ಕರ್ನಾಟಕ

karnataka

ETV Bharat / science-and-technology

ವೈದ್ಯರಂತೆ ಆಲೋಚಿಸಬಲ್ಲದೇ Chat GPT? ಇಲ್ಲಿದೆ ಕುತೂಹಲಕಾರಿ ಮಾಹಿತಿ! - ಕ್ಲಿಷ್ಟಕರ ವೈದ್ಯಕೀಯ ಪ್ರಕರಣಗಳ ಪೈಕಿ

Chat GPT Think Like A Doctor: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ತಂತ್ರಜ್ಞಾನವು ವೈದ್ಯರಂತೆ ಆಲೋಚಿಸಬಲ್ಲದೇ ಎಂಬುದನ್ನು ತಿಳಿಯಲು ಅಮೆರಿಕದ ಸಂಶೋಧಕರು ಮಹತ್ವದ ಅಧ್ಯಯನಗಳನ್ನು ಕೈಗೊಂಡಿದ್ದಾರೆ.

can chat gpt think like a doctor?
can chat gpt think like a doctor?

By

Published : Jul 26, 2023, 6:48 PM IST

ನ್ಯೂಯಾರ್ಕ್ (ಅಮೆರಿಕ) : ಮಹತ್ವದ ಪ್ರಯೋಗವೊಂದರಲ್ಲಿ ಅಮೆರಿಕ​ ಮೆಡಿಕಲ್ ಸ್ಕೂಲ್​​ನ ಸಂಶೋಧಕರು, ಅತ್ಯಂತ ಕ್ಲಿಷ್ಟಕರವಾದ ವೈದ್ಯಕೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಓಪನ್ AI ನ ಚಾಟ್-GPT 4 ಎಷ್ಟು ನಿಖರವಾಗಿ ರೋಗಪತ್ತೆ ಮಾಡಬಹುದು ಎಂಬುದನ್ನು ಪರೀಕ್ಷೆ ಮಾಡಿದ್ದಾರೆ. ಸುಮಾರು ಶೇಕಡಾ 40ರಷ್ಟು ಪರೀಕ್ಷೆಗಳಲ್ಲಿ ಚಾಟ್​ಜಿಪಿಟಿ - 4 ಅತ್ಯಂತ ನಿಖರವಾಗಿ ರೋಗಪತ್ತೆ ಮಾಡಿದೆ ಎಂದು ಬೋಸ್ಟನ್‌ನಲ್ಲಿರುವ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್ (BIDMC) ಯ ವೈದ್ಯಕೀಯ ಸಂಶೋಧಕರು ಕಂಡು ಹಿಡಿದಿದ್ದಾರೆ.

ಚಾಟ್​ಜಿಪಿಟಿ-4 ಗೆ ನೀಡಲಾದ ಕ್ಲಿಷ್ಟಕರ ವೈದ್ಯಕೀಯ ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಪ್ರಕರಣಗಳಲ್ಲಿ ಸಂಭಾವ್ಯ ರೋಗನಿರ್ಣಯಗಳ ಪಟ್ಟಿಯಲ್ಲಿ ಸರಿಯಾದ ರೋಗ ನಿರ್ಣಯವನ್ನು ಒದಗಿಸಿದೆ ಎಂದು JAMA ಜರ್ನಲ್​ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಬಹಿರಂಗಪಡಿಸಿದೆ.

"ಕೃತಕ ಬುದ್ಧಿಮತ್ತೆಯಲ್ಲಿನ ಹೊಸ ತಂತ್ರಜ್ಞಾನದಿಂದ ತಯಾರಿಸಲಾದ ಜನರೇಟಿವ್ ಎಐ ಮಾಡೆಲ್​ಗಳು ಗುಣಮಟ್ಟದ ವೈದ್ಯಕೀಯ ಪರೀಕ್ಷೆಗಳಲ್ಲಿ ಕಾಣಬಹುದಾದ ಮಟ್ಟದ ಟೆಕ್ಸ್ಟ್​ ಆಧರಿತ ಪ್ರತಿಕ್ರಿಯೆಗಳನ್ನು ನೀಡಲು ಸಮರ್ಥವಾಗಿವೆ" ಎಂದು BIDMC ಯಲ್ಲಿನ ಇನ್ನೋವೇಶನ್ಸ್ ಇನ್ ಮೀಡಿಯಾ ಮತ್ತು ಎಜುಕೇಶನ್ ಡೆಲಿವರಿ (iMED) ವಿಭಾಗದ ಸಹ ನಿರ್ದೇಶಕ ಆಡಮ್ ರಾಡ್‌ಮನ್ ಹೇಳಿದರು.

"ಈ ಜನರೇಟಿವ್ ಎಐ ಮಾಡೆಲ್​ಗಳು ವೈದ್ಯರಂತೆ ಆಲೋಚಿಸಬಹುದೇ ಎಂಬುದನ್ನು ತಿಳಿಯಲು ನಾವು ಬಯಸಿದ್ದೆವು. ಹೀಗಾಗಿ ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಲಾಗುವ ಪ್ರಮಾಣಿತ ಸಂಕೀರ್ಣ ರೋಗ ನಿರ್ಣಯದ ಪ್ರಕರಣಗಳನ್ನು ಪರಿಹರಿಸುವಂತೆ ನಾವು ಎಐ ಮಾಡೆಲ್​ಗೆ ಸವಾಲು ನೀಡಿದೆವು. ಆದರೆ, ಎಐ ನೀಡಿದ ಫಲಿತಾಂಶಗಳು ನಿಜಕ್ಕೂ ಅದ್ಭುತವಾಗಿದ್ದವು" ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ವೈದ್ಯಕೀಯ ಬೋಧಕರೂ ಆದ ರಾಡ್‌ಮನ್ ಹೇಳಿದರು.

ಚಾಟ್‌ಬಾಟ್‌ನ ರೋಗನಿರ್ಣಯದ ಕೌಶಲ್ಯಗಳನ್ನು ನಿರ್ಣಯಿಸಲು, ರಾಡ್‌ಮನ್ ಮತ್ತು ಸಹೋದ್ಯೋಗಿಗಳು ಕ್ಲಿನಿಕೋಪಾಥಲಾಜಿಕಲ್ ಕೇಸ್ ಕಾನ್ಫರೆನ್ಸ್‌ಗಳನ್ನು (CPCs), ಸಂಬಂಧಿತ ಕ್ಲಿನಿಕಲ್ ಮತ್ತು ಲ್ಯಾಬೊರೇಟರಿ ಡೇಟಾ, ಇಮೇಜಿಂಗ್ ಅಧ್ಯಯನಗಳು ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹಿಸ್ಟೋಪಾಥೋಲಾಜಿಕಲ್ ಸಂಶೋಧನೆಗಳು ಸೇರಿದಂತೆ ಸಂಕೀರ್ಣ ಮತ್ತು ಸವಾಲಿನ ರೋಗಿಗಳ ಪ್ರಕರಣಗಳ ಸರಣಿಯನ್ನು ಬಳಸಿದರು.

ಸಂಶೋಧನೆಯಲ್ಲಿ 70 CPC ಪ್ರಕರಣಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಕೃತಕ ಬುದ್ಧಿಮತ್ತೆಯ ಫಲಿತಾಂಶಗಳು 27 (39 ಪ್ರತಿಶತ) ಪ್ರಕರಣಗಳಲ್ಲಿ ಅಂತಿಮ CPC ರೋಗನಿರ್ಣಯಕ್ಕೆ ನಿಖರವಾಗಿ ಹೊಂದಿಕೆಯಾದವು. ಶೇಕಡಾ 64 ರಷ್ಟು ಪ್ರಕರಣಗಳಲ್ಲಿ, ಅಂತಿಮ CPC ರೋಗನಿರ್ಣಯವನ್ನು AI ನ ಪರೀಕ್ಷೆಗಳಲ್ಲಿ ಸೇರಿಸಲಾಗಿತ್ತು. ರೋಗಿಯ ರೋಗಲಕ್ಷಣಗಳು, ವೈದ್ಯಕೀಯ ಇತಿಹಾಸ, ಕ್ಲಿನಿಕಲ್ ಸಂಶೋಧನೆಗಳು ಮತ್ತು ಪ್ರಯೋಗಾಲಯ ಅಥವಾ ಇಮೇಜಿಂಗ್ ಫಲಿತಾಂಶಗಳಿಗೆ ಕಾರಣವಾಗುವ ಸಂಭವನೀಯ ಪರಿಸ್ಥಿತಿಗಳ ಪಟ್ಟಿಯ ವಿಷಯಗಳು ಈ ಪರೀಕ್ಷೆಯಲ್ಲಿ ಅಡಕವಾಗಿದ್ದವು.

ರೋಗನಿರ್ಣಯದ ಚಿಂತನೆ ವಿಸ್ತರಿಸಲು ಅನುಕೂಲ:"ಚಾಟ್‌ಬಾಟ್‌ಗಳು ತರಬೇತಿ ಪಡೆದ ವೈದ್ಯಕೀಯ ವೃತ್ತಿಪರರ ಪರಿಣತಿ ಮತ್ತು ಜ್ಞಾನಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ. ಆದರೆ ಜನರೇಟಿವ್ ಎಐ ರೋಗನಿರ್ಣಯದ ವಿಷಯದಲ್ಲಿ ಮಾನವರ ಅರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಹುದು" ಎಂದು BIDMC ಯ ಆಸ್ಪತ್ರೆ ಮತ್ತು ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಜಹೀರ್ ಕಾಂಜೀ ಹೇಳಿದರು.

"ಇದು ವೈದ್ಯರಿಗೆ ಸಂಕೀರ್ಣವಾದ ವೈದ್ಯಕೀಯ ಡೇಟಾವನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ರೋಗನಿರ್ಣಯದ ಚಿಂತನೆಯನ್ನು ವಿಸ್ತರಿಸಲು ಅಥವಾ ಪರಿಷ್ಕರಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಅವರು ಹೇಳಿದರು. ಈ ಹೊಸ AI ಮಾದರಿಗಳು ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಹೇಗೆ ಪರಿವರ್ತಿಸಬಹುದು ಮತ್ತು ಅವುಗಳ ಪ್ರಯೋಜನಗಳು ಮತ್ತು ಮಿತಿಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಇದನ್ನೂ ಓದಿ : Samsung ಫೋಲ್ಡಬಲ್ ಫೋನ್​ Galaxy Z Flip5 & Galaxy Z Fold5 ಅನಾವರಣ; ಏನಿದರ ವಿಶೇಷ?

ABOUT THE AUTHOR

...view details