ಕರ್ನಾಟಕ

karnataka

ETV Bharat / jagte-raho

ದೆಹಲಿ ಗಲಭೆ ಪ್ರಕರಣ: ಅ.22 ವರೆಗೆ ಉಮರ್​ ಖಾಲೀದ್​ಗೆ​ ನ್ಯಾಯಾಂಗ ಬಂಧನ

ಫೆ.24ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದ ಆರೋಪಿ ಉಮರ್ ಖಾಲಿದ್​​ನನ್ನು ದೆಹಲಿಯ ಹೆಚ್ಚುವರಿ ಸೆಷನ್​​ ನ್ಯಾಯಾಲಯ ಅ.22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Umar Khalid
ಉಮರ್​ ಖಾಲೀದ್

By

Published : Sep 24, 2020, 3:34 PM IST

ನವದೆಹಲಿ: ಪೌರತ್ವ ಕಾಯ್ದೆ ವಿರೋಧಿ ಗಲಭೆ ಪ್ರಕರಣದಲ್ಲಿ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಬಂಧಿತನಾಗಿದ್ದ ಜೆಎನ್​ಯುನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್​​ನನ್ನು ಅಕ್ಟೋಬರ್​ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿ ಕೋರ್ಟ್​ ಆದೇಶ ನೀಡಿದೆ.

ಉಮರ್ ಖಾಲಿದ್​​ನ ಪೊಲೀಸ್​ ಕಸ್ಟಡಿ ಅಂತ್ಯವಾದ ಹಿನ್ನೆಲೆ ಆತನನ್ನು ಇಂದು ​​ಹೆಚ್ಚುವರಿ ಸೆಷನ್​​ ನ್ಯಾಯಾಲಯದ ನ್ಯಾ. ಅಮಿತಾಬ್​ ರಾವತ್​ ಅವರ ಮುಂದೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿರುವ ಕೋರ್ಟ್​, ಅ.22 ವರೆಗೆ ಖಾಲಿದ್​​ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಫೆಬ್ರವರಿ 24ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ಪರ-ವಿರೋಧಿ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಘಟನೆಯಲ್ಲಿ 53 ಮಂದಿ ಬಲಿಯಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಲ್ಲದೇ ನೂರಾರು ಪೊಲೀಸರಿಗೂ ಗಾಯಗಳಾಗಿತ್ತು. ಪ್ರಕರಣ ಸಂಬಂಧ ಸೆ.13 ರಂದು ಉಮರ್ ಖಾಲಿದ್​​ನನ್ನು ಪೊಲೀಸರು ಬಂಧಿಸಿದ್ದರು.

ಇನ್ನು ಆರೋಪಿ ಉಮರ್ ಖಾಲಿದ್​​ವಿರುದ್ಧ ದೇಶದ್ರೋಹ, ಕೊಲೆ, ಕೊಲೆಗೆ ಯತ್ನ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧಗಳ ಅಡಿಯಲ್ಲಿ ಕೂಡ ಪ್ರಕರಣಗಳು ದಾಖಲಾಗಿದೆ.

ABOUT THE AUTHOR

...view details