ಕರ್ನಾಟಕ

karnataka

ETV Bharat / jagte-raho

ಲಖನೌ ವಿಧಾನ ಭವನದ ಎದುರೇ ಬೆಂಕಿ ಹಚ್ಚಿಕೊಂಡ ಮಹಿಳೆ - ಮಹಾರಾಜ್​ಗಂಜ್ ಸುದ್ದಿ

ಉತ್ತರ ಪ್ರದೇಶದ ಲಖನೌದಲ್ಲಿನ ವಿಧಾನ ಭವನದ ಎದುರೇ ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ.

self-immolation
ಬೆಂಕಿ ಹಚ್ಚಿಕೊಂಡ ಮಹಿಳೆ

By

Published : Oct 13, 2020, 2:46 PM IST

Updated : Oct 13, 2020, 3:01 PM IST

ಲಖನೌ:ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿನ ವಿಧಾನ ಭವನದ ಎದುರು ನಡೆದಿದೆ.

ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ವಿಧಾನ ಭವನದ ಬಳಿ ಇದ್ದ ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಖನೌ ವಿಧಾನ ಭವನದ ಎದುರೇ ಬೆಂಕಿ ಹಚ್ಚಿಕೊಂಡ ಮಹಿಳೆ

ಸಂತ್ರಸ್ತೆ ಮಹಾರಾಜ್​ಗಂಜ್​ ಮೂಲದ 35 ವರ್ಷದ ಮಹಿಳೆಯಾಗಿದ್ದು, ಇವರು ಮೊದಲು ಅಖಿಲೇಶ್​ ತಿವಾರಿ ಎಂಬವರೊಂದಿಗೆ ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದರು. ಬಳಿಕ ಆಸಿಫ್​ ಎಂಬವರೊಂದಿಗೆ ಮತ್ತೊಂದು ಮದುವೆಯಾಗಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು. ಕೆಲಸಕ್ಕೆಂದು ಆಸಿಫ್ ದುಬೈ​ಗೆ ತೆರಳಿದ್ದು, ಈತನ ಕುಟುಂಬಸ್ಥರು ಮಹಿಳೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.

ಈ ಸಂಬಂಧ ಮಹಾರಾಜ್​ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Last Updated : Oct 13, 2020, 3:01 PM IST

ABOUT THE AUTHOR

...view details