ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲುಕಂಭ ಗ್ರಾಮದ ಬಳಿ ಕಾರೊಂದು ಪಲ್ಟಿಯಾದ ಪರಿಣಾಮ ಎಎಸ್ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕುರುಗೋಡು ಬಳಿ ಕಾರು ಪಲ್ಟಿಯಾಗಿ ಎಎಸ್ಐ ಸಾವು - ಬಳ್ಳಾರಿಯ ಕಲ್ಲುಕಂಭ ಸಮೀಪ ಕಾರು ಪಲ್ಟಿ ನ್ಯೂಸ್
ಕುರುಗೋಡು ಪೊಲೀಸ್ ಠಾಣೆಯ ಪ್ರಭಾರಿ ಎಎಸ್ಐ ಪ್ರಹ್ಲಾದ್ ಅವರು ಕಲ್ಲುಕಂಭ ಗ್ರಾಮದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಎಎಸ್ಐ ಸಾವು
ಕುರುಗೋಡು ಪೊಲೀಸ್ ಠಾಣೆಯ ಪ್ರಭಾರಿ ಎಎಸ್ಐ ಪ್ರಹ್ಲಾದ್ (50) ಮೃತರು.
ಎಎಸ್ಐ ಪ್ರಹ್ಲಾದ್ ಅವರು, ಸಿರಿಗೇರಿ ಮೂಲದವರೆಂದು ತಿಳಿದುಬಂದಿದೆ. ಕಾರು ಚಾಲಕ ಪಂಪ (40) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated : May 20, 2020, 10:43 AM IST