ಕರ್ನಾಟಕ

karnataka

ETV Bharat / opinion

ಸ್ತನ್ಯಪಾನ ದುರ್ಬಲಗೊಳಿಸಲು ಹಾಲಿನ ಕಂಪನಿಗಳು ಈ ನೀತಿ ಅನುಸರಿಸುತ್ತಿವೆ - ಲ್ಯಾನ್ಸೆಟ್ ವರದಿ! - 55 ಶತಕೋಟಿ ಡಾಲರ್ ಲಾಭ

ಹಾಲಿನ ಉದ್ಯಮದ ಮಾರ್ಕೆಟಿಂಗ್​ನ ಶೋಷಣಾತ್ಮಕ ತಂತ್ರಗಳ ಮೂಲಕ ಹಾಲುಣಿಸುವಿಕೆಯನ್ನು (ಸ್ತನ್ಯಪಾನ) ದುರ್ಬಲಗೊಳಿಸುವ ಕಾರ್ಯವಾಗುತ್ತಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಹಕ್ಕುಗಳನ್ನು ಅಪಾಯಕ್ಕೆ ತಳ್ಳುತ್ತದೆ ಎಂದು 'ದಿ ಲ್ಯಾನ್ಸೆಟ್' ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಯೊಂದು ತಿಳಿಸಿದೆ.

Formula Milk
ಹಾಲಿನ ಉದ್ಯಮ

By

Published : Feb 13, 2023, 5:11 PM IST

ನವದೆಹಲಿ:ಹಾಲಿನ ಉತ್ಪನ್ನದ ಮಾರುಕಟ್ಟೆಯ ಕೆಲ ತಂತ್ರಗಳಿಂದ ಹಾಲುಣಿಸುವಿಕೆಯನ್ನು (ಸ್ತನ್ಯಪಾನ) ದುರ್ಬಲಗೊಳಿಸಲಾಗುತ್ತದೆ. ಸ್ತನ್ಯಪಾನ ಬೆಂಬಲಿಸುವಂತಹ ಕ್ರಮಗಳ ವಿರುದ್ಧ ಹಾಲಿನ ಉದ್ಯಮವು ಪ್ರಭಾವ ಹೆಚ್ಚಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಹಕ್ಕುಗಳನ್ನು ಗಂಭೀರವಾದ ಅಪಾಯಕ್ಕೆ ತಳ್ಳಲಾಗುತ್ತಿದೆ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಮೂರು ಸಂಶೋಧನೆ ವರದಿಗಳು ತಿಳಿಸಿವೆ.

"ಈ ಹೊಸ ಸಂಶೋಧನೆಯು ಬೃಹತ್​ ಹಾಲಿನ ಕಂಪನಿಗಳ ದೊಡ್ಡ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ಎತ್ತಿ ತೋರಿಸುತ್ತಿದೆ. ಲಕ್ಷಾಂತರ ಮಹಿಳೆಯರು ತಮ್ಮ ಮಕ್ಕಳಿಗೆ ಹಾಲುಣಿಸುವುದನ್ನು ತಡೆಯುವುದು ಸಾರ್ವಜನಿಕ ನೀತಿಯ ವೈಫಲ್ಯಗಳನ್ನು ಬಿಂಬಿಸುತ್ತದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್​ಓ) ವಿಜ್ಞಾನಿ ಹಾಗೂ ಎ ಪೇಪರ್​ ಆಫ್​ ಫಾರ್ಮುಲಾ ಮಿಲ್ಕ್​ ಮಾರ್ಕೆಟಿಂಗ್ ಲೇಖಕ ಪ್ರೊ.ನಿಗೆಲ್ ರೋಲಿನ್ಸ್ ಹೇಳಿದ್ದಾರೆ.

ಮಕ್ಕಳ ಆರೋಗ್ಯಕ್ಕೆ ಸ್ತನ್ಯಪಾನ ಮಹತ್ವದ ಕೊಡುಗೆ:"ತಾಯಂದಿರು ಬಯಸಿದಷ್ಟು ಮಕ್ಕಳಿಗೆ ಸ್ತನ್ಯಪಾನ ಮಾಡಲು ಉತ್ತೇಜಿಸಲು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕ್ರಮಗಳು ಅಗತ್ಯವಿದೆ. ಜೊತೆಗೆ ಹಾಲಿನ ಮಾರಾಟದ ಶೋಷಣೆಯ ಸೂತ್ರಗಳನ್ನು ಎಲ್ಲರೂ ನಿಭಾಯಿಸಲು ಪ್ರಯತ್ನ ಮಾಡಬೇಕಿದೆ" ಎಂದು ರೋಲಿನ್ಸ್ ತಿಳಿಸಿದ್ದಾರೆ. ಮಕ್ಕಳ ಆರೋಗ್ಯಕ್ಕೆ ಸ್ತನ್ಯಪಾನ ನೀಡಿದ ಮಹತ್ವದ ಕೊಡುಗೆಗಳನ್ನು ಗಮನಿಸಿದರೆ, ಮಹಿಳೆಯರಿಗೆ ಹೆಚ್ಚು ಹೆರಿಗೆ ರಜೆ ನೀಡುವುದು ಸೇರಿದಂತೆ ಆರೋಗ್ಯ ಮತ್ತು ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳಲ್ಲಿ ಸ್ತನ್ಯಪಾನಕ್ಕೆ ಹೆಚ್ಚು ಬೆಂಬಲಿಸಬೇಕು ಎಂದು ಲ್ಯಾನ್ಸೆಟ್ ಸರಣಿ ಶಿಫಾರಸು ಮಾಡಿದೆ.

ಪ್ರಸ್ತುತ ಸುಮಾರು 650 ಮಿಲಿಯನ್ ಮಹಿಳೆಯರಿಗೆ ಮಾತೃತ್ವ ರಕ್ಷಣೆ ಇಲ್ಲ ಎಂಬ ವರದಿ ಗಮನಿಸಿದರೆ, ದಾರಿತಪ್ಪಿಸುವ ಮಾರ್ಕೆಟಿಂಗ್ ತಂತ್ರಗಳು, ಡೈರಿ ಮತ್ತು ಹಾಲಿನ ಉದ್ಯಮಗಳ ಪ್ರಭಾವವು ಸ್ತನ್ಯಪಾನ ಮತ್ತು ಶಿಶುಗಳ ಆರೈಕೆಯ ಬಗ್ಗೆ ಆತಂಕವನ್ನು ಹೆಚ್ಚಿಸಿವೆ. ಪೋಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

55 ಶತಕೋಟಿ ಡಾಲರ್ ಲಾಭ:ವಿಶ್ವ ಆರೋಗ್ಯ ಅಸೆಂಬ್ಲಿಯು 1981ರಲ್ಲಿ ಮಾರ್ಕೆಟಿಂಗ್‌ ಆಫ್​ ಬ್ರಸ್ಟ್​ ಮಿಲ್ಕ್​ ಕೋಡ್​ನ ಅಂತಾರಾಷ್ಟ್ರೀಯ ನಿಯಮ ಹಾಗೂ ಹಲವಾರು ನಿರ್ಣಯಗಳನ್ನು ಸಿದ್ಧಪಡಿಸಿದೆ. ಆದರೂ ಕೂಡಾ ನಿಮಯಗಳು ಹಾಲಿನ ಉದ್ಯಮದ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಉತ್ಪನ್ನಗಳ ಮಾರಾಟವು ಪ್ರಸಕ್ತ ಸಾಲಿನಲ್ಲಿ 55 ಶತಕೋಟಿ ಡಾಲರ್​ ಗಡಿಯನ್ನು ತಲುಪುತ್ತಿದೆ ಎಂದು ಡಬ್ಲ್ಯೂಎಚ್​ಓ ತಿಳಿಸಿದೆ.

ತಪ್ಪುದಾರಿಗೆ ಎಳೆಯಲಾಗುತ್ತಿದೆ:''ಪೋಷಕರ ಆತಂಕಗಳನ್ನು ಮಾರುಕಟ್ಟೆಯ ತಂತ್ರಗಳು ನೇರವಾಗಿ ಬಳಸಿಕೊಳ್ಳುತ್ತವೆ ಹಾಗೂ ತಪ್ಪುದಾರಿಗೆ ಎಳೆಯಲಾಗುತ್ತಿದೆ. ಮಕ್ಕಳ ಗಡಿಬಿಡಿ ಅಥವಾ ಅಳುವನ್ನು ನಿವಾರಿಸುತ್ತದೆ, ಮಕ್ಕಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಅಥವಾ ರಾತ್ರಿಯ ನಿದ್ರೆಯನ್ನು ಹೆಚ್ಚಿಸುತ್ತವೆ ಎಂದು ವಾಣಿಜ್ಯ ಹಾಲಿನ ಉತ್ಪನ್ನಗಳು ದಾರಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ'' ಎಂದು ಲ್ಯಾನ್ಸೆಟ್ ವರದಿಯಲ್ಲಿ ಹೇಳಲಾಗಿದೆ. ''ತಾಯಂದಿರನ್ನು ಸೂಕ್ತವಾಗಿ ಬೆಂಬಲಿಸಿದರೆ ಮಾತ್ರ, ಪೋಷಕರ ಕಾಳಜಿ ಅನ್ವಯ ಸ್ತನ್ಯಪಾನದೊಂದಿಗೆ ಯಶಸ್ವಿಯಾಗಿ ನಿರ್ವಹಿಸಬಹುದು'' ಎಂದು ಲೇಖಕರು ಒತ್ತಿ ಹೇಳುತ್ತಾರೆ.

ಆತಂಕ ವ್ಯಕಪಡಿಸಿದ ಪ್ರೊ.ಲಿಂಡಾ ರಿಕ್ಟರ್:"ಫಾರ್ಮುಲಾ ಹಾಲಿನ ಉದ್ಯಮವು ತಮ್ಮ ಉತ್ಪನ್ನಗಳು, ಸಾಮಾನ್ಯ ಶಿಶುಗಳ ಆರೋಗ್ಯ ಮತ್ತು ಬೆಳವಣಿಗೆಯ ಸವಾಲುಗಳಿಗೆ ಪರಿಹಾರವಾಗಿದೆ ಎಂಬ ಕಡಿಮೆ ಪುರಾವೆಗಳನ್ನು ಸೂಚಿಸುವ ಮೂಲಕ ಕಳಪೆ ವಿಜ್ಞಾನವನ್ನು ಬಳಸುತ್ತದೆ. ಈ ಮಾರ್ಕೆಟಿಂಗ್ ತಂತ್ರಗಳು 1981ರ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ' ಎಂದು ದಕ್ಷಿಣ ಆಫ್ರಿಕಾದ ವಿಟ್ವಾಟರ್​ಸ್ರ್ಯಾಂಡ್ ವಿಶ್ವವಿದ್ಯಾಲಯದ ಪ್ರೊ.ಲಿಂಡಾ ರಿಕ್ಟರ್ ಹೇಳಿದರು.

ಮಾತೃತ್ವ ರಕ್ಷಣೆಯನ್ನು ಖಚಿತಪಡಿಸಬೇಕು: ಶೋಷಣೆಯ ಮಾರ್ಕೆಟಿಂಗ್ ತಂತ್ರಗಳು ಮತ್ತು ಉದ್ಯಮದ ಪ್ರಭಾವ ಕೊನೆಗೊಳಿಸಬೇಕಿದೆ. ಜೊತೆಗೆ ಕೆಲಸದ ಸ್ಥಳಗಳು, ಆರೋಗ್ಯ ರಕ್ಷಣೆ, ಸರ್ಕಾರಗಳು ವ್ಯಾಪಕವಾದ ಕ್ರಮಗಳು ಕೈಗೊಂಡು, ಮಕ್ಕಳಿಗೆ ಸ್ತನ್ಯಪಾನ ಮಾಡಲು ಬಯಸುವ ಮಹಿಳೆಯರಿಗೆ ಬೆಂಬಲಿಸಬೇಕಿದೆ ಎಂದು ಲೇಖಕರು ಹೇಳಿದರು. ಮಹಿಳೆಯರಿಗೆ ಕಾನೂನಿನಿಂದ ಖಾತರಿಪಡಿಸಲಾದ ಮಾತೃತ್ವ ರಕ್ಷಣೆಯನ್ನು ಖಚಿತಪಡಿಸಬೇಕು. ಈ ಅಗತ್ಯ ಕ್ರಮಗಳನ್ನು ಲೇಖಕರು ನಿರ್ದಿಷ್ಟವಾಗಿ ಎತ್ತಿ ತೋರಿಸುತ್ತಾರೆ. ವಿಶೇಷವಾಗಿ ಸ್ತನ್ಯಪಾನ ಬೆಂಬಲಿಸುವ ಹಿತದೃಷ್ಟಿಯಿಂದ ಡಬ್ಲ್ಯೂಎಚ್​ಒ ಶಿಫಾರಸು ಅನ್ವಯ ಕನಿಷ್ಠ ಆರು ತಿಂಗಳ ಅವಧಿವರೆಗೆ ಹೆರಿಗೆ ರಜೆ ನೀಡಬೇಕಿದೆ ಎಂದು ಲೇಖಕರು ಹೇಳುತ್ತಾರೆ.

ಇದನ್ನೂ ಓದಿ:ಅನಿಯಮಿತ ಋತುಚಕ್ರದ ಸಮಸ್ಯೆಯೇ?: ಇಲ್ಲಿದೆ ಪರಿಹಾರ..

ABOUT THE AUTHOR

...view details