ಕರ್ನಾಟಕ

karnataka

LIVE: 'ಯು ಐ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ

ETV Bharat / live-streaming

LIVE: 'ಯು ಐ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ - ಶಿವರಾಜ್​​ಕುಮಾರ್

<p>ಬೆಂಗಳೂರು : ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯಿಸಿ ಮತ್ತು ನಿರ್ದೇಶನ ಮಾಡುತ್ತಿರುವ 'ಯು ಐ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್​​ನಲ್ಲಿ ನಡೆಯುತ್ತಿದೆ‌. ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಹಾಗು ಕಿಚ್ಚ ಸುದೀಪ್ ಅವರು ಈ ಟೀಸರ್ ಲಾಂಚ್ ಮಾಡುತ್ತಿದ್ದಾರೆ‌‌.</p><p>ಏಳು ವರ್ಷಗಳ ಬಳಿಕ 'ಬುದ್ಧಿವಂತ' ಸಿನಿಮಾ ಖ್ಯಾತಿಯ ಉಪೇಂದ್ರ ನಿರ್ದೇಶಕನ ಕ್ಯಾಪ್‌ ಧರಿಸಿರುವ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಟೈಟಲ್ ಹಾಗೂ ಮೇಕಿಂಗ್​ನಿಂದ ಕ್ರೇಜ್ ಹುಟ್ಟಿಸಿರುವ ಯು ಐ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಮೂರು ನಾಮ ಇರುವ ಶೈಲಿಯಲ್ಲಿ ಯು ಐ ಶೀರ್ಷಿಕೆ ಇಟ್ಟು ಉಪೇಂದ್ರ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಬಳಿಕ ಸಿನಿಮಾಗೆ ನಾಯಕ ನಟಿ ಯಾರಾಗ್ತಾರೆ ಅಂತಾ ಸಿನಿಮಾರಂಗದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿತ್ತು.</p><p>ಪರಭಾಷಾ ನಟಿಯನ್ನು ಕರೆ ತರುತ್ತಾರೆ ಎಂದೂ ಹೇಳಲಾಗುತ್ತಿತ್ತು. ಬಳಿಕ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀಷ್ಮಾ ನಾಣಯ್ಯ ಅವರು ಉಪೇಂದ್ರ ಜೊತೆ ಸ್ಕ್ರೀನ್​ ಶೇರ್​ ಮಾಡಿದ್ದಾರೆ. ಈಗಾಗಲೇ ರೀಷ್ಮಾ ಏಕ್​​ ಲವ್​​ ಯಾ ಸಿನಿಮಾದಲ್ಲಿನ ನಟನೆಯಿಂದ ಗಮನ ಸೆಳೆದಿದ್ದಾರೆ. 'ಟಗರು' ಖ್ಯಾತಿಯ ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯ ಮನೋಹರ್ ಸಹಯೋಗದಲ್ಲಿ ಸುಮಾರು 100 ಕೋಟಿ ರೂ. ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.</p>

By ETV Bharat Karnataka Team

Published : Jan 8, 2024, 11:28 AM IST

Updated : Jan 8, 2024, 12:41 PM IST

Last Updated : Jan 8, 2024, 12:41 PM IST

ABOUT THE AUTHOR

...view details