ಕರ್ನಾಟಕ

karnataka

By

Published : Dec 13, 2019, 11:24 AM IST

ETV Bharat / jagte-raho

ಖರೀದಿ ನಂತ್ರ ನೀವೂ ಹೀಗೆ ಮಾಡಬೇಡಿ... ಆನ್​​ಲೈನ್ ಶಾಪಿಂಗ್​​ ಹೆಸರಿನಲ್ಲಿ ನಡೀತಿದೆ ಮೋಸ!

ಆನ್​​ಲೈನ್ ಶಾಪಿಂಗ್ ಹೆಸರಿನಲ್ಲಿ ನಕಲಿ ತಂಡವೊಂದು ಯುವಕನೋರ್ವನ ಬ್ಯಾಂಕ್ ಖಾತೆಯಿಂದ ಹಣ ಪೀಕಿರುವ ಘಟನೆ ನಗರದಲ್ಲಿ ನಡೆದಿದೆ.

KN_RCR_2_12_Online_shopping_froud_case_10017
ಆನ್ ಲೈನ್ ಶಾಪಿಂಗ್ ಹೆಸರಿನಲ್ಲಿ ಮೋಸ: ಬ್ಯಾಂಕ್ ಖಾತೆಯಲ್ಲಿದ್ದ ಹಣ ಕ್ಷಣಮಾತ್ರದಲ್ಲಿ ಮಾಯ....

ರಾಯಚೂರು: ಆನ್​​ಲೈನ್ಶಾಪಿಂಗ್ ಹೆಸರಿನಲ್ಲಿ ನಕಲಿ ತಂಡವೊಂದು ಯುವಕನೋರ್ವನ ಬ್ಯಾಂಕ್ ಖಾತೆಯಿಂದ ಹಣ ಪೀಕಿರುವ ಘಟನೆ ನಗರದಲ್ಲಿ ನಡೆದಿದೆ.

ಆನ್​ಲೈನ್ ಶಾಪಿಂಗ್ ಹೆಸರಿನಲ್ಲಿ ಮೋಸ: ಬ್ಯಾಂಕ್ ಖಾತೆಯಲ್ಲಿದ್ದ ಹಣ ಕ್ಷಣಮಾತ್ರದಲ್ಲಿ ಮಾಯ!

ರಾಯಚೂರಿನ ಆಶ್ರಯ ಕಾಲೋನಿಯ ನಿವಾಸಿ ತಾಹೇರ್, ಪಾಷ ಟ್ರೆಂಡ್ ಶಾರ್ಟ್ ಎಂಬ ಆ್ಯಪ್ ಮೂಲಕ ಮೂರು ಶರ್ಟ್ ಖರೀದಿ ಮಾಡಿದ್ದಾನೆ. ಆ ಶರ್ಟ್​ನಲ್ಲಿ ಡ್ಯಾಮೇಜ್ ಬಂದ ಕಾರಣ ಸಮಸ್ಯೆ ಹೇಳಲು ಕಸ್ಟಮರ್ ನಂಬರ್​​​ಗೆ ಕರೆ ಮಾಡಿದಾಗ ತಮ್ಮ ಖರೀದಿಯ ಮೊತ್ತ ರಿಫಂಡ್ ಮಾಡುತ್ತೇವೆಂದು ಅಕೌಂಟ್​​ನಲ್ಲಿರುವ 9,500 ರೂ. ಎಗರಿಸಿದ್ದಾರೆ. ಮೊದಲು‌ ಬ್ಯಾಂಕ್ ಖಾತೆಯ ಸಂಖ್ಯೆ ಕೇಳಿ ಆತನ ಮೊಬೈಲ್ ನಂಬರ್, ಖರೀದಿ ಮಾಡಿದ ಅಮೌಂಟ್ ಹೇಳಿ ಅಂತಾ 15 ನಿಮಿಷ ಮಾತನಾಡಿದ್ದಾನೆ. ನಂತರ ಒಟಿಪಿ ಕಳುಹಿಸಿ ಫಾರ್ವರ್ಡ್ ಮಾಡಲು ಹೇಳಿದ್ದಾನೆ. ಒಟಿಪಿ ಫಾರ್ವರ್ಡ್ ಮಾಡಿದ ನಂತರ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 9,500 ರೂ. ಎಗರಿಸಿದ್ದಾರೆ.

ಸದ್ಯ ತಾಹೇರ್ ಸ್ಥಳೀಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸುಲಭವಾಗಿ ಹಾಗೂ ರಿಯಾಯತಿ ದರದಲ್ಲಿ‌ ವಸ್ತುಗಳು ಸಿಗುತ್ತವೆ ಎಂದು ಕಂಡ ಕಂಡ ಆ್ಯಪ್ ಮೂಲಕ ಶಾಪಿಂಗ್ ಮಾಡಿದರೆ ಮೋಸ ಹೋಗೋದು ಗ್ಯಾಂರಂಟಿ ಎನ್ನುತ್ತಿದ್ದಾರೆ ಪೊಲೀಸರು.


ABOUT THE AUTHOR

...view details