ಹೌದು, ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ರಾಂಪ್ರಸಾದ್ ಮತ್ತು ಸುಚಿತ್ರಗೆ ಇಬ್ಬರು ಮಕ್ಕಳು. ರಾಂಪ್ರಸಾದ್ ಖಾಸಗಿ ಶಾಲೆಯಲ್ಲಿ ಈ ಹಿಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಕೆಲಸ ಬಿಟ್ಟ ಬಳಿಕ ಹೊಟ್ಟೆ ಪಾಡಿಗಾಗಿ ಗ್ರಾನೈಟ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು.
ಗುರುವಾರ ರಾತ್ರಿ 10.30ಕ್ಕೆ ದಂಪತಿ ರಾಂಪ್ರಸಾದ್, ಸುಚಿತ್ರ ಮತ್ತು ಇಬ್ಬರು ಹೆಣ್ಮಕ್ಕಳು ಬಿರಿಯಾನಿಯಲ್ಲಿ ವಿಷ ಬೇರಿಸಿ ಊಟ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಬೆಳಗ್ಗೆ ನೆರೆಹೊರೆಯವರು ನೋಡಿದಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ.