ಕರ್ನಾಟಕ

karnataka

ETV Bharat / lifestyle

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ... ಕೊರೊನಾ ದೂರವಿಡಿ..

ರೋಗ ಬಂದ ಮೇಲೆ ಮಾತ್ರೆ ಸೇವಿಸುವುದಕ್ಕಿಂತ ರೋಗ ಬರದಂತೆ ನೋಡಿಕೊಳ್ಳುವುದೇ ಮೇಲು. ಉತ್ತಮ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಲ್ಲಿ ರೋಗ ಬರದಂತೆ ತಡೆಯಬಹುದು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಉತ್ತಮ ಜೀವನ ಶೈಲಿಯಿಂದ ಎಲ್ಲರೂ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದು.

Boost Immunity to Fight Corona
Boost Immunity to Fight Corona

By

Published : Mar 31, 2020, 6:42 PM IST

ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ ಅದು ಬರದಂತೆ ತಡೆಯುವುದು ಬಹಳ ಮುಖ್ಯ. ಈಗ ಎಲ್ಲೆಲ್ಲೂ ಕೊರೊನಾ ವೈರಸ್​ ಭೀತಿ ತಾಂಡವವಾಡುತ್ತಿರುವಾಗ ಈ ಮಾತಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಕೊರೊನಾ ಬಾರದಿರುವಂತೆ ನಾವು ಯಾವಾಗಲೂ ಕೈಗಳನ್ನು ತೊಳೆಯುವುದು, ಮುಖ ಮುಟ್ಟಿಕೊಳ್ಳದಿರುವುದು ಹಾಗೂ ಒಟ್ಟಾರೆಯಾಗಿ ಶುಚಿಯಾಗಿರುವುದು ಮುಂತಾದ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಇವೆಲ್ಲ ಬಾಹ್ಯ ಶುದ್ಧೀಕರಣ ಕ್ರಮಗಳು. ಹಾಗೆಯೇ ದೇಹವನ್ನು ಆಂತರಿಕವಾಗಿ ಬಲಿಷ್ಠಗೊಳಿಸುವುದು ಹಾಗೂ ಆ ಮೂಲಕರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡಲ್ಲಿ ರೋಗಗಳು ನಮ್ಮ ಬಳಿ ಸುಳಿಯದಂತೆ ಮಾಡಬಹುದು. ಹಾಗಾದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು, ಯಾವೆಲ್ಲ ಆಹಾರ ಸೇವಿಸಬೇಕು ಎಂಬುದನ್ನು ತಿಳಿಯೋಣ.

"ನಾವೇನು ಸೇವಿಸುತ್ತೇವೆಯೋ ಅದೇ ನಾವಾಗುತ್ತೇವೆ. ನಮ್ಮ ಸಂಪೂರ್ಣ ಆರೋಗ್ಯ ವ್ಯವಸ್ಥೆಯಲ್ಲಿ ಆಹಾರದ ಪಾತ್ರ ಬಹಳ ಪ್ರಮುಖವಾಗಿದೆ" ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞ ಡಾ. ಲೆಹರಿ ಸುರ್ಪನೇನಿ.

"ಕೊರೊನಾದಂಥ ವೈರಸ್​ಗಳು ತೇವಾಂಶ ಭರಿತ ಪ್ರದೇಶದಲ್ಲಿ ಬೆಳೆಯುವುದು ಹೆಚ್ಚು. ಹೀಗಾಗಿ ನಿಯಮಿತವಾಗಿ 15 ರಿಂದ 30 ಸೆಕೆಂಡುಗಳವರೆಗೆ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು. ಹೊಲಸು ಪದಾರ್ಥಗಳನ್ನು ಮುಟ್ಟಬಾರದು" ಎಂದು ಅವರು ಸಲಹೆ ನೀಡುತ್ತಾರೆ.

ಸೀನುವಿಕೆಯಿಂದ ವೈರಸ್​ ಬಹು ಬೇಗನೆ ಇತರರಿಗೆ ಹರಡುತ್ತದೆ. ಬಹುತೇಕರು ಸೀನುವಾಗ ಮೂಗಿಗೆ ಕೈ ಅಡ್ಡ ಹಿಡಿದು ನಂತರ ಅದೇ ಕೈಯಿಂದ ಬೇರೆ ವಸ್ತುಗಳನ್ನು ಮುಟ್ಟುತ್ತಾರೆ. ಕೊರೊನಾ ವೈರಸ್​ ಹರಡುತ್ತಿರುವ ಇಂಥ ಸಂದರ್ಭದಲ್ಲಿ ಈ ಕೆಟ್ಟ ಅಭ್ಯಾಸಗಳು ಬಹಳ ಅಪಾಯಕಾರಿ. ಆದ್ದರಿಂದ ಸೀನುವಾಗ ನ್ಯಾಪ್​ಕಿನ್​ ಅಥವಾ ಕರ್ಚೀಫ್​ ಬಳಸುವುದು ಸೂಕ್ತ, ಆದರೆ ಅವನ್ನು ಮತ್ತೊಮ್ಮೆ ಒಗೆದ ನಂತರವೇ ಪುನಃ ಬಳಸಬಹುದು.

ಇನ್ನು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳ ಕಡೆ ಗಮನಿಸಿದಲ್ಲಿ, ಕಡು ವರ್ಣದ ಹಣ್ಣು ದಾಳಿಂಬೆ, ಕಲ್ಲಂಗಡಿ, ಮಾವು ಹಾಗೂ ಮೊಳಕೆ ಕಾಳುಗಳು, ಕಂದು ಅಕ್ಕಿ ಇವುಗಳನ್ನು ನಿಯಮಿತವಾಗಿ ಸೇವಿಸಿದಲ್ಲಿ ರೋಗ ನಿರೋಧಕ ಶಕ್ತಿ ತಾನಾಗಿಯೇ ಹೆಚ್ಚುತ್ತದೆ.

ಆಗಾಗ ನಮ್ಮ ಶರೀರದ ವಿಟಮಿನ್​ ಮಟ್ಟವನ್ನು ಚೆಕ್ ಮಾಡಿಸಿ, ದೇಹದಲ್ಲಿ ಯಾವ ವಿಟಮಿನ್​ ಕೊರತೆ ಇರುವುದೋ ಅಂಥ ಪೋಷಕಾಂಶಗಳನ್ನು ಹೆಚ್ಚುವರಿಯಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು. ಇನ್ನು ಸೂರ್ಯನ ಶಾಖಕ್ಕೆ ಮೈಯೊಡ್ಡುವುದು ಕೂಡ ಅತ್ಯಂತ ಅಗತ್ಯ ಎಂಬುದು ಗಮನದಲ್ಲಿರಲಿ.

ಉತ್ತಮ ಆರೋಗ್ಯಕ್ಕೆ ಪಾಲಿಸಬೇಕಾದ ಸೂತ್ರಗಳು:

- ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುವುದು

- ಸೀನುವಾಗ ನ್ಯಾಪ್​ಕಿನ್​ ಅಥವಾ ಬಟ್ಟೆ ಉಪಯೋಗಿಸುವುದು

- ಕಡು ವರ್ಣದ ಹಣ್ಣು, ತರಕಾರಿಗಳನ್ನು ಸೇವಿಸುವುದು

- ಆಗಾಗ ಬಿಸಿಲಿಗೆ ಮೈಯೊಡ್ಡುವುದು

- ರಸ್ತೆ ಬದಿಯಲ್ಲಿ ಮಾರುವ ತರಕಾರಿ ಕೊಳ್ಳದಿರುವುದು

- ಆಹಾರದ ಜೊತೆ ಹಸಿ ತರಕಾರಿ, ಹಣ್ಣು ಸೇವಿಸುವುದು

- ಅಸ್ವಚ್ಛ ವಾತಾವರಣದಲ್ಲಿ ತಯಾರಿಸಿದ ಆಹಾರ ಸೇವಿಸದಿರುವುದು

- ಮೊಳಕೆಕಾಳು, ಡ್ರೈ ಫ್ರೂಟ್ಸ್​ ಸೇವನೆ ಹಾಗೂ ಹೆಚ್ಚು ನೀರು ಕುಡಿಯುವುದು

- ಜ್ಯೂಸ್​ಗಿಂತ ತಾಜಾ ಹಣ್ಣು ಸೇವಿಸುವುದು

- ದೇಹದಲ್ಲಿನ ವಿಟಮಿನ್​ ಮಟ್ಟವನ್ನು ಆಗಾಗ ತಪಾಸಣೆ ಮಾಡಿಸುವುದು

ABOUT THE AUTHOR

...view details