ಜೈಪುರ: ರಾಜಸ್ಥಾನ ರಾಜಧಾನಿಯಲ್ಲಿ ಮುಜುಗರಕ್ಕೀಡಾಗುವಂತಹ ಪ್ರಕರಣ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೇ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಜೈಪುರ ಪೊಲೀಸರ ನಿರ್ಲಕ್ಷ್ಯ ಕೂಡ ಇಡೀ ಪ್ರಕರಣದಲ್ಲಿ ಎದ್ದು ಕಾಣುತ್ತದೆ. ಸಂತ್ರಸ್ತೆ ಬಾಲಕಿಗೆ ಎರಡು ದಿನಗಳ ವೈದ್ಯಕೀಯ ಚಿಕಿತ್ಸೆಯ ನಂತರವೂ ಪೊಲೀಸರು ತಕ್ಷಣವೇ ಸ್ಪಂದಿಸಿಲಿಲ್ಲ ಎಂಬ ದೂರು ಸಹ ಕೇಳಿಬಂದಿದೆ.
ಜೋಟ್ವಾರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಚಿಕ್ಕಪನ್ನೇ ಅತ್ಯಾಚಾರ ಎಸಗಿದ ಗಂಭೀರ ಘಟನೆಯ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಗೆ ನವೆಂಬರ್ 21 ರಂದು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಕರೆದೊಯ್ದು ತಪಾಸಣೆ ನಡೆಸಿದ ನಂತರ ಸೋನೋಗ್ರಫಿ ಮಾಡಲಾಯಿತು. ಆಗ ಬಾಲಕಿ 19 ವಾರಗಳ ಗರ್ಭಿಣಿ ಎಂಬುದನ್ನು ವೈದ್ಯರು ಬಹಿರಂಗಪಡಿಸಿದರು.