ಕರ್ನಾಟಕ

karnataka

ETV Bharat / science-and-technology

ಚಾಟ್​ಜಿಪಿಟಿಯ ಶೈಕ್ಷಣಿಕ ಪಠ್ಯ ಎಐ ಸಾಧನದ ಮೂಲಕ ಪತ್ತೆ: ಅಧ್ಯಯನ - ಚಾಟ್​​ಜಿಪಿಟಿ ಬಳಕೆ ಮಾಡಿ ವಿದ್ಯಾರ್ಥಿ

ಶಿಕ್ಷಣ ತಜ್ಞರು ಮಾಡುವ ಕೆಲವು ಹೆಚ್ಚು ಆಡಳಿತಾತ್ಮಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಎಐ ಸಿಗುವಂತೆ ಮಾಡಬೇಕು.

academic-text-produced-by-chatgpt-formulaic-would-be-picked-up-by-ai-detection-tools-study
academic-text-produced-by-chatgpt-formulaic-would-be-picked-up-by-ai-detection-tools-study

By

Published : Mar 25, 2023, 4:28 PM IST

Updated : Mar 25, 2023, 4:43 PM IST

ನವದೆಹಲಿ: ಚಾಟ್​ಜಿಪಿಟಿಯಿಂದ ತಯಾರಿಸಲಾದ ಶೈಕ್ಷಣಿಕ ವಿಷಯವು ತುಲನಾತ್ಮಕವಾಗಿ ಸೂತ್ರವಾಗಿದ್ದು, ಇದನ್ನೂ ಇನ್ನಿತರ ಅನೇಕ ಎಐ- ಪತ್ತೆ ಸಾಧನಗಳ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧ್ಯಯನ ತಿಳಿಸಿದೆ. ಚಾಟ್​​ಜಿಪಿಟಿ ಬಳಕೆ ಮಾಡಿ ವಿದ್ಯಾರ್ಥಿಗಳು ನಡೆಸುವ ಶೈಕ್ಷಣಿಕ ಅಪ್ರಾಮಾಣಿಕತೆ ಕುರಿತು ಅವರಿಗೆ ಮನವರಿಕೆ ಮಾಡಲು ಶಿಕ್ಷಕರಿಗೆ ಎಚ್ಚರಿಕೆ ಕರೆ ಇದಾಗಿದೆ ಎಂದು ಬ್ರಿಟನ್​ನ ಪ್ಲೇಮೌತ್​ ಮರ್ಜೊನ್​ ವಿಶ್ವವಿದ್ಯಾಲಯ ಮತ್ತು ಪ್ಲೇ ಮೌತ್​​ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸಿದೆ.

ಚಾಟ್​​ಜಿಪಿಟಿ ಲಾರ್ಜ್​ ಲಾಕ್ವೆಜ್​ ಮೆಷಿನ್​ (ಎಲ್​ಎಲ್​ಎಂ) ಸಂಶೋಧನೆ ಮತ್ತು ಶಿಕ್ಷಣವನ್ನು ಕ್ರಾಂತಿಕಾರ ಸಾಮರ್ಥ್ಯವನ್ನು ಹೊಂದಿದೆ. ಶೈಕ್ಷಣಿಕ ಪ್ರಾಣಿಕತೆ ಮತ್ತು ಕೃತಿಚೌರ್ಯ ಆತಂಕವನ್ನು ಇದು ಶಿಕ್ಷಣದ ವಲಯದಲ್ಲಿ ಮೂಡಿಸಿದೆ. ಚಾಟ್​ಜಿಪಿಟಿ ಶೈಕ್ಷಣಿಕ ಶೈಲಿಯ ಪ್ರಶ್ನೋತರ ಸರಣಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುದ್ದು, ವಿದ್ಯಾರ್ಥಿಗಳು ಇದಕ್ಕೆ ಬೇಗ ಆಕರ್ಷಿತಗೊಳ್ಳುತ್ತಾರೆ.

ಇದರಲ್ಲಿ ಜಿಪಿಟಿ-3 ಬಳಕೆ ಮೂಲಕ ಹೇಗೆ ವಿದ್ಯಾರ್ಥಿಗಳು ಕೃತಿಚೌರ್ಯ ತಡೆಯಬಹುದು. ಚಾಟ್​ಜಿಪಿಟಿ ಮತ್ತು ಕೃತಿಚೌರ್ಯದಲ್ಲಿ ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಶೈಕ್ಷಣಿಕ ಸಂಶೋಧನಾ ಪ್ರಬಂಧಕ್ಕಾಗಿ ಹಲವಾರು ಹಾಸ್ಯಾಸ್ಪದ ಮತ್ತು ಕ್ರಿಯಾತ್ಮಕ ಶೀರ್ಷಿಕೆಗಳನ್ನು ತಯಾರಿಸಲಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ಜಿಪಿಟಿಯಿಂದ ಪಡೆದ ಪಠ್ಯಗಳ ಹಸ್ತಪ್ರತಿಗಳನ್ನು ಅಂಟಿಸಲಾಗಿದೆ. ಚಾಟ್‌ಜಿಪಿಟಿ ಸೂಚಿಸಿದ ರಚನೆಯನ್ನು ಅನುಸರಿಸಿ ಇದನ್ನು ಪಡೆಯಲಾಗಿದ್ದು, ಇದರಲ್ಲಿ ಉಲ್ಲೇಖಗಳನ್ನು ಕೂಡ ಇದರಲ್ಲಿ ಸೇರಿಸಲಾಗಿದೆ.

ಈ ಪ್ರಕ್ರಿಯೆಯು ಓದುಗರಿಗೆ ಯಾವುದೇ ಸಾಫ್ಟ್​ವೇರ್​ ಇನ್​ಪುಟ್​ ಬಳಕೆ ಇಲ್ಲದೇ ಸಂಶೋಧಕರು ನೇರವಾಗಿ ಬರೆದ ಶೈಕ್ಷಣಿಕ ಪತ್ರಿಕೆಯ ಚರ್ಚಾ ವಿಭಾಗದಲ್ಲಿ ಮಾತ್ರ ಈ ಪ್ರಕ್ರಿಯೆಯನ್ನು ಓದುಗರಿಗೆ ಬಹಿರಂಗಪಡಿಸಲಾಗಿದೆ.

ಚಾಟ್​ಜಿಪಿಟಿಯ ಇತ್ತೀಚಿನ ಫ್ಲಾಟ್​ಫಾರ್ಮ್​ ಚಾಟ್​ಪುಟ್​​​ ಮತ್ತು ಕೃತಕ ಬುದ್ಧಿಮತ್ತೆ ಆಗಿದೆ. ಇದು ಶೈಕ್ಷಣಿಕವಾಗಿ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.

ಆದಾಗ್ಯೂ, ಹೆಚ್ಚು ಮುಂದುವರೆದ ಬೆಳವಣಿಗೆ ಆಗಿದ್ದು. ಇದು ಶೈಕ್ಷಣಿಕ ಸಮುದಾಯದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ಹೊಸ ಎಐ ಅಭಿವೃದ್ಧಿ ವಿದ್ಯಾರ್ಥಿಗಳ ಜ್ಞಾನಮಟ್ಟ ಮತ್ತು ಕಲಿಕೆ, ಬರವಣಿಗೆ ಕೌಶಲ್ಯಗಳ ಪರೀಕ್ಷೆ ನಡೆಸದೇ ವಿಶ್ವವಿದ್ಯಾಲಯಗಳಲ್ಲಿ ಹೊಸ ಸವಾಲುಗಳನ್ನು ಅಭಿವೃದ್ಧಿ ಪಡೆಸುತ್ತಿದೆ.

ಶಿಕ್ಷಣತಜ್ಞರು ಮಾಡುವ ಕೆಲವು ಹೆಚ್ಚು ಆಡಳಿತಾತ್ಮಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಎಐ ಸಿಗುವಂತೆ ಮಾಡಬೇಕು. ಇದು ವಿದ್ಯಾರ್ಥಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಅವಕಾಶ ಮಾಡಿಕೊಡಬೇಕು. ಈ ಎಐಗಳನ್ನು ವಿದ್ಯಾರ್ಥಿಗಳು ಸಿಗಬೇಕು ಚಾಟ್​ ಜಿಪಿಟಿಗಳು ನ್ಯೂ ಯಾರ್ಕ್​ ಶಾಲೆಗಳಲ್ಲಿ ನಿಷೇಧಿಸುವುದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ. ಈ ಹಿನ್ನೆಲೆ ಈ ಕುರಿತು ಮರು ಚಿಂತನೆ ನಡೆಸಿ, ಈ ಬಗ್ಗೆ ವಿದ್ಯಾರ್ಥಿಗಳಿಗೆ ಹೇಗೆ ತಿಳಿಸಬೇಕು ಎಂಬುದನ್ನು ಪರಿಶೀಲನೆ ನಡೆಸಬೇಕು.

ಸಂಸ್ಥೆಗಳ ಹೊರಗಿನ ವಿದ್ಯಾರ್ಥಿಗಳು ಈ ಎಐಗಳನ್ನು ಬಳಕೆ ಮಾಡಬಹುದು. ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಕಂಪನಿಗಳು ಅದನ್ನು ಸರ್ಚ್ ಇಂಜಿನ್‌ಗಳು ಮತ್ತು ಆಫೀಸ್ ಸೂಟ್‌ಗಳನ್ನು ಇದಕ್ಕಾಗಿ ಸಂಯೋಜಿಸುತ್ತಿವೆ. ಇಂತಹ ಕೃತಕ ಮಾದರಿಗೆ ಹೊಂದಿಕೊಳ್ಳುವುದು ವಿಶ್ವವಿದ್ಯಾಲಯಗಳಿಗೆ ಸವಾಲಾಗಿದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಬಹಳ ಉಪಯುಕ್ತ; ಬಳಸುವ ಮಾರ್ಗ ಗೊತ್ತಿರಬೇಕು ಅಷ್ಟೇ

Last Updated : Mar 25, 2023, 4:43 PM IST

ABOUT THE AUTHOR

...view details