ನೆಲಮಂಗಲ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದ ಪತಿ ಶಶಿಕುಮಾರ್ ಎಂಬಾತನನ್ನು ಮಾದನಾಯನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪುಟ್ಟಮ್ಮ( 27) ಮೃತ ಮಹಿಳೆ. ಹೊಳೆನರಸೀಪುರ ಮೂಲದ ದಂಪತಿ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಪಾಳ್ಯದಲ್ಲಿ ನೆಲೆಸಿದ್ದರು. ಮದುವೆಯಾಗಿ 8 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಮತ್ತೊಂದು ಮದುವೆಯಾಗಲು ಶಶಿಕುಮಾರ್ ಸಂಚು ರೂಪಿಸಿದ್ದನಂತೆ.
ಮಂಗಳವಾರ ರಾತ್ರಿ ಕುಡಿದಿದ್ದ ಶಿವಕುಮಾರ್, ಹೆಂಡತಿಗೂ ಕಂಠ ಪೂರ್ತಿ ಕುಡಿಸಿದ್ದಾನೆ. ನಂತರ ಶೀಲ ಶಂಕಿಸಿ ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಆಕೆಯನ್ನು ಬೆತ್ತಲುಗೊಳಿಸಿ ಥಳಿಸಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ.
ಪತ್ನಿಯನ್ನು ಹೊಡೆದು ಕೊಂದ ಪಾಪಿ ಪತಿ ಮದುವೆಯಾದ ದಿನದಿಂದಲೂ ಶೀಲ ಶಂಕಿಸಿ ನನ್ನ ತಂಗಿಯನ್ನು ಹೊಡೆಯುತ್ತಿದ್ದ. ನನ್ನ ತಂಗಿ ಸಾವಿಗೆ ಕಾರಣ ಶಶಿಕುಮಾರ್ ತಾಯಿ ಮತ್ತು ಆತನ ಸಹೋದರ. ಶಶಿಕುಮಾರ್ಗೆ ಮತ್ತೊಂದು ಮದುವೆಯಾಗುವಂತೆ ಆತನ ತಾಯಿ ಆಸೆ ಹುಟ್ಟಿಸಿದ್ದಳು. ಹಾಗೂ ಹೆಂಡತಿ ಬಿಟ್ಟು ಮನೆಗೆ ಬರುವಂತೆ ಶಶಿಕುಮಾರ್ಗೆ ಹೇಳುತ್ತಿದ್ದರು. ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆಗೈದಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಪುಟ್ಟಮ್ಮನ ಸಹೋದರಿ ಒತ್ತಾಯಿಸಿದರು.