ನವದೆಹಲಿ:ಜಾಗತಿಕವಾಗಿ, 5ಜಿ ಮೊಬೈಲ್ ಚಂದಾದಾರಿಕೆಗಳು 2021ರ ಅಂತ್ಯದ ವೇಳೆಗೆ 580 ಮಿಲಿಯನ್ ಮೀರಲಿದೆ ಎಂದು ಸ್ವೀಡಿಷ್ ದೂರಸಂಪರ್ಕ ಸಂಸ್ಥೆ ಎರಿಕ್ಸನ್ ವರದಿ ತಿಳಿಸಿದೆ. ಭಾರತದಲ್ಲಿ ಪ್ರತಿ ಸ್ಮಾರ್ಟ್‌ಫೋನ್ ಬಳಕೆದಾರರ ಸರಾಸರಿ ದಟ್ಟಣೆ 2019ರಲ್ಲಿ ತಿಂಗಳಿಗೆ 13 ಜಿಬಿಯಿಂದ 2020ರಲ್ಲಿ ತಿಂಗಳಿಗೆ 14.6 ಜಿಬಿಗೆ ಏರಿದೆ.
ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ, ಭಾರತದ ಪ್ರತಿ ಸ್ಮಾರ್ಟ್‌ಫೋನ್‌ನ ಸರಾಸರಿ ದಟ್ಟಣೆಯು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಮತ್ತು 2026ರಲ್ಲಿ ತಿಂಗಳಿಗೆ ಸುಮಾರು 40ಜಿಬಿವರೆಗೆ ಬೆಳೆಯುವ ನಿರೀಕ್ಷೆಯಿದೆ.
"ಕೋವಿಡ್-19ನಿಂದಾಗಿ ಹೆಚ್ಚು ಹೆಚ್ಚು ಗ್ರಾಹಕರು ಡಿಜಿಟಲ್ ಸೇವೆಗಳನ್ನು ಅವಲಂಬಿಸಿರುವುದರಿಂದ ಭಾರತದ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಿದೆ. ಡಿಜಿಟಲ್ ಪಾವತಿಗಳು, ದೂರಸ್ಥ ಆರೋಗ್ಯ ಸಮಾಲೋಚನೆಗಳು, ಆನ್‌ಲೈನ್ ಚಿಲ್ಲರೆ ವ್ಯಾಪಾರ ಅಥವಾ ವಿಡಿಯೋ ಕಾನ್ಫರೆನ್ಸಿಂಗ್, ವ್ಯವಹಾರ ಅಥವಾ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಜನ ಡಿಜಿಟಲ್ ಸೇವೆಯನ್ನು ಅವಲಂಬಿಸಿದ್ದಾರೆ" ಎಂದು ಎರಿಕ್ಸನ್ ಇಂಡಿಯಾ ಮುಖ್ಯಸ್ಥ ನಿತಿನ್ ಬನ್ಸಾಲ್ ಹೇಳಿದರು.
5ಜಿ ಸಾಮರ್ಥ್ಯದ ಸಾಧನವನ್ನು ಹೊಂದಿರುವ 5ಜಿ ಚಂದಾದಾರಿಕೆಗಳು 2021ರ ಮೊದಲ ತ್ರೈಮಾಸಿಕದಲ್ಲಿ 70 ಮಿಲಿಯನ್ ಹೆಚ್ಚಾಗಿದೆ.
2026ರ ಅಂತ್ಯದ ವೇಳೆಗೆ ಸುಮಾರು 3.5 ಬಿಲಿಯನ್ 5 ಜಿ ಚಂದಾದಾರಿಕೆಗಳು ಮತ್ತು 60 ಪ್ರತಿಶತ 5ಜಿ ವ್ಯಾಪ್ತಿಯನ್ನು ಅಂದಾಜು ಮಾಡಲಾಗಿದೆ.