ಕರ್ನಾಟಕ

karnataka

ETV Bharat / jagte-raho

ಡ್ರಗ್ ಕೇಸ್​: ದೀಪಿಕಾ, ರಕುಲ್, ಸಿಮೋನೆ, ಕರಿಷ್ಮಾರ ಮೊಬೈಲ್​ ವಶಕ್ಕೆ ಪಡೆದ ಸಿಸಿಬಿ

ಡ್ರಗ್ಸ್​​ ಕುರಿತ ಚಾಟ್​​ ಇರುವ ಕಾರಣ ಭಾರತೀಯ ಸಾಕ್ಷ್ಯ ಕಾಯ್ದೆಯ ಅಡಿಯಲ್ಲಿ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಿಮೋನೆ ಖಂಬಟ್ಟಾ ಹಾಗೂ ಕರಿಷ್ಮಾ ಪ್ರಕಾಶ್​ರ ಮೊಬೈಲ್​ಗಳನ್ನು ಎನ್​​ಸಿಬಿ ವಶಪಡಿಸಿಕೊಂಡಿದೆ.

NCB seizes phones of Deepika, Rakul, Simone, Karishma
ಡ್ರಗ್ ಕೇಸ್

By

Published : Sep 27, 2020, 12:56 PM IST

ಮುಂಬೈ: ಬಾಲಿವುಡ್ ಡ್ರಗ್ಸ್​​ ಪ್ರಕರಣ ಸಂಬಂಧ ವಿಚಾರಣೆಗೊಳಗಾಗಿದ್ದ ನಟಿ ದೀಪಿಕಾ ಪಡುಕೋಣೆ, ನಟಿ ರಕುಲ್ ಪ್ರೀತ್ ಸಿಂಗ್, ಫ್ಯಾಷನ್​ ಡಿಸೈನರ್​​ ಸಿಮೋನೆ ಖಂಬಟ್ಟಾ ಹಾಗೂ ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್​ರ ಮೊಬೈಲ್​ಗಳನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್​​ಸಿಬಿ) ವಶಕ್ಕೆ ಪಡೆದಿದೆ.

ಶುಕ್ರವಾರ ಸತತ 4 ನಾಲ್ಕು ಗಂಟೆಗಳ ಕಾಲ ರಕುಲ್​​ರನ್ನು ಹಾಗೂ ಶನಿವಾರ 5 ಗಂಟೆಗಳ ಕಾಲ ದೀಪಿಕಾರನ್ನು ಎನ್​ಸಿಬಿ ವಿಚಾರಣೆ ನಡೆಸಿತ್ತು. ಸಿಮೋನೆ ಮತ್ತು ಕರಿಷ್ಮಾ ಕೂಡ ವಿಚಾರಣೆಗೊಳಪಟ್ಟಿದ್ದರು. ಇವರುಗಳ ಮೊಬೈಲ್​ಗಳಲ್ಲಿ ಡ್ರಗ್ಸ್​​ ಕುರಿತ ಚಾಟ್​​ ಇರುವ ಕಾರಣ ಭಾರತೀಯ ಸಾಕ್ಷ್ಯ ಕಾಯ್ದೆಯ ಅಡಿಯಲ್ಲಿ ಮೊಬೈಲ್​ಗಳನ್ನು ವಶಪಡಿಸಿಕೊಂಡಿದೆ.

2017 ರಲ್ಲಿ ದೀಪಿಕಾ ತನ್ನ ಮಾಜಿ ವ್ಯವಸ್ಥಾಪಕರೊಂದಿಗೆ ಡ್ರಗ್ಸ್​ ಕುರಿತ ಚಾಟ್ ಮಾಡಿರುವ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ಕೋರಿಕೆಯ ಮೇರೆಗೆ ಎನ್‌ಸಿಬಿ ಪ್ರಕರಣ ದಾಖಲಿಸಿದೆ. ರಕುಲ್ ಮತ್ತು ಸಿಮೋನೆ ಇಬ್ಬರೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಅರೆಸ್ಟ್​ ಆಗಿರುವ ನಟಿ ರಿಯಾ ಚಕ್ರವರ್ತಿಯ ಸ್ನೇಹಿತೆಯರಾಗಿರುವುದರಿಂದ ಇವರ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್​ಸಿಬಿ ಮೂಲಗಳು ತಿಳಿಸಿವೆ.

ದೀಪಿಕಾ, ರಕುಲ್, ಸಿಮೋನೆ, ಕರಿಷ್ಮಾ ಹೊರತಾಗಿ ನಿನ್ನೆ ನಟಿಯರಾದ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್​ರನ್ನು ಕೂಡ ಎನ್​ಸಿಬಿ ವಿಚಾರಣೆಗೊಳಪಡಿಸಿತ್ತು.

ABOUT THE AUTHOR

...view details