ನವದೆಹಲಿ : ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಜನರಿಗೆ ತಿಳಿಸಲು ಮತ್ತು ತರಬೇತಿ ನೀಡಲು ಮೈಕ್ರೋಸಾಫ್ಟ್ ಹೊಸ AI ಸ್ಕಿಲ್ಸ್ ಇನಿಶಿಯೇಟಿವ್ (AI Skills Initiative) ಅನ್ನು ಪ್ರಾರಂಭಿಸಿದೆ.
ಈ ಇನಿಶಿಯೇಟಿವ್ ಲಿಂಕ್ಡ್‌ಇನ್‌ನೊಂದಿಗೆ ಅಭಿವೃದ್ಧಿಪಡಿಸಿದ ಹೊಸ, ಉಚಿತ ಕೋರ್ಸ್‌ವರ್ಕ್ ಅನ್ನು ಒಳಗೊಂಡಿರುತ್ತದೆ. ಆನ್‌ಲೈನ್ ಕಲಿಕಾ ಮಾರುಕಟ್ಟೆಯಲ್ಲಿ ಜನರೇಟಿವ್ AI ಕುರಿತು ಮೊದಲ ವೃತ್ತಿಪರ ಪ್ರಮಾಣಪತ್ರ ಇದರಲ್ಲಿ ಸಿಗಲಿದೆ. ಆನ್‌ಲೈನ್ ಕಲಿಕಾ ಮಾರುಕಟ್ಟೆಯಲ್ಲಿ ಜನರೇಟಿವ್ ಎಐ ಕುರಿತು ಮೊದಲ ವೃತ್ತಿಪರ ಪ್ರಮಾಣಪತ್ರ ಇದಾಗಲಿದೆ. ಉತ್ಪಾದಕ AI ನಲ್ಲಿ ಕಾರ್ಮಿಕರಿಗೆ ತರಬೇತಿ ನೀಡುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು data ಡಾಟ್ org ಯೊಂದಿಗೆ ಸಮನ್ವಯದಲ್ಲಿ ಇದು ಕೆಲಸ ಮಾಡಲಿದೆ. ಪ್ರತಿಯೊಬ್ಬರೂ ತಮ್ಮ AI ತಿಳುವಳಿಕೆಗಳನ್ನು ಸುಧಾರಿಸಿಕೊಳ್ಳಲು ಉಚಿತ ಡಿಜಿಟಲ್ ಕಲಿಕಾ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು ಇದರಲ್ಲಿ ಸಿಗಲಿವೆ.
ಜನರೇಟಿವ್ AI ಕೋರ್ಸ್‌ವರ್ಕ್‌ನ ವೃತ್ತಿಪರ ಪ್ರಮಾಣಪತ್ರದ ಅಡಿಯಲ್ಲಿ, ಉದ್ಯೋಗಿಗಳು ಜವಾಬ್ದಾರಿಯುತವಾಗಿ AI ಅನ್ನು ಹೇಗೆ ಬಳಸುವುದು ಮತ್ತು AI ನ ಪರಿಚಯಾತ್ಮಕ ಪರಿಕಲ್ಪನೆಗಳನ್ನು ಕಲಿಯಲಿದ್ದಾರೆ. ಮೌಲ್ಯಮಾಪನದಲ್ಲಿ ಉತ್ತೀರ್ಣರಾದರೆ ಅವರಿಗೆ Career Essentials certificate ನೀಡಲಾಗುವುದು. ಇದಲ್ಲದೆ ಶಿಕ್ಷಕರು, ತರಬೇತುದಾರರು ಮತ್ತು ಫೆಸಿಲಿಟೇಟರ್‌ಗಳಿಗಾಗಿ ತರಬೇತುದಾರ ಟೂಲ್‌ಕಿಟ್ ಅನ್ನು ಸಹ ಮೈಕ್ರೊಸಾಫ್ಟ್ ಪ್ರಾರಂಭಿಸುತ್ತಿದೆ. ಇದು ಸ್ಥಳೀಯ ಸಮುದಾಯಗಳಿಗೆ ಕೌಶಲ್ಯ ಸಂಪನ್ಮೂಲಗಳು ಮತ್ತು ತರಬೇತಿಯನ್ನು ನೀಡುತ್ತದೆ.