ಕರ್ನಾಟಕ

karnataka

ETV Bharat / jagte-raho

ಕುಡಿದು ಕಾಟ ಕೊಡ್ತಿದ್ದ ಪತಿಗೆ ಮದ್ಯದಲ್ಲಿ ಕೀಟನಾಶಕ ಹಾಕಿ ಕೊಂದಳು ಪತ್ನಿ.. ಆದರೆ, ಆ ಬಡಪಾಯಿ..

ದಿನೇದಿನೆ ಕಿರುಕುಳ ಹೆಚ್ಚಾಗಿದ್ದು, ಈ ನರಕದಿಂದ ಹೊರಬರಲು ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಪತ್ನಿ ತಪ್ಪೊಪ್ಪಿಕೊಂಡಿದ್ದಾಳೆ..

he wife killed her husband with pesticide mixed in alcohol
ಮದ್ಯದಲ್ಲಿ ಕೀಟನಾಶಕ ಬೆರೆಸಿ ಕುಡುಕ ಪತಿಯನ್ನು ಕೊಂದ ಪತ್ನಿ

By

Published : Sep 27, 2020, 6:11 PM IST

ವಿಶಾಖಪಟ್ಟಣಂ :ಕೀಟನಾಶಕ ಮಿಶ್ರಿತ ಮದ್ಯ ಕುಡಿದು ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಆಂಧ್ರದ ವಿಶಾಖಪಟ್ಟಣಂ ಜಿಲ್ಲೆಯ ಭೀಮಾವರಂ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಇದು ಕೊಲೆ ಎಂಬುದು ತಿಳಿದು ಬಂದಿದೆ.

ಜನಮುರಿ ಬಾಲರಾಜು ಎಂಬಾತ 10 ವರ್ಷದ ಹಿಂದೆ ಮಲ್ಯಮ್ಮ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆರಂಭದಲ್ಲಿ ಹೆಂಡತಿಯನ್ನು ಚೆನ್ನಾಗೇ ನೋಡಿಕೊಂಡ ಬಾಲರಾಜು ಬಳಿಕ ಕುಡಿದು ಬಂದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾರಂಭಿಸಿದ್ದಾನೆ. ಇದರಿಂದ ನೊಂದ ಮಲ್ಯಮ್ಮ ಮದ್ಯದಲ್ಲಿ ಕೀಟನಾಶಕ ಬೆರೆಸಿ ಗಂಡನಿಗೆ ನೀಡಿದ್ದಾಳೆ. ಬಾಲರಾಜು ತನ್ನ ಸ್ನೇಹಿತ ವೆಂಕಟರತ್ನಂ ನಾಯ್ಡು ಜೊತೆ ಮದ್ಯ ಸೇವಿಸಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.

ದಿನೇದಿನೆ ಕಿರುಕುಳ ಹೆಚ್ಚಾಗಿದ್ದು, ಈ ನರಕದಿಂದ ಹೊರಬರಲು ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಮಲ್ಯಮ್ಮ ಹೇಳಿದ್ದಾಳೆ. ತಪ್ಪೊಪ್ಪಿಕೊಂಡ ಆರೋಪಿ ಮಲ್ಯಮ್ಮನನ್ನು ಕೊಯ್ಯೂರು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details