ಬೆಂಗಳೂರು: ಒಂದೆಡೆ ಐಫೋನ್ಗಳಿಗೆ ವಿಶ್ವದೆಲ್ಲೆಡೆ ಬೇಡಿಕೆ ನಿಧಾನವಾಗಿ ಕುಸಿಯುತ್ತಿರುವ ಬೆನ್ನಲ್ಲೇ ಆ್ಯಪಲ್ ಸಂಸ್ಥೆ ಭಾರತದಲ್ಲಿ ತನ್ನ ಐಫೋನ್ ತಯಾರಿಕಾ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ಭಾರತದಲ್ಲಿ ದೀರ್ಘಕಾಲಿಕ ಸಂಬಂಧವನ್ನು ಬೆಳೆಸುವ ಹಾಗೂ ಪ್ರಾದೇಶಿಕ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಐಫೋನ್ 7 ತಯಾರಿಕಾ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ಆ್ಯಪಲ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಐಫೋನ್ ವಿನ್ಯಾಸಗೊಳಿಸುವ ಸಂಸ್ಥೆ ವಿಸ್ಟ್ರಾನ್ ಕಳೆದ ವರ್ಷವೇ ಕೋಲಾರದ ನರಸುಪುರ ಕೈಗಾರಿಕಾ ಪ್ರದೇಶದಲ್ಲಿ ಐಫೋನ್ ತಯಾರಿಕಾ ಕೇಂದ್ರ ಸ್ಥಾಪನೆಗಾಗಿ ಮೂರು ಸಾವಿರ ಕೋಟಿ ಹೂಡಿಕೆ ಮಾಡಿದೆ.
ನರಸಾಪುರದಲ್ಲಿ ವಿಸ್ಟ್ರಾನ್ಗಾಗಿ 43 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಈ ಕಂಪನಿಯಲ್ಲಿ ಹತ್ತುಸಾವಿರ ಮಂದಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.