ಈಗಿನ ಕಾಲಘಟ್ಟದಲ್ಲಿ ಮನೆಯಲ್ಲಿ ಮೂರರಿಂದ ಐದು ಮೊಬೈಲ್ ಬಳಕೆ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಮೊಬೈಲ್ಗಳಿಗೆ ಪ್ರತ್ಯೇಕ ಚಾರ್ಜರ್ ಇಡುವುದು ತುಂಬಾ ತ್ರಾಸದಾಯಕ. ಆದರೆ, ಶೀಘ್ರದಲ್ಲೇ ಈ ಸಮಸ್ಯೆ ನಿವಾರಣೆಯಾಗಲಿದೆ. ಒಂದೇ ಸಾಮಾನ್ಯ ಚಾರ್ಜರ್ ನಿಮ್ಮ ಮನೆಯಲ್ಲಿರುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡುತ್ತದೆ.
ಹೌದು, ಸ್ಮಾರ್ಟ್‌ಫೋನ್ ಕಂಪನಿಗಳು ಮತ್ತು ಉದ್ಯಮ ಸಂಘಗಳು ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಹಂತ ಹಂತವಾಗಿ ಸಾಮಾನ್ಯ ಚಾರ್ಜಿಂಗ್ ಪೋರ್ಟ್ ಅನ್ನು ಪರಿಚಯಿಸಲು ಒಪ್ಪಿಕೊಂಡಿವೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಬುಧವಾರ ಈ ಮಾಹಿತಿಯನ್ನು ನೀಡಿದೆ. ಈ ಕಾರಣದಿಂದಾಗಿ ನೀವು ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಲ್ಯಾಪ್‌ಟಾಪ್, ಹೆಡ್‌ಫೋನ್, ಎಲ್‌ಇಡಿ ಲೈಟ್, ಟ್ರಿಮ್ಮರ್, ಸ್ಮಾರ್ಟ್ ಸ್ಪೀಕರ್, ಇಯರ್ ಫೋನ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಪ್ರತ್ಯೇಕ ಚಾರ್ಜರ್‌ಗಳನ್ನು ಇಡಬೇಕಾಗಿಲ್ಲ.
ವಾಚ್‌ಗಳಂತಹ ಧರಿಸಬಹುದಾದ ಸಾಧನಗಳಿಗೆ ಇದೇ ರೀತಿಯ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದುವ ಸಾಧ್ಯತೆ ಪರಿಶೀಲಿಸಲು ಉಪ - ಗುಂಪನ್ನು ಸ್ಥಾಪಿಸಲಾಗುವುದು. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ ಸಚಿವಾಲಯದ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ.