ಕರ್ನಾಟಕ

karnataka

ETV Bharat / jagte-raho

ವೈದ್ಯನಿಂದಲೇ ಕೋವಿಡ್​ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನ! - ಉತ್ತರ ಪ್ರದೇಶ ಕ್ರೈಂ

ಐಸೋಲೇಷನ್​ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್​ ಸೋಂಕಿತ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

Uttar Pradesh
ಕೋವಿಡ್​ ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನ

By

Published : Jul 23, 2020, 1:34 PM IST

ಉತ್ತರ ಪ್ರದೇಶ: ಕೋವಿಡ್​ ಸೋಂಕಿತ ಯುವತಿಯ ಮೇಲೆ ಸರ್ಕಾರಿ ವೈದ್ಯನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಅಲಿಗರ್​​​ನ ದೀನ್​ ದಯಾಳ್​ ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ಪಾಸಿಟಿವ್​ ಬಂದು ಐಸೋಲೇಷನ್​ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ಯುವತಿಗೆ ವೈದ್ಯ ತುಫೈಲ್ ಅಹ್ಮದ್ (30) ಎಂಬಾತ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಮಂಗಳವಾರ ರಾತ್ರಿ ಯುವತಿ ಇದ್ದ ವಾರ್ಡ್‌ಗೆ ಭೇಟಿ ನೀಡಿದ ತುಫೈಲ್, ತಪಾಸಣೆಯ ನೆಪದಲ್ಲಿ ಗುಪ್ತಾಂಗಗಳನ್ನು ಮುಟ್ಟಿದ್ದಾನೆ. ಬುಧವಾರ ಬೆಳಗ್ಗೆ ಕೂಡ ಮತ್ತೆ ಹೀಗೆ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯವನ್ನು ಗಮನಿಸಿದಾಗ ವೈದ್ಯ ಪಿಪಿಇ ಕಿಟ್​, ಹ್ಯಾಂಡ್ ಗ್ಲೌಸ್​ ಧರಿಸದೆ ಯುವತಿ ಇದ್ದ ವಾರ್ಡ್​ಗೆ ತೆರಳಿರುವುದು ತಿಳಿದು ಬಂದಿದೆ.

ಈ ಸಂಬಂಧ ಐಪಿಸಿ ಸೆಕ್ಷನ್ 376 (2) ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್​ ಅನಿಲ್ ಸಮಾನಿಯಾ ಹೇಳಿದ್ದಾರೆ.

ABOUT THE AUTHOR

...view details