ಕರ್ನಾಟಕ

karnataka

ETV Bharat / jagte-raho

ಡಾರ್ಲಿಂಗ್​ ಬೈಕ್​ ನಿಲ್ಸು, ಹೆಲ್ಮೆಟ್​ ತೆಗಿ... ಮರಳು ಮಾಡಿ ಲವರ್​​ ಮೇಲೆ ಆ್ಯಸಿಡ್​ ಎರಚಿದ ಚೆಲುವೆ!

ಬೈಕ್​ ನಿಲ್ಲಿಸಿ, ಲವರ್​ ಹಾಕಿಕೊಂಡಿರುವ ಹೆಲ್ಮೆಟ್​ ತೆಗಿಸಿ, ಆತನ ಮೇಲೆ ಯುವತಿ ಆ್ಯಸಿಡ್​ ಎರಚಿರುವ ಘಟನೆ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡುಕ ಹುಟ್ಟಿಸಿದೆ.

By

Published : Jun 17, 2019, 1:38 PM IST

Updated : Jun 17, 2019, 2:15 PM IST

ಲವರ್​ ಮೇಲೆ ಆ್ಯಸಿಡ್​ ಎರಚಿದ ಯುವತಿ

ದೆಹಲಿ: ಲವ್​ ಫೇಲಾದ್ರೆ, ಯುವತಿ ಮದುವೆಗೆ ಒಪ್ಪದಿದ್ದಾಗ ಅವರ ಮೇಲೆ ಭಗ್ನ ಪ್ರೇಮಿಗಳು ಆ್ಯಸಿಡ್​ ಎರಚುತ್ತಿರುವುದು ತಿಳಿದ ವಿಷಯ. ಆದ್ರೆ ಇಲ್ಲಿ ಉಲ್ಟಾ ಹೊಡಿದಿದೆ. ತನ್ನ ಡಾರ್ಲಿಂಗ್​ ಮೇಲೆ ಯುವತಿಯೇ ಆ್ಯಸಿಡ್​ ಎರಚಿ ಹೈಡ್ರಾಮಾ ನಡೆಸಿದ್ದಾಳೆ.

ಈ ಘಟನೆ ಜೂನ್​ 11ರಂದು ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಕಾಸ್​ಪುರಿಯ ಯುವತಿಯೊಬ್ಬಳ ಮೂರು ವರ್ಷದಿಂದ ಯುವಕನೊಬ್ಬನನ್ನು ಲವ್​ ಮಾಡುತ್ತಿದ್ದಳು. ಮದುವೆ ಆಗೋಣ ಅಂತಾ ಯುವತಿ ತನ್ನ ಲವರ್​ಗೆ ಹೇಳಿದ್ದಾಳೆ. ಈ ವಿಷಯವಾಗಿ ಇಬ್ಬರ ಮಧ್ಯೆ ಕಲಹಗಳು ನಡೆದಿದ್ದು, ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಆತನನ್ನು ಹೇಗಾದ್ರೂ ಮಾಡಿ ಪಡೆಯಬೇಕೆಂಬ ಉದ್ದೇಶ ಮನದಾಳಕ್ಕೆ ನಾಟಿದೆ. ಆತನ ಮೇಲೆ ಆ್ಯಸಿಡ್​ ಎರಚಿದ್ರೆ ನನ್ನ ಬಿಟ್ಟು ಹೋಗುವುದಿಲ್ಲ ಎಂಬ ಕಲ್ಪನೆ ಆಕೆದ್ದಾಗಿದ್ದು, ಅದೇ ರೀತಿ ನಡೆಸಲು ಯುವತಿ ಸ್ಕೆಚ್​ ಹಾಕಿದ್ದಾಳೆ.

ಇದೇ ತಿಂಗಳು 11ರಂದು ಇಬ್ಬರು ಲಾಂಗ್​ ಡ್ರೈವ್​ಗೆ ಹೋಗಿದ್ದಾರೆ. ತನ್ನ ಲವರ್​ಗೆ ಬೈಕ್​ ನಿಲ್ಲಿಸಲು ಹೇಳಿದ್ದಾಳೆ. ಬಳಿಕ ಹೆಲ್ಮೆಟ್​ ತೆಗೆಸಿದ್ದಾಳೆ. ಹೆಲ್ಮೆಟ್​ ತೆಗೆಯುತ್ತಿದ್ದಂತೆ ಯುವತಿ ಆತನ ಮೇಲೆ ಆ್ಯಸಿಡ್​ ಎರಚಿದ್ದಾಳೆ. ಬಳಿಕ ತಾನೂ ಸಹ ಮೈಮೆಲೆ ಆ್ಯಸಿಡ್​ ಎರಚಿಕೊಂಡಿದ್ದಾಳೆ. ನಂತರ ನಮ್ಮ ಮೇಲೆ ಯಾರೋ ಆ್ಯಸಿಡ್​ ದಾಳಿ ನಡೆಸಿ ಪರಾರಿಯಾದರು ಎಂದು ಯುವತಿ ಹೈಡ್ರಾಮ ಮಾಡಿದ್ದಾಳೆ.

ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ರು. ಸ್ಥಳೀಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿಲ್ಲ. ಬಳಿಕ ಯುವಕನನ್ನು ವಿಚಾರಿಸಿದ್ದಾರೆ.

ನಾವು ಬೈಕ್​ ಮೇಲೆ ಹೋಗುತ್ತಿದ್ದೆವು. ನನ್ನ ಹುಡುಗಿ ಬೈಕ್​ ನಿಲ್ಲಿಸಿ ಹೆಲ್ಮೆಟ್​ ತೆಗೆಯುವಂತೆ ಹೇಳಿದಳು. ಹೆಲ್ಮೆಟ್​ ತೆಗೆಯುತ್ತಿದ್ದಂತೆ ಹಿಂಬದಿಯಿಂದ ಯಾರೋ ಆ್ಯಸಿಡ್​ ಎರಚಿದರು ಅಂತಾ ಯುವಕ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಬಳಿಕ ಯುವತಿಯನ್ನು ತಮ್ಮದೇ ಸ್ಟೈಲ್​ನಲ್ಲಿ ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ. ಇನ್ನು ಪೊಲೀಸರು ಯುವತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 17, 2019, 2:15 PM IST

ABOUT THE AUTHOR

...view details