ಅವರಿಬ್ಬರೂ ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ, ಆ ವಿಧಿಗೆ ಇವರಿಬ್ಬರು ಒಂದಾಗಿ ಬಾಳುವುದು ಇಷ್ಟ ಇಲ್ಲವಂತೆ ಕಾಣಿಸುತ್ತೆ. ಮದುವೆಯಾದ ಎರಡನೇ ದಿನಕ್ಕೆ ನವವಿವಾಹಿತನ ಪ್ರಾಣ ಬಲಿ ತೆಗೆದುಕೊಂಡಿದೆ.
ತೆಲಂಗಾಣದ ಯಾದಾದ್ರಿ ಜಿಲ್ಲೆಯ ಮುಕ್ತಾಪೂರ್ ಗ್ರಾಮದ ಬಿಂದಂ ಸಾಯಿಲು (55), ಗಂಗಮ್ಮ (50) ದಂಪತಿ ತನ್ನ ಮಗ ಬಿಂದಂ ಪ್ರವೀಣ್ಗೆ (22) ಈ ತಿಂಗಳು 19ರಂದು ರೇವಣಪಲ್ಲಿ ಗ್ರಾಮದ ಯುವತಿ ಜೊತೆ ಮದುವೆ ಮಾಡಿದ್ದರು. ಶುಕ್ರವಾರ ವಧುವಿನ ಮನೆಯಲ್ಲಿ ಶುಭಕಾರ್ಯ ಮುಗಿಸಿಕೊಂಡು ವರನ ಕುಟುಂಬಸ್ಥರು ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ.
ಮನೆಯ ಮುಂದೆ ಮದುವೆ ಅಲಂಕಾರಕ್ಕಾಗಿ ಲೈಟ್ಗಳನ್ನು ಹಾಕಲಾಗಿತ್ತು. ಪಕ್ಕಕ್ಕೆ ಕಬ್ಬಿಣದ ರಾಡ್ಗೆ ಲೈಟ್ಗಳನ್ನ ಸುತ್ತಲಾಗಿತ್ತು. ಆ ಕಬ್ಬಿಣದ ರಾಡ್ಗೆ ಬಟ್ಟೆ ಒಣಗಿಸಲು ತಂತಿಯನ್ನೂ ಸಹ ಕಟ್ಟಲಾಗಿತ್ತು. ಬಟ್ಟೆ ತೆಗೆಯಲು ವರನ ತಾಯಿ ಗಂಗಮ್ಮ ಹೋದಾಗ ಕರೆಂಟ್ ಶಾಕ್ ಹೊಡೆದಿದೆ. ಇದನ್ನು ನೋಡಿದ ವರ ಪ್ರವೀಣ್ ತಾಯಿಯನ್ನು ಕಾಪಾಡಲು ಹೋದಾಗ ಆತನಿಗೂ ಶಾಕ್ ಹೊಡೆದಿದೆ. ಮಗನನ್ನು ಬಚಾವ್ ಮಾಡಲು ತಂದೆ ಹೋದಾಗ ಮತ್ತು ಅಣ್ಣನನ್ನು ಕಾಪಾಡಲು ತಂಗಿ ಹೋದಾಗ ಶಾಕ್ ಹೊಡೆದಿದೆ. ಹೀಗೆ ಒಬ್ಬರಿಗೊಬ್ಬರು ಕಾಪಾಡಲು ಹೋಗಿ ಸಾವಿನ ಕದ ತಟ್ಟಿದ್ದಾರೆ.
ಕೂಡಲೇ ನಾಲ್ವರನ್ನು ಹೈದರಾಬಾದ್ನಲ್ಲಿರುವ ಪ್ರಮುಖ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ವರನ ಜೊತೆ ಅಪ್ಪ, ಅಮ್ಮ, ಸೋದರತ್ತೆಯೂ ಮೃತಪಟ್ಟಿದ್ದರು. ಇನ್ನು ಈ ಘಟನೆಯಿಂದ ಇಬ್ಬರೂ ಗಾಯಗೊಂಡಿದ್ದು, ನೋವಿನಿಂದ ನರಳುತ್ತಿದ್ದಾರೆ. ಮದುವೆ ಮನೆಯಲ್ಲಿ ನಡೆದ ವಿಷಾದದಿಂದ ಈಗ ಆ ಗ್ರಾಮದಲ್ಲಿ ಮೌನ ಆವರಿಸಿದೆ.