ಕರ್ನಾಟಕ

karnataka

ETV Bharat / jagte-raho

ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಗಾಂಜಾ ಮಾರಾಟ, ಪೊಲೀಸರೆದುರು ಆರೋಪಿಗಳ ತಪ್ಪೊಪ್ಪಿಗೆ - ಪೊಲೀಸರ ಎದುರು ಆರೋಪಿಗಳ ತಪ್ಪೊಪ್ಪಿಗೆ

ಆರೋಪಿಗಳು ಮೂಲತಃ ಆಂಧ್ರದ ವಿಶಾಖಪಟ್ಟಣದವರಾಗಿದ್ದಾರೆ. ಒಡಿಶಾ ರಾಜ್ಯದಿಂದ ಗಾಂಜಾ ಸೊಪ್ಪನ್ನ ಕಡಿಮೆ ಬೆಲೆಗೆ ತೆಗೆದುಕೊಂಡು ಬಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು..

arrest
arrest

By

Published : Sep 22, 2020, 4:46 PM IST

ಬೆಂಗಳೂರು :ಲಾಕ್​ಡೌನ್ ಸಮಯದಲ್ಲಿ ಕೆಲಸವಿಲ್ಲದಿದ್ದರಿಂದ ಹಣಕ್ಕಾಗಿ ಆಂಧ್ರಪ್ರದೇಶದಿಂದ ಗಾಂಜಾ ಖರೀದಿ ಮಾಡಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಉತ್ತರ ವಿಭಾಗ ಪೊಲೀಸರು ಮಟ್ಟ ಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ. ಶಬ್ಬೀರ್ ಖಾನ್, ಭೀಮಣ್ಣ, ನನ್ಮರಾವ್, ಸುರೇಂದ್ರ ಸೂರ್ಯ ಬಂಧಿತರು.

ಈ ಆರೋಪಿಗಳು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಆಗ ಪ್ರಮುಖ ಆರೋಪಿ ಶಬ್ಬಿರ್ ಖಾನ್ ಆಟೋ ಚಾಲಕನಾಗಿದ್ದು, ಲಾಕ್​ಡೌನ್ ಸಮಯದಲ್ಲಿ ಕೆಲಸವಿಲ್ಲದಿದ್ದರಿಂದ ಹಣಕ್ಕಾಗಿ ಆಂಧ್ರಪ್ರದೇಶದ ಭೀಮಣ್ಣ ಮತ್ತು ನನ್ನರಾವ್‌ ಎಂಬುವರಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಗಾಂಜಾ ಮಾರುತ್ತಿದ್ದವರ ಬಂಧನ

ಆರೋಪಿಗಳು ಮೂಲತಃ ಆಂಧ್ರದ ವಿಶಾಖಪಟ್ಟಣದವರಾಗಿದ್ದಾರೆ. ಒಡಿಶಾ ರಾಜ್ಯದಿಂದ ಗಾಂಜಾ ಸೊಪ್ಪನ್ನ ಕಡಿಮೆ ಬೆಲೆಗೆ ತೆಗೆದುಕೊಂಡು ಬಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ 9.6 ಲಕ್ಷ ಮೌಲ್ಯದ 30.23 ಕೆಜಿ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಗಾಂಜಾ ಮಾರುತ್ತಿದ್ದವರ ಬಂಧನ

ಮತ್ತೋರ್ವ ಆರೋಪಿ ಸುರೇಂದ್ರ ಸೂರ್ಯ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುತ್ತಿದ್ದ. ಈತ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದು, ಹಣದ ಆಸೆಗೋಸ್ಕರ ಆಂಧ್ರದಿಂದ ಕಡಿಮೆ ಬೆಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿದ್ದ ಎಂಬುದರ ಬಗ್ಗೆ ವಿಚಾರಣೆ ಬಾಯಿಬಿಟ್ಡಿದ್ದಾನೆ. ಸದ್ಯ ಆರೋಪಿಯಿಂದ 4.03 ಕೆಜಿ ತೂಕದ ಗಾಂಜಾ ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ABOUT THE AUTHOR

...view details