ಪುತ್ತೂರು: ಸುಖಾ ಸುಮ್ಮನೇ ಗುರಾಯಿಸಿ ಯುವಕನೊಬ್ಬನ ಮೇಲೆ ತಲ್ವಾರ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಪುಂಡರ ಗುಂಪೂಂದು ಪೊಲೀಸರ ಅತಿಥಿಯಾಗಿರುವ ಘಟನೆ ಪುತ್ತೂರು ನಗರದಲ್ಲಿ ಶುಕ್ರವಾರ ನಡೆದಿದೆ.
ಯಾಕೆ ಗುರಾಯಿಸಿದ್ದು ಅಂತಾ ಪ್ರಶ್ನೆ ಮಾಡಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಸುಖಾ ಸುಮ್ಮನೇ ಗುರಾಯಿಸಿ ಯುವಕನೊಬ್ಬನ ಮೇಲೆ ತಲ್ವಾರ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಪುಂಡರ ಗುಂಪೂಂದು ಪೊಲೀಸರ ಅತಿಥಿಯಾಗಿರುವ ಘಟನೆ ಪುತ್ತೂರು ನಗರದಲ್ಲಿ ಶುಕ್ರವಾರ ನಡೆದಿದೆ.
ಪುತ್ತೂರು ನಗರದ ಹೊರವಲಯದ ಉರ್ಲಾಂಡಿ ನಿವಾಸಿ ರಾಜೇಂದ್ರ ಹೆಗ್ಡೆ ಎಂಬುವರ ಪುತ್ರ ರಕ್ಷಿತ್ ಹೆಗ್ಡೆ(29) ಹಲ್ಲೆಗೊಳಗಾದವರು. ಕಳೆದ ಶುಕ್ರವಾರ ರಾತ್ರಿ ಪುತ್ತೂರಿನ ನಿರಾಳ ಬಾರ್ನಲ್ಲಿ ನಡೆದ ಡಿನ್ನರ್ ಕೂಟದಲ್ಲಿ ಪಾಲ್ಗೊಂಡು ಹಿಂತಿರುಗಿ ಬರುತ್ತಿದ್ದ ವೇಳೆ ಇಬ್ರಾಹಿಂ ಯಾನೆ ಎಂಬಾತ ತನ್ನನ್ನು ಗುರಾಯಿಸಿದ್ದ. ಈ ಬಗ್ಗೆ ಆತನಲ್ಲಿ ವಿಚಾರಿಸಿ ಮನೆಯ ಕಡೆಗೆ ಹೊರಟಿದ್ದೆ. ಆ ವೇಳೆ ಇಬ್ರಾಹಿಂ, ಆತನ ಜತೆಗಿದ್ದ ಪುತ್ತೂರು ಕಲ್ಲಿಮಾರಿನ ಸುಪ್ರೀತ್ ಸೇರಿದಂತೆ ಸುಮಾರು 12 ಜನರ ತಂಡ ತಲುವಾರು, ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ರಕ್ಷಿತ್ ಹೆಗ್ಡೆ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಇಬ್ರಾಹಿಂ ಮತ್ತು ಸುಪ್ರೀತ್ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.