ನವದೆಹಲಿ:ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 5-G ತಂತ್ರಜ್ಞಾನದ ಮೊಬೈಲ್ಗಳು ಲಗ್ಗೆ ಇಟ್ಟಿವೆ. ಆದರೆ, ದರ ಸಮರದಲ್ಲಿ ತೀವ್ರ ಪೈಪೋಟಿಯಿದ್ದು, ಈ ಸಾಲಿಗೀಗ ರಿಯಲ್ಮಿ ಜಿಟಿ ಮೊಬೈಲ್ ಸೇರಿಕೊಂಡಿದೆ. ರಿಯಲ್ಮಿ ಬೊಬೈಲ್ಸ್ ಇದೀಗ ತನ್ನ ಫ್ಲಾಗ್ಶಿಪ್ ಸೆಗ್ಮೆಂಟ್ನಲ್ಲಿ ಹೊಸ ಫೋನ್ ಮಾರುಕಟ್ಟೆಗೆ ತಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 888 ಚಿಪ್ಸೆಟ್ ಮೂಲಕ ಮಾರುಕಟ್ಟೆಗೆ ಪರಿಚಯಿಸಿದೆ. ಇದರರ್ಥ ಈ ಮೊಬೈಲ್ ಫೋನ್ 5-Gಯಲ್ಲಿ ಕಾರ್ಯ ನಿರ್ವಹಿಸಲಿದೆ.
ರಿಯಲ್ಮಿ ಮೊಬೈಲ್ಸ್ನಿಂದ ಜಿಟಿ 5ಜಿ ಫೋನ್ ಆದರೆ, ಭಾರತದಲ್ಲಿ ಈ ಮೊಬೈಲ್ ಇನ್ನೂ ಬಿಡುಗಡೆಯಾಗಬೇಕಿದೆ. ಈಗಾಗಲೇ ಪೋಲೆಂಡ್, ಸ್ಪೈನ್, ರಷ್ಯಾ, ಥಾಯ್ಲೆಂಡ್, ಸೇರಿ ಹಲವೆಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಹೊಸ ಮೊಬೈಲ್ನಲ್ಲಿ 12 ಜಿಬಿ ಱಮ್ ಮತ್ತು 256 ಜಿಟಿ ಸ್ಟೊರೇಜ್ ಸಾಮರ್ಥ್ಯ ನೀಡಲಾಗಿದೆ. ಇದರಿಂದ ಸಾವಿರಾರು ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಿಡಬಹುದು.
ಸದ್ಯ ಮಾರಕಟ್ಟೆಯಲ್ಲಿ ಮೂರು ಮಾದರಿಯ ಬಣ್ಣದಲ್ಲಿ ಫೋನ್ ಲಭ್ಯವಾಗುತ್ತಿದೆ. ಸಿಲ್ವರ್, ಡ್ಯಾಶಿಂಗ್ ನೀಲಿ ಮತ್ತು ರೇಸಿಂಗ್ ಹಳದಿ ಬಣ್ಣದ ಫೋನ್ಗಳಿಗೆ ಬಾರಿ ಬೇಡಿಕೆ ಬಂದಿದೆ. ಬಾಕ್ಸ್ನಲ್ಲಿಯೇ 65 ವ್ಯಾಟ್ ಚಾರ್ಜರ್ ಗ್ರಾಹಕರ ಕೈಸೇರಲಿದೆ.
ಈ ಜಿಟಿ ಮೊಬೈಲ್ನ ಹೈ -ಎಂಡ್ ಮಾದರಿಗೆ 599 ಯುರೋ ಬೆಲೆ ನಿಗದಿಯಾಗಿದೆ. ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 53 ಸಾವಿರ ರೂ. ಆಗುತ್ತದೆ. ಇದರ ಇನ್ನೊಂದು ಅವತರಣಿಕೆಯಾದ 8 ಜಿಬಿ ಱಮ್ ಮತ್ತು 128ಜಿಬಿ ಸ್ಟೊರೇಜ್ ಹೊಂದಿರುವ ಮೊಬೈಲ್ನ ಬೆಲೆ 369 ಯುರೋ ಆಗಿದ್ದು, ಭಾರತೀಯ ಮಾರುಕಟ್ಟೆಗೆ ಹೋಲಿಸಿದರೆ ಸುಮಾರು 30 ಸಾವಿರ ಆಸುಪಾಸಿಗೆ ಸಿಗಲಿದೆ.
ಇದಿಷ್ಟೆ ಅಲ್ಲದೇ ಈ ಮೊಬೈಲ್ 6.43 ಇಂಚಿನ 120 ಹರ್ಟ್ಸ್ ಜೊತೆ ಸ್ಯಾಮ್ಸಂಗ್ ಸೂಪರ್ ಆಮೊಲೆಡ್ ಡಿಸ್ಪ್ಲೆ ಹೊಂದಿದೆ. ಇದು ಬೆಳಕಿನಲ್ಲೂ ಅತೀ ಹೆಚ್ಚು ಪ್ರಕಾಶವಾಗಿ ಡಿಸ್ಪ್ಲೆ ಕಾಣುವಂತೆ ಮಾಡುತ್ತದೆ. ಕ್ಯಾಮರಾ ಕಡೆ ಬಂದರೆ ಹಿಂಬದಿಯಲ್ಲಿ 64 ಎಂಪಿ ತ್ರಿಪಲ್ ಕ್ಯಾಮರಾ ಸೆಟ್ಅಪ್ ಜೊತೆ ಬ್ರ್ಯಾಂಡ್ ನ್ಯೂ ವೈಡ್ ಆ್ಯಂಗಲ್ ನೈಟ್ ಶಾಟ್ ಕ್ಯಾಮರಾ ಸಹ ಲಭ್ಯವಿದೆ. ಜೊತೆಗೆ ಬಾಕ್ಸ್ನಲ್ಲಿಯೇ ಆ್ಯಂಡ್ರೋಯ್ಡ್ 12 ಬಿಟಾ ವರ್ಷನ್ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಅಪ್ಡೇಟ್ ಸಿಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.