ಶಿವಮೊಗ್ಗ: ನಗರದ ನಿವಾಸಿಯೊಬ್ಬ ಕಳೆದ ರಾತ್ರಿ ನಾಪತ್ತೆಯಾಗಿದ್ದು ಆತ ಬಿಟ್ಟು ಹೋದ ಬೈಕ್ ಬಳಿ ರಕ್ತದ ಕಲೆಗಳು ಪತ್ತೆಯಾಗಿದೆ. ಹೊಸಮನೆ ನಿವಾಸಿ ವಿನಯ್ ಎಂಬುವನು ಕಾಣೆಯಾಗಿದ್ದು ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಯುವಕ ಕೊಲೆಯಾದನಾ? ಶಂಕೆ ವ್ಯಕ್ತಪಡಿಸಿದ ಸಹೋದರ - Missing
ಯುವಕನೋರ್ವ ನಾಪತ್ತೆಯಾಗಿದ್ದು ಆತ ಬಿಟ್ಟು ಹೋದ ಬೈಕ್ ಬಳಿ ರಕ್ತದ ಕಲೆಗಳು ಕಂಡು ಬಂದಿವೆ. ಹಾಗಾಗಿ ಈತನ ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿರುವ ವಿನಯ್ ಸಹೋದರ ರವಿ, ನನ್ನ ಅಣ್ಣ ಕಾಣೆಯಾದ ಸ್ಥಳದಲ್ಲಿ ಆತನ ಬೈಕ್ ಪತ್ತೆಯಾಗಿದೆ. ಅಲ್ಲದೆ ಸ್ಥಳದಲ್ಲಿ ರಕ್ತ ಬಿದ್ದಿದ್ದು ರೌಡಿ ಶೀಟರ್ ಕಡ್ಡಿ ಮಧು ಎಂಬಾತ ಕೊಲೆ ಮಾಡಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ತೀವ್ರ ಶೋಧ ನಡೆಸುತ್ತಿದ್ದಾರೆ. ಕಡ್ಡಿ ಮಧು ಹಾಗೂ ವಿನಯ್ ಹೊಸಮನೆ ನಿವಾಸಿಗರಾಗಿದ್ದು ಇಬ್ಬರು ಸ್ನೇಹಿತರಾಗಿದ್ದರು. ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಕೊಲೆಗೆ ಕಾರಣವಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ