ನವದೆಹಲಿ:ಭಾರತೀಯ ಗ್ರಾಹಕರಿಗೆ ಜುಲೈನಲ್ಲಿ ಐಟೆಲ್ ಬ್ರ್ಯಾಂಡ್ ಹೊಸ 4ಕೆ ಆಂಡ್ರಾಯ್ಡ್ ಟಿವಿಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಇದು ಹೊಸ ದೂರದರ್ಶನ ಶ್ರೇಣಿಯ ಕೆಲವು ಪ್ರಮುಖ ಲಕ್ಷಣಗಳನ್ನು ಒಳಗೊಂಡಿದೆ. ಈ ಹೊಸ ಟಿವಿ ದೊಡ್ಡ ಪರದೆ ಮತ್ತು ಅಲ್ಟ್ರಾ-ಬ್ರೈಟ್ ಸ್ಕ್ರೀನ್ ಹೊಂದಿದ್ದು, 55 ಇಂಚಿನ ಪರದೆ ಇರಲಿದೆ. ಆದಾಗ್ಯೂ, ಇತರ ಗಾತ್ರಗಳೂ ಇರಬಹುದು ಎಂದು ಉದ್ಯಮದ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.
ಉತ್ತಮ ಪ್ರೊಸೆಸರ್, 24W ಡಾಲ್ಬಿ ಆಡಿಯೋ ಮೂಲಕ ಪ್ರಬಲವಾದ ಧ್ವನಿ ಗುಣಮಟ್ಟ ಮತ್ತು ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಂತಹ ಉತ್ತಮ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇತ್ತೀಚಿನ ಆಂಡ್ರಾಯ್ಡ್ ಟಿವಿಗಳು ಉನ್ನತ-ಮಧ್ಯಮ-ಆದಾಯದ ಗುಂಪನ್ನು ಗುರಿಯಾಗಿಸಿಕೊಂಡಿದೆ.