ಕರ್ನಾಟಕ

karnataka

ETV Bharat / science-and-technology

ಎಐ ತಂತ್ರಜ್ಞಾನದ ಅದ್ಭುತ Google Pixel 8 Pro ಸ್ಮಾರ್ಟ್​ಫೋನ್ ಬಿಡುಗಡೆ

ಎಐ ತಂತ್ರಜ್ಞಾನವನ್ನು ಆಧರಿಸಿ ಕೆಲಸ ಮಾಡುವ ಹೊಸ ಗೂಗಲ್ ಪಿಕ್ಸೆಲ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Google Pixel 8 Pro elevates premium smartphone experience with never-seen-before AI
Google Pixel 8 Pro elevates premium smartphone experience with never-seen-before AI

By ETV Bharat Karnataka Team

Published : Oct 15, 2023, 12:50 PM IST

ನವದೆಹಲಿ : ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳ ಜನಪ್ರಿಯತೆ ಹೆಚ್ಚಾಗುತ್ತಿರುವ ಮಧ್ಯೆ ಗೂಗಲ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ತಂತ್ರಜ್ಞಾನವನ್ನು ಒಳಗೊಂಡ ಅದ್ಭುತವಾದ ಅನುಭವ ನೀಡುವ ತನ್ನ ಹೊಸ Pixel 8 Pro ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ನಿಮಗೆ ರೋಮಾಂಚಕ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

ಈ ಪೋನ್ ನಿಮಗಾಗಿ ತನ್ನ ಜಾಣ್ಮೆಯಿಂದ ಏನೆಲ್ಲ ಮಾಡಬಹುದು ಎಂಬುದನ್ನು ತಿಳಿದರೆ ನೀವು ಬೆರಗಾಗುವಿರಿ. ಉದಾಹರಣೆಗೆ ನೋಡುವುದಾದರೆ- ನಿಮ್ಮ ಫೋನ್​ನಲ್ಲಿ ಹಲವಾರು ಫೋಟೊಗಳು ಮತ್ತು ವೀಡಿಯೊಗಳಿರುತ್ತವೆ. ಅದರಲ್ಲಿ ಒಂದಿಷ್ಟು ಗ್ರೂಪ್ ಫೋಟೊಗಳಿವೆ ಎಂದಿಟ್ಟುಕೊಳ್ಳಿ. ಗ್ರೂಪ್ ಫೋಟೊದಲ್ಲಿ ಎಲ್ಲರೂ ಸ್ಮೈಲ್ ಮಾಡಿ ಕಣ್ತೆರೆದು ನೋಡುತ್ತಿರುವ ಉತ್ತಮ ಪೋಟೊವನ್ನು ಆಯ್ದು ನಿಮ್ಮ ಮುಂದಿಡುತ್ತದೆ ಇದರಲ್ಲಿನ ಎಐ. ಹಾಗೆಯೇ ಅತ್ಯಂತ ಕಡಿಮೆ ಗದ್ದಲದ ಧ್ವನಿ ಇರುವ ಅತ್ಯುತ್ತಮ ವೀಡಿಯೊಗಳನ್ನು ನಿಮಗಾಗಿ ಆರಿಸಿ ತೋರಿಸುತ್ತದೆ.

ಪಿಕ್ಸೆಲ್ 8 ಪ್ರೊ ನವೀಕರಿಸಿದ ಕ್ಯಾಮೆರಾಗಳು, ಹೊಸ ಸೆನ್ಸರ್​ಗಳು ಮತ್ತು ಉಪಯುಕ್ತ ವೈಶಿಷ್ಟ್ಯಗಳಿಂದ ತುಂಬಿದೆ. ಇದು ಗೂಗಲ್ ಟೆನ್ಸರ್ ಜಿ 3 ಚಿಪ್ ಮತ್ತು ಹೊಸ ಆಂಡ್ರಾಯ್ಡ್ 14 ನಿಂದ ನಿಯಂತ್ರಿಸಲ್ಪಡುತ್ತದೆ. ಹಬ್ಬದ ಋತುವಿಗಾಗಿ ಈ ಫೋನ್ ಏಕೆ ಬೆಸ್ಟ್​ ಎಂಬುದನ್ನು ನೋಡೋಣ.

ಪಿಕ್ಸೆಲ್ 8 ಪ್ರೊನ 6.7 ಇಂಚಿನ Super Actua ಡಿಸ್​ಪ್ಲೇ ಹಿಂದೆಂದೂ ನೋಡದಂಥ ಪ್ರಕಾಶಮಾನವಾದ ಡಿಸ್​ಪ್ರಲೇ ಆಗಿದೆ. ನೇರ ಸೂರ್ಯನ ಬೆಳಕಿನಲ್ಲಿ ಅಲ್ಟ್ರಾ-ಎಚ್​ಡಿಆರ್​ ಚಿತ್ರಗಳು ಅತ್ಯಂತ ನೈಜವಾಗಿ ಕಾಣಿಸುವುದು ನಿಜವಾಗಿಯೂ ಅದ್ಭುತ. ಈ ಫೋನ್ ಪಾಲಿಶ್ ಮಾಡಿದ ಅಲ್ಯೂಮಿನಿಯಂ ಫ್ರೇಮ್ ಹೊಂದಿರುವ ಮ್ಯಾಟ್ ಗ್ಲಾಸ್ ಬ್ಯಾಕ್ ಹೊಂದಿದ್ದು ಪೋರ್ಸ್​ಲೇನ್, ಬೇ ಮತ್ತು ಅಬ್ಸಿಡಿಯನ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಪಿಕ್ಸೆಲ್ 8 ಪ್ರೊ ಹಿಂಭಾಗದಲ್ಲಿರುವ ಟೆಂಪರೇಚರ್ ಸೆನ್ಸರ್​ ಇದೆ. ಯಾವುದೇ ವಸ್ತುವನ್ನು ಸ್ಕ್ಯಾನ್ ಮಾಡಿದರೆ ಸಾಕು ಅದರ ಉಷ್ಣತಾಮಾನ ಎಷ್ಟಿದೆ ಎಂಬುದನ್ನು ಇದು ಕ್ಷಣಾರ್ಧದಲ್ಲಿ ಹೇಳುತ್ತದೆ. ನೀವು ಅಡುಗೆ ಮಾಡುವಾಗ ಪಾತ್ರೆ ಸಾಕಷ್ಟು ಬಿಸಿಯಾಗಿದೆಯೇ ಎಂಬುದನ್ನು ಇದರಿಂದ ನೀವು ಪರೀಕ್ಷಿಸಬಹುದು. ನೂಡಲ್ಸ್​ ತಿನ್ನುತ್ತಿದ್ದರೆ ಅದೆಷ್ಟು ಬಿಸಿಯಿದೆ ಎಂಬುದನ್ನು ಸಹ ನೀವು ತಿಳಿಯಬಹುದು.

ಪಿಕ್ಸೆಲ್ 8 ಪ್ರೊನಲ್ಲಿ ನೀವು ತುಂಬಾ ಇಷ್ಟಪಡುವ ಟಾಪ್ 4 ಫೋಟೋ ವೈಶಿಷ್ಟ್ಯಗಳಿವೆ. ನೀವು ಗ್ರೂಪ್ ಫೋಟೋ ಒಂದನ್ನು ಸೆರೆ ಹಿಡಿಯುವಾಗ ಅದೆಷ್ಟೋ ಶಾಟ್​ಗಳನ್ನು ತೆಗೆದುಕೊಂಡಿರುತ್ತೀರಿ. ಬಹುತೇಕ ಸಮಯದಲ್ಲಿ ಯಾರಾದರೊಬ್ಬರು ಕ್ಯಾಮೆರಾ ಕಡೆಗೆ ನೋಡುತ್ತಿರುವುದಿಲ್ಲ ಅಥವಾ ಕಣ್ಣು ಮಿಟುಕಿಸಿರುತ್ತಾರೆ. ಆದರೆ ಈ ಫೋನ್​ನಲ್ಲಿ 'ಬೆಸ್ಟ್ ಟೇಕ್' ಎಂಬ ಮ್ಯಾಜಿಕ್ ಫೀಚರ್ ಇದೆ. ಇದು ನಿಮ್ಮ ಎಲ್ಲ ಶಾಟ್​ಗಳನ್ನು ಸಂಯೋಜಿಸಿ ಸ್ವಯಂಚಾಲಿತವಾಗಿ ಎಲ್ಲರೂ ಚೆನ್ನಾಗಿ ಕಾಣುತ್ತಿರುವ ಫೋಟೊ ಒಂದನ್ನು ನಿಮಗೆ ಸೃಷ್ಟಿಸಿ ಕೊಡುತ್ತದೆ.

ನೀವು ಮತ್ತೊಂದು ಅಭಿವ್ಯಕ್ತಿಯ ಫೋಟೊವನ್ನು ಬಯಸಿದರೆ, ನೀವು ತೆಗೆದ ಇತರ ಫೋಟೋಗಳಿಂದ ಮತ್ತೊಂದು ನೋಟವನ್ನು ಮ್ಯಾನುವಲ್ ಆಯ್ಕೆ ಮಾಡಬಹುದು. 'ಮ್ಯಾಜಿಕ್ ಎಡಿಟರ್' ಫೀಚರ್ ಈಗಾಗಲೇ ಗೂಗಲ್ ಫೋಟೋಗಳಲ್ಲಿ ಲಭ್ಯವಿದೆ. ಇದು ಸಂಕೀರ್ಣವಾದ ಎಡಿಟಿಂಗ್​​ಗಳನ್ನು ಸುಲಭವಾಗಿಸುತ್ತದೆ ಮತ್ತು ನೀವು ಆ ಒಂದು ಕ್ಷಣವನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ ಎಂಬುದಕ್ಕೆ ಅನುಗುಣವಾಗಿ ಪೋಟೊವನ್ನು ಸೃಷ್ಟಿಸಲು ಜೆನೆರೇಟಿವ್ ಎಐ ಅನ್ನು ಬಳಸುತ್ತದೆ.

ಇದರಲ್ಲಿನ ಸುಧಾರಿತ ಮಶೀನ್ ಲರ್ನಿಂಗ್ ಆಧರಿತ ಆಡಿಯೊ ಮ್ಯಾಜಿಕ್ ಎರೇಸರ್ ವೀಡಿಯೊದಲ್ಲಿ ಹಿನ್ನೆಲೆಯಲ್ಲಿ ಕೇಳಿಸುವ ಗದ್ದಲ ಅಥವಾ ಕರ್ಕಶ ಶಬ್ದಗಳನ್ನು ಗುರುತಿಸಿ ಅವನ್ನು ತೆಗೆದು ಹಾಕಬಹುದು. ಜೂಮ್ ಎನ್ಹಾನ್ಸ್ ಫೀಚರ್ ಬಳಸಿ ನೀವು ಯಾವುದೇ ಫೋಟೋವನ್ನು ಜೂಮ್ ಮಾಡಬಹುದು ಮತ್ತು ನಿಮ್ಮ ಫೋಟೋದ ಕೇಂದ್ರಬಿಂದು ಏನಾಗಬೇಕೆಂದು ನೀವು ಬಯಸುತ್ತೀರೋ ಅದನ್ನು ಮಾಡಬಹುದು.

ಸುಧಾರಿತ ಎಐ ನಿಂದ ನಿಮಗೆ ಬರುವ ಸ್ಪ್ಯಾಮ್ ಕರೆಗಳನ್ನು ಶೇಕಡಾ 50ರಷ್ಟು ಕಡಿಮೆ ಮಾಡಬಹುದು. ಗೂಗಲ್ ಏಳು ವರ್ಷಗಳ ಕಾಲ ಈ ಫೋನ್​ಗೆ ಸೆಕ್ಯೂರಿಟಿ ಅಪ್ಡೇಟ್​ಗಳನ್ನು ನೀಡಲಿರುವುದರಿಂದ ನಿಮ್ಮ ಡೇಟಾ ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪಿಕ್ಸೆಲ್ 8 ಪ್ರೊ ಬೆಲೆ 1,06,999 ರೂ.ಗಳಾಗಿದ್ದು, ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ : ಜಿಯೋಭಾರತ್ B1 4G ಫೀಚರ್ ಫೋನ್ ಬಿಡುಗಡೆ: ಬೆಲೆ ₹__ರೂ!

ABOUT THE AUTHOR

...view details