ರಾಯಚೂರು: ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಆರೋಪಿ ಸುದರ್ಶನ್ ಯಾದವ್ನನ್ನು ನೇತಾಜಿ ಠಾಣಾ ಪೊಲೀಸರು ಇಂದು ನ್ಯಾಯಲಯಕ್ಕೆ ಹಾಜರುಪಡಿಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಇ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ: ಇಂದು ನ್ಯಾಯಾಲಯಕ್ಕೆ ಅರೋಪಿ ಹಾಜರು - kannada news
ರಾಯಚೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಸಂಶಯಾಸ್ಪದ ಸಾವು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇಲ್ಲಿನ ನೇತಾಜಿ ಪೊಲೀಸರು ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರಿಪಡಿಸಲಿದ್ದಾರೆ.
ಆರೋಪಿ ಸುದರ್ಶನ್ ಯಾದವ್
ಪ್ರಕರಣದ ನಂತರ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಏ.14 ರಂದು ವಿಚಾರಣೆ ನಡೆಸಿ ಮೇ 2 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತು. ಆದರೆ, ಸಿಐಡಿ ಅಧಿಕಾರಿಗಳ ವಿಚಾರಣೆ ಇನ್ನೂ ಬಾಕಿ ಇದ್ದ ಕಾರಣ ಪುನಃ ನ್ಯಾಯಾಲಯದಿಂದ ಅರೋಪಿಯನ್ನು ವಿಚಾರಣೆಗೆ ಕೋರಿ ತಮ್ಮ ವಶಕ್ಕೆ ಪಡೆದಿದ್ದರು. ನ್ಯಾಯಾಲಯವು ಸಹ ಆರೋಪಿಯ ಬಂಧನ ಅವಧಿಯನ್ನು ಮುಂದುವರಿಸಿತ್ತು.
ಮೇ 14 ರಂದು ಕೋರ್ಟ್ಗೆ ಹಾಜರುಪಡಿಸುವಂತೆ ಇಲ್ಲಿನ 3ನೇ ಜೆಎಂಎಫ್ಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಅದರಂತೆ ನೇತಾಜಿ ಪೊಲೀಸರು ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರಿಪಡಿಸಲಿದ್ದಾರೆ.