ಕರ್ನಾಟಕ

karnataka

ETV Bharat / jagte-raho

50 ಸಾವಿರ ರೂ ಹಣಕ್ಕೆ 20 ಬಾರಿ ಇರಿದು ಬರ್ಬರವಾಗಿ ಕೊಲೆಗೈದರು! ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸುಪಾರಿ ಪಡೆದು 20 ಬಾರಿ ಇರಿದು‌ ಅತ್ಯಂತ ಬರ್ಬರವಾಗಿ ಕೊಲೆಗೈದ ಆರೋಪಿ ಕಾಲಿಗೆ ಗುಂಡು ಹೊಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

Bangalore shootout case
Bangalore shootout case

By

Published : Dec 24, 2019, 1:36 PM IST

ಬೆಂಗಳೂರು:ಸುಪಾರಿ ಪಡೆದು 20 ಬಾರಿ ಇರಿದು‌ ಕೊಲೆಗೈದ ಆರೋಪಿಗೆ ಗುಂಡು ಹೊಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್‌ 11ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಗ್ಗೆರೆ ಸೇತುವೆ ಬಳಿ ವೃತ್ತಿಯಲ್ಲಿ ಕ್ಯಾಬ್ ಹಾಗೂ ಆಟೋ ಓಡಿಸುತ್ತಿದ್ದ ರಘು ಎಂಬವರ ಕೊಲೆ ನಡೆದಿತ್ತು.

ಈ ಕೊಲೆ ಪ್ರಕರಣ ಭೇದಿಸಲು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ಮಹಾಲಕ್ಷ್ಮಿ ಲೇಔಟ್​ ಹಾಗೂ ನಂದಿನಿ ಲೇಔಟ್​ ಪೋಲಿಸರ ವಿಶೇಷ ತಂಡಗಳನ್ನು ರಚಿಸಿದ್ದರು. ಇಂದು ಬೆಳಗ್ಗೆ ಆರೋಪಿ ಬಾಬು ಶಿವಕುಮಾರ್ ಜಾಲಹಳ್ಳಿಯ ಹೆಚ್​ಎಂಟಿ ನಿರ್ಜನ ಪ್ರದೇಶದಲ್ಲಿರುವ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ಮಹಾಲಕ್ಷ್ಮಿ ಲೇಔಟ್​​​ ಠಾಣೆಯ ಪಿಎಸ್ಐ ವೆಂಕಟರಾಮು ನೇತೃತ್ವದಲ್ಲಿ ತಂಡ ತೆರಳಿದೆ.

ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ವೇಳೆ ಶರಣಾಗುವಂತೆ ಪೊಲೀಸರು ಆರೋಪಿಗೆ ಸೂಚಿಸಿದ್ದಾರೆ. ಆತ ಪೊಲೀಸರ ಮಾತಿಗೆ ಕಿವಿಗೊಡದೆ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಬಳಿಕ ಪಿಎಸ್ಐ ವೆಂಕಟರಾಮು ಅವರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಲೆಕ್ಕಿಸದೆ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಘು ಕೊಲೆಯ ಅಸಲಿಯತ್ತು:

ಕೊಲೆಯಾದ ರಘು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ವೃತ್ತಿಯಲ್ಲಿ ಕ್ಯಾಬ್ ಹಾಗೂ ಆಟೋ ಚಾಲಕನಾಗಿದ್ದ. ಆದ್ರೆ, ಇತ್ತೀಚೆಗೆ ಕೊಲೆಯಾದ ರಘು ಅವರ ಮಾವ ಪ್ರಭಾಕರ್ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆದು ಗಲಾಟೆ ನಡೆದಿತ್ತು.ಹೀಗಾಗಿ ಇದೇ ಕೋಪಕ್ಕೆ ಪ್ರಭಾಕರ್ ತನ್ನ ಕುಟುಂಬಸ್ಥರಲ್ಲಿ ಒಬ್ಬರಾದ ನರಸಿಂಹಮೂರ್ತಿ ಅವರ ಜೊತೆ ಸೇರಿ ರಘು ಅವರನ್ನ ಕೊಲೆ ಮಾಡೋದಕ್ಕೆ ₹ 50 ಸಾವಿರ ಹಣ‌ವನ್ನು ಬಾಬು ಶಿವಕುಮಾರ್​​​​ಗೆ ಸುಪಾರಿ ನೀಡಿದ್ದ.

ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್

ಹೀಗಾಗಿ ಇದೇ ತಿಂಗಳ 11 ರಂದು ರಘು ಕ್ಯಾಬ್​​​​ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಆರೋಪಿಗಳು ರಘುಗೆ ಇಪ್ಪತ್ತು ಬಾರಿ ಇರಿದು ಕೊಲೆ ಮಾಡಿದ್ದರು. ಈ ಘಟನಾವಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details