ಕರ್ನಾಟಕ

karnataka

ETV Bharat / jagte-raho

ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿದ 'ಮಾದಕ'ತೆ: ‌ದೆಹಲಿಯ NCB ವಿಶೇಷ ಟೀಂ ಬೆಂಗಳೂರಿಗೆ ಆಗಮನ - ಎನ್​ಸಿಬಿ ಟೀಂ

ಸ್ಯಾಂಡಲ್​ವುಡ್​ನಲ್ಲೂ ಡ್ರಗ್ಸ್ ದಂಧೆಯಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಚ್ಚರಿಯ ಹೇಳಿಕೆಯ ಆಧಾರದ ಮೇರೆಗೆ‌ ಡ್ರಗ್ಸ್ ಜಾಲ ಸಂಬಂಧ ಸುಮೋಟೋ ಪ್ರಕರಣ ಕೂಡ ದಾಖಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ತನಿಖೆಯೂ ಮುಂದುವರೆದಿದೆ. ಇನ್ನೊಂದೆಡೆ, ಮಾದಕ ವಸ್ತುಗಳ ನಿಯಂತ್ರಣ ಮಂಡಳಿಯ ವಿಶೇಷ ತಂಡ ಬೆಂಗಳೂರಿಗೆ ಆಗಮಿಸಿದೆ.

Bangalore
ಡ್ರಗ್ಸ್

By

Published : Aug 30, 2020, 2:51 PM IST

ಬೆಂಗಳೂರು: ಮಾದಕ ವಸ್ತು ಪೆಡ್ಲರ್ ಆಗಿ ಕಾರ್ಯ ನಿರ್ವಹಣೆ ಮಾಡ್ತಿದ್ದ ಮೂವರು ಡ್ರಗ್ ಪೆಡ್ಲರ್​ಗಳ ಬಂಧನವಾದ ಕಾರಣ ದೆಹಲಿಯಿಂದ ಇಂದು ಬೆಂಗಳೂರಿಗೆ ಎನ್​ಸಿಬಿ ಸ್ಪೆಷಲ್ ಟೀಂ ಬಂದಿಳಿದಿದೆ.

ಸ್ಯಾಂಡಲ್​ವುಡ್ ಜೊತೆ ಸಂಪರ್ಕ ಇರುವ ಬಂಧಿತ ಮಹಿಳೆ ಅನಿಕಾ ವಿಚಾರಣೆಯನ್ನು ಎನ್​ಸಿಬಿ ಟೀಂ ಮುಗಿಸಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ತನಿಖೆ ಶುರು ಮಾಡೋದಕ್ಕೆ ಈ ತಂಡ ಮುಂದಾಗಿದೆ.

ಸದ್ಯ ಇವರ ಜೊತೆ ನಂಟಿರುವವರ ಮೇಲೆ ಈ ತಂಡ ಕಣ್ಣಿಟ್ಟಿದೆ. ಜೊತೆಯ ಅವರ ಕರೆ ವಿವರ, ಎಸ್​ಎಂಎಸ್​ಗಳನ್ನು ಚೆಕ್ ಮಾಡಲು ಮುಂದಾಗಿದ್ದಾರೆ. ಅನಿಕಾಗೆ ಡ್ರಗ್ ನೀಡುವ ಪ್ರಮುಖ ಪೆಡ್ಲರ್​ಗಳ ತಂಡ ಯಾವುದು, ಆಕೆಯಿಂದ ಪಡೆದು ಮಾರಾಟ ಮಾಡುವವರು ಯಾರು? ಎಂಬ ವಿಚಾರವನ್ನು ಬಯಲಿಗೆಳೆಯಲು ಮುಂದಾಗಿದ್ದಾರೆ.

ಸ್ಯಾಂಡಲ್​ವುಡ್ ಸಂಪರ್ಕ ಹೊಂದಿರುವ ಬಂಧಿತ ಮಹಿಳೆ ಅನಿಕಾ

ಆರೋಪಿಗಳ ಲಿಂಕ್ ಇರುವವರಿಗೆ ನೊಟೀಸ್ ಸಾಧ್ಯತೆ:

ಅನಿಕಾ ಜೊತೆ ಸಂಪರ್ಕ ಇರುವವರನ್ನು ಕಚೇರಿಗೆ ಕರೆಯಿಸಿ ಎನ್​ಸಿಬಿ ವಿಚಾರಣೆ ಮಾಡಬಹುದು. ಒಂದು ವೇಳೆ ಡ್ರಗ್ ಡೀಲಿಂಗ್ ಸಾಬೀತಾದ್ರೆ ಬಂಧಿಸಿ ಜೈಲಿಗೆ ಕಳುಹಿಸಿ ಆರೋಪಿಗಳ ವಿರುದ್ಧ ಎನ್​ಡಿಪಿಎಸ್ ಆ್ಯಕ್ಟ್ ಅಡಿ ಕೇಸ್ ದಾಖಲಾಗುವ ಸಾಧ್ಯತೆ ಇದೆ.

ಸ್ಯಾಂಡಲ್​ವುಡ್​ನಲ್ಲೂ ಡ್ರಗ್ಸ್ ದಂಧೆಯಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯ ಆಧಾರದ ಮೇರೆಗೆ‌ ಡ್ರಗ್ಸ್ ಪ್ರಕರಣ ಸಂಬಂಧ ಸುಮೋಟೋ ಪ್ರಕರಣ ಈಗಾಗಲೇ ದಾಖಲಾಗಿದೆ. ಈಗಾಗಲೇ ನೋಟಿಸ್‌ ಮುಖಾಂತರ ಕಚೇರಿಗೆ ಬಂದು ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರು ತಾಕೀತು ಮಾಡಿದ್ದಾರೆ.

ಇನ್ನು ಅಧಿಕಾರಿಗಳು ಯಾವಾಗಿನಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ, ಈ ದಂಧೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ನಿಮ್ಮ ಬಳಿ ಯಾವೆಲ್ಲಾ ಸಾಕ್ಷಿಗಳಿವೆ? ಅಕ್ರಮ ಡ್ರಗ್ಸ್ ಜಾಲದ ಬಗ್ಗೆ ಗೊತ್ತಿದ್ದರೂ ಏಕೆ ಇಷ್ಟು ದಿನ ತಾವು ಮಾಹಿತಿ ನೀಡಿಲ್ಲ. ಮಾಹಿತಿ ನೀಡದಿರಲು ಕಾರಣವಾದರೂ ಏನು?. ಈಗಾಗಲೇ ಜೀವ ಬೆದರಿಕೆ ಏನಾದ್ರೂ ಇದೆಯಾ?. ಸ್ಯಾಂಡಲ್​ವುಡ್​ನ ಯಾವೆಲ್ಲ ನಟ , ನಟಿಯರು ಡ್ರಗ್ಸ್​ಗೆ ಅಡಿಕ್ಟ್ ಆಗಿದ್ದಾರೆ ಎಂಬೆಲ್ಲಾ ಹತ್ತು ಹಲವು ಪ್ರಶ್ನೆಗಳನ್ನು ಲಂಕೇಶ್​ಗೆ ಕೇಳಲಿದ್ದಾರೆ.

ಇಂದ್ರಜಿತ್​ ಲಂಕೇಶ್ ಹೇಳಿಕೆಯ ಆಧಾರದ ಮೇರೆಗೆ ಸಿಸಿಬಿ ಜೊತೆ ಮಾತುಕತೆ ಮಾಡಿ ‌ಮುಂದಿನ ಕ್ರಮ ಎನ್​ಸಿಬಿ ಕೈಗೊಳ್ಳಬಹುದು.

ನಗರದಲ್ಲಿ ಎಲ್ಲೆಲ್ಲಿ ಡ್ರಗ್ಸ್ ಸೀಜ್ ಆಯ್ತು?

ಕಳೆದ ಹತ್ತು ದಿನಗಳ ಹಿಂದೆ ಸುಮಾರು 2 ಕೋಟಿ ರೂ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ 80 ಲಕ್ಷ ರೂ ಮೌಲ್ಯದ ಹೈಡ್ರೋ ಗಾಂಜಾವನ್ನು ಸಿಸಿಬಿ ವಶಪಡಿಸಿಕೊಂಡಿತ್ತು. ಸುದ್ದುಗುಂಟೆಪಾಳ್ಯದಲ್ಲಿ ಬರೋಬ್ಬರಿ 1 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಡಿ.ಜೆ.ಹಳಿಯಲ್ಲಿ 40 ಲಕ್ಷ ರೂ ಮೌಲ್ಯದ ಎಲ್​ಎಸ್​ಡಿಯನ್ನ್ನು ಸೀಜ್ ಮಾಡಿದ್ದ ಆಫೀಸರ್ಸ್​, ಸೋಲದೇವನಹಳ್ಳಿಯಲ್ಲಿ 70 ಲಕ್ಷ ರೂ ಮೌಲ್ಯದ 200 ಎಲ್​ಎಸ್​ಡಿ ಟ್ಯೂಬ್​ಗಳನ್ನು ಸೀಜ್ ಮಾಡಿದ್ದರು. ಇದಲ್ಲದೆ ಕೆ.ಆರ್.ಪುರಂ, ರಾಮಮೂರ್ತಿನಗರ, ದೇವನಹಳ್ಳಿ, ಹುಳಿಮಾವು ಬಳಿ ಗಾಂಜಾ ಪತ್ತೆಯಾಗಿತ್ತು‌. ‌

ABOUT THE AUTHOR

...view details