ಕರ್ನಾಟಕ

karnataka

ETV Bharat / lifestyle

ಸಹೋದರ ಸಂಬಂಧಕ್ಕೆ 'ರಕ್ಷಾಬಂಧನ'... ಗಟ್ಟಿಯಾಗಲಿ ಭ್ರಾತೃತ್ವದ ಬೆಸುಗೆ

ಪ್ರತಿ ದಿನ ತರಗತಿಗಳಿಗೆ ಚಕ್ಕರ್​ ಹಾಕಿ, ಕ್ಯಾಂಪಸ್​ ಸುತ್ತಮುತ್ತ ಓಡಾಡಿಕೊಂಡಿದ್ದ ಕಾಲೇಜು ಹುಡುಗ್ರು, ನಿಮ್​ ಕಣ್ಣಿಗೆ ಕಾಣಿಸ್ತಿಲ್ಲಾ ಅಂದ್ರೆ, ಭ್ರಾತೃತ್ವ ಸಾರೋ ರಕ್ಷಾಬಂಧನ ಬಂದೇ ಬಿಡ್ತು ಅಂತಾ ಅರ್ಥ. ಹೌದು, ಜಗಳದಿಂದಲೇ ಸದಾ ಹತ್ತಿರವಿರೋ ಮುದ್ದು ಹಾಗೂ ಪೆದ್ದು ನಂಟೇ ಈ ಅಣ್ಣ-ತಂಗಿ ಸಂಬಂಧ. ಈ ಮಧುರ ಬೆಸುಗೆಯನ್ನು ನೂರ್ಕಾಲ ರಕ್ಷಿಸೋದೇ ಈ 'ರಕ್ಷಾಬಂಧನ'.

ರಕ್ಷಾಬಂಧನ

By

Published : Aug 15, 2019, 9:38 AM IST

ಹೈದರಾಬಾದ್​:ಭ್ರಾತೃತ್ವದ ಹಬ್ಬ 'ರಕ್ಷಾ ಬಂಧನ' ಬಂದೇ ಬಿಟ್ಟಿತು. ಜಗಳ, ತರ್ಲೆ, ಮುದ್ದಾಟ-ಗುದ್ದಾಟಗಳು ಎಷ್ಟೇ ಇದ್ದರೂ ಸದಾ ಅಂಟಿಕೊಂಡೇ ಇರುವ ಮುದ್ದು ಮನಸ್ಸಿನ ಅಣ್ಣ-ತಂಗಿಯರಿಗೆ ಹಾಗೂ ಅಕ್ಕ-ತಮ್ಮಂದಿರಿಗೆ ರಾಖಿ ಹಬ್ಬದ ಶುಭಾಶಯ.

ಅಣ್ಣ- ತಂಗಿ ಹಾಗೂ ಅಕ್ಕ-ತಮ್ಮಂದಿರ ಸಂಬಂಧ, ನೂರ್ಕಾಲ ಅಚಲವಾಗಿ ಉಳಿಯೋ ಭದ್ರ ಬೆಸುಗೆ. ತನ್ನ ತಂಗಿಯ ಹೆಜ್ಜೆ-ಹೆಜ್ಜೆಯಲ್ಲೂ ಯಶಸ್ಸನ್ನು ಕಾಣುವ ಅಣ್ಣ, ಆಕೆಗಾಗಿ ಸರ್ವ ತ್ಯಾಗಕ್ಕೂ ತಯಾರಾಗಿರುತ್ತಾನೆ. ಅಷ್ಟೇ ಅಲ್ಲ, ಆಕೆಯ ಜೀವನದುದ್ದಕ್ಕೂ ಶ್ರೀರಕ್ಷೆಯಾಗಿ ಇರುತ್ತಾನೆ. ರಕ್ಷಾ ಬಂಧನದಂದು ಮುದ್ದಿನ ತಂಗಿ ಅಣ್ಣನಿಗೆ ಕಟ್ಟುವ ರಾಖಿಯೇ ಅಣ್ಣನಿಗೆ ಶ್ರೀ ರಕ್ಷೆ ಅನ್ನೋದು ತಂಗಿಯ ನಂಬಿಕೆ. ಇದು ಬರೀ ನಂಬಿಕೆಯಷ್ಟೇ ಅಲ್ಲದೆ, ತಂಗಿ ಮತ್ತು ಅಣ್ಣನ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೊಂಡಿಯೂ ಆಗಿದೆ.

ಪ್ರತಿ ಮನೆಗೂ ಹೆಣ್ಣು ಅದೃಷ್ಟದ ಸಂಕೇತ. ಮನೆಯೊಂದರಲ್ಲಿ ಗೆಜ್ಜೆ ಸದ್ದು ಕೇಳಿಸುತ್ತಿದ್ದರೆ ಆ ಮನೆಯಲ್ಲಿರೋ ಸಂಭ್ರಮವೇ ಬೇರೆ. ಹೀಗಾಗಿ ಪ್ರತಿ ಮನೆಗಳಲ್ಲೂ ತಂಗಿಯ ಉಪಸ್ಥಿತಿ ಯಾವತ್ತೂ ಮುದ್ದಾಗಿರುತ್ತೆ. ಪ್ರತಿದಿನ ತನ್ನ ರಕ್ಷೆಗಾಗಿ ಇರುವ ಅಣ್ಣನನ್ನು ಆತನಿಗಿಂತಲೂ ಹೆಚ್ಚೆಚ್ಚು ಪ್ರೀತಿಸೋ ತಂಗಿ, ತನ್ನ ಸಹೋದರನ ನೋವನ್ನು ಎಂದಿಗೂ ಸಹಿಸಳು. ಅಣ್ಣನ ಸಂತೋಷದಲ್ಲಿ ತನ್ನ ಸಂತೋಷವನ್ನು ಕಾಣುವಾಕೆ ಯಾವುದೇ ಕಾರಣಕ್ಕೂ ತನ್ನ ಅಣ್ಣನನ್ನು ಬಿಟ್ಟಿರಲು ಒಪ್ಪಲ್ಲ.

ರಾಖಿ ಹಬ್ಬ ಬರೀ ಅಣ್ಣ- ತಂಗಿಯರ ಹಬ್ಬವಲ್ಲ. ಇದು ಅಕ್ಕ-ತಮ್ಮಂದಿರ ಬಾಂಧವ್ಯದ ಹಬ್ಬವೂ ಹೌದು. ಪ್ರತಿ ತಮ್ಮಂದಿರ ಎರಡನೇ ಅಮ್ಮ ಅಕ್ಕ. ತನ್ನ ತಮ್ಮ ಇಡೋ ಪ್ರತಿ ಹೆಜ್ಜೆಯನ್ನೂ ತಿದ್ದುವಾಕೆ. ಜಗಳದಿಂದಲೇ ಮತ್ತಷ್ಟು ಹತ್ತಿರವಾಗೋ ಸಂಬಂಧ ಇದು. ಎಷ್ಟೇ ಜಗಳವಾಡಿದರೂ ಪ್ರತಿ ತಮ್ಮನ ಮೊದಲ ಸ್ನೇಹಿತೆ. ತನ್ನ ಗೊಂದಲಗಳಿಗೆ ಸಮರ್ಥ ಉತ್ತರ ನೀಡುವಾಕೆ ಕೂಡಾ ಅಕ್ಕನೇ.

ಏನೇ ಇರ್ಲಿ. ಅಣ್ಣ- ತಂಗಿ ಹಾಗೂ ಅಕ್ಕ-ತಮ್ಮಂದಿರ ಸಂಬಂಧದಲ್ಲಿ ರಕ್ತ ಸಂಬಂಧವೆಂಬ ಬಿಗಿ ಕೊಂಡಿಗಿಂತ, ಭಾವನಾತ್ಮಕ ನಂಟು ಹೆಚ್ಚು ಗಟ್ಟಿ. ರಕ್ತ ಸಂಬಂಧವಲ್ಲದೇ, ಹೃದಯದಿಂದ, ಹತ್ತಿರವಾಗೋ ಅದೆಷ್ಟೋ ಅಕ್ಕ-ತಮ್ಮಂದಿರು ಹಾಗೂ ಅಣ್ಣ- ತಂಗಿಯರು ನಮ್ಮ ಕಣ್ಣ ಮುಂದೆ ಎದೆಷ್ಟೋ ಜನ ಕಾಣಸಿಗುತ್ತಾರೆ. ಈ ರಕ್ಷಾ ಬಂಧನ ಪ್ರತಿ ಸಹೋದರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಈ ಮಧುರ ಸಂಬಂಧ ನೂರ್ಕಾಲವಿರಲಿ. ರಾಜ್ಯದ ಜನತೆಗೆ 'ಈಟಿವಿ ಭಾರತ' ಟೀಂನಿಂದ ರಕ್ಷಾ ಬಂಧನದ ಹಾರ್ದಿಕ ಶುಭಾಶಯ.

ABOUT THE AUTHOR

...view details