ನಿಜಾಮಾಬಾದ್:ಇಬ್ಬರು ಮಕ್ಕಳು ಕಾರಿನಲ್ಲಿ ಉಸಿರಾಟದ ಸಮಸ್ಯೆ ಎದುರಾಗಿ ಪ್ರಾಣಬಿಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್ನಲ್ಲಿ ನಡೆದಿದೆ. ಆದರೆ ಮಕ್ಕಳ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.
ಇಲ್ಲಿನ ಮುಜಾಹಿದ್ನಗರ್ದಲ್ಲಿ ಐದು ವರ್ಷದ ರಿಯಾಜ್ ಮತ್ತು ಮಹಮ್ಮದ್ ಕಾರಿನಲ್ಲಿ ಉಸಿರಾಡದೇ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಮಧ್ಯಾಹ್ನದಿಂದ ಇವರು ನಾಪತ್ತೆಯಾಗಿದ್ದು, ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಧ್ಯೆರಾತ್ರಿ ವೇಳೆ ಕಾರಿನ ಹಿಂಬದಿ ಸೀಟ್ನಲ್ಲಿ ಮಕ್ಕಳು ಶವವಾಗಿ ಕಂಡಿವೆ.
ಕಾರಿನ ಮಾಲೀಕ ಡೋರ್ ಓಪನ್ ಮಾಡಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಇನ್ನು ಈ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿದ್ದು, ಮಕ್ಕಳನ್ನು ಕಳೆದುಕೊಂಡ ಆ ತಾಯಿಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರಿನ ಬಾಗಿಲನ್ನ ಓನರ್ ತೆಗೆದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಆ ಕಾರಿನ ಮಾಲೀಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಧ್ಯರಾತ್ರಿ ಕಾರಿನ ಬಾಗಿಲನ್ನು ಓನರ್ ಏಕೆ ತೆಗೆಯಬೇಕು. ಲಾಕ್ ಆಗಿದ್ದ ಕಾರಿನಲ್ಲಿ ಈ ಮಕ್ಕಳು ಹೋಗಿದಾದ್ರೂ ಹೇಗೆ ಎಂಬುದಕ್ಕೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.