆರಿಕ, ಯುರೋಪ್ ಮತ್ತು ಇತರ ಮಾರುಕಟ್ಟೆಗಳಲ್ಲಿ ಬ್ರಾಂಡ್‌ಗಳಿಗಾಗಿ ಕಾರುಗಳು ಮತ್ತು ಬಸ್​​​ಗಳನ್ನು ತಯಾರಿಸುತ್ತದೆ ಎಂದು ಅದರ ಅಧ್ಯಕ್ಷ ಯಂಗ್ ಲಿಯು ಹೇಳಿದರು.

ಇಟಾಲಿಯನ್ ಡಿಸೈನ್ ಹೌಸ್ ಪಿನಿನ್ಫರಿನಾ ಜೊತೆ ಅಭಿವೃದ್ಧಿಪಡಿಸಿದ ಪ್ರಮುಖ ಮಾದರಿ ಇ ಸೆಡಾನ್ ಅನ್ನು 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಮಾಡೆಲ್ ಇ(Model E) ಐದು ಆಸನಗಳನ್ನು ಹೊಂದಿರುತ್ತದೆ ಮತ್ತು ಒಂದು ಚಾರ್ಜ್‌ನಲ್ಲಿ 750 ಕಿಲೋಮೀಟರ್ ಬರುತ್ತದೆ ಎಂದು ಅದು ಹೇಳಿದೆ. ಲಿಯು ಅವರು ವಾಹನ ತಯಾರಕರಾದ ಫಿಸ್ಕರ್ ಇಂಕ್ ಮತ್ತು ತೈವಾನ್‌ನ ಯುಲಾಂಗ್ ಗ್ರೂಪ್ ಅನ್ನು ಗ್ರಾಹಕರಾಗಿ ಉಲ್ಲೇಖಿಸಿದ್ದಾರೆ.

ಫಾಕ್ಸ್‌ಕಾನ್ ತನ್ನ ಮೊದಲ ಎಲೆಕ್ಟ್ರಿಕ್ ಬಸ್, ಮಾಡೆಲ್ ಟಿ( Model T), ಒಂದು ಚಾರ್ಜ್‌ನಲ್ಲಿ 400 ಕಿಲೋಮೀಟರ್‌ಗಳಿಗಿಂತ ಕಡಿಮೆ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಹೇಳಿದೆ.

ABOUT THE AUTHOR

...view details