ಕರ್ನಾಟಕ

karnataka

ETV Bharat / jagte-raho

ಅಪರಿಚಿತನಿಗೆ ವಾಟ್ಸಪ್ ವಿಡಿಯೋ ಕಾಲ್​ನಲ್ಲಿ ಸಲುಗೆ ಕೊಟ್ಟ ತಪ್ಪಿಗೆ 3 ಲಕ್ಷ ರೂ. ಕಳೆದುಕೊಂಡ ಮಹಿಳೆ - ಮಂಗಳೂರು ಮೂಲದ ಇಮ್ರಾನ್

ಕೆಲ ದಿನಗಳ ಬಳಿಕ ಆರೋಪಿಯು ಮಹಿಳೆಗೆ ವಾಟ್ಸಪ್​​​ನಲ್ಲಿ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಾನೆ. ಮಹಿಳೆಯೂ ಈತನೊಂದಿಗೆ ಸಲುಗೆಯಿಂದ ಮಾತನಾಡಿದ್ದು, ವಿಡಿಯೋ ಕಾಲ್‌ನಲ್ಲಿ ಮಹಿಳೆಯ ಜತೆ ನಡೆಸಿದ ಸಂಭಾಷಣೆಯ ದೃಶ್ಯವನ್ನು ರೆಕಾರ್ಡ್​ ಮಾಡಿ ಆರೋಪಿಯು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.

black-mail
ಬ್ಲ್ಯಾಕ್ ಮೇಲ್‌

By

Published : Jan 10, 2021, 9:03 PM IST

ಬೆಂಗಳೂರು: ಕಳೆದ 2 ವರ್ಷಗಳ ಹಿಂದೆ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತನಿಗೆ ಸಲುಗೆ ಕೊಟ್ಟು, ಬ್ಲ್ಯಾಕ್​​ಮೇಲ್‌ಗೊಳಗಾದ ಮಹಿಳೆ ಹಣ ಕಳೆದುಕೊಂಡು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.

ಕುಮಾರಸ್ವಾಮಿ ಲೇಔಟ್‌ನ ನಿವಾಸಿ 36 ವರ್ಷದ ಮಹಿಳೆ ಹಣ ಕಳೆದುಕೊಂಡವರು. ಮಂಗಳೂರು ಮೂಲದ ಇಮ್ರಾನ್ ಎಂಬಾತನ ವಿರುದ್ಧ ದಕ್ಷಿಣ ಸಿಇಎನ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: 50 ರೂಪಾಯಿ ಕೊಡಲು ನಿರಾಕರಣೆ : ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಯತ್ನ!

ಕಳೆದ 2 ವರ್ಷಗಳ ಹಿಂದೆ ಅಪರಿಚಿತ ನಂಬರ್‌ನಿಂದ ದೂರುದಾರ ಮಹಿಳೆಯ ಮೊಬೈಲ್‌ಗೆ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ತನ್ನನ್ನು ಇಮ್ರಾನ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಮೊಬೈಲ್ ನಂಬರ್ ಅಂಗಡಿಯಲ್ಲಿ ಸಿಕ್ಕಿದ್ದು, ಅದಕ್ಕೆ ಕರೆ ಮಾಡಿದೆ ಎಂದು ಹೇಳಿದ್ದಾನೆ. ಈತನ ಮಾತಿನ ಮೋಡಿಗೆ ಮರುಳಾದ ಮಹಿಳೆ ಒಳ್ಳೆಯ ಭಾವನೆಯಿಂದ ಮಾತನಾಡುತ್ತಿರಬಹುದು ಎಂದು ಭಾವಿಸಿ ಆತನ ಪ್ರಶ್ನೆಗೆ ಉತ್ತರಿಸಿದ್ದಾರೆ. ನಂತರ ವಾಟ್ಸಪ್‌ನಲ್ಲಿ ಮಹಿಳೆಗೆ ಆಗಾಗ ಸಂದೇಶಗಳನ್ನು ಕಳಿಸಲು ಆರಂಭಿಸಿ ಸಲುಗೆ ಬೆಳೆದಿದೆ.

ಕೆಲ ದಿನಗಳ ಬಳಿಕ ಆರೋಪಿಯು ಮಹಿಳೆಗೆ ವಾಟ್ಸಪ್​​ನಲ್ಲಿ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಾನೆ. ಮಹಿಳೆಯೂ ಈತನೊಂದಿಗೆ ಸಲುಗೆಯಿಂದ ಮಾತನಾಡಿದ್ದು, ವಿಡಿಯೋ ಕಾಲ್‌ನಲ್ಲಿ ಮಹಿಳೆಯ ಜತೆ ನಡೆಸಿದ ಸಂಭಾಷಣೆಯ ದೃಶ್ಯವನ್ನು ರೆಕಾರ್ಡ್​ ಮಾಡಿ ಆರೋಪಿಯು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಹಣ ಕೊಡದಿದ್ದರೆ ನಾವು ಮಾತನಾಡಿರುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ.

ಇದರಿಂದ ಆತಂಕಗೊಂಡ ಮಹಿಳೆ ಏನು ಮಾಡಬೇಕೆಂದು ತೋಚದೇ ಇಮ್ರಾನ್ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 3 ಲಕ್ಷ ರೂ. ಜಮೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಾಗ ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ABOUT THE AUTHOR

...view details