ಹೈದರಾಬಾದ್: ಮೊಮ್ಮಗಳನ್ನು ತನ್ನ ಕಾಮತೃಷೆಗೆ ಬಳಿಸಿಕೊಂಡು ಅಜ್ಜ ಬಾಲಕಿಯನ್ನು ತಾಯಿಯನ್ನಾಗಿಸಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಇಲ್ಲಿನ ಮೀರ್ಪೇಟ್ನ ಮುಗುಲಯ್ಯಗೆ ಮೂವರು ಹೆಣ್ಮಕ್ಕಳಿದ್ದರು. 2008ರಲ್ಲಿ ಪತ್ನಿ ಅಗಲಿದ ನಂತರ ಮುಗುಲಯ್ಯ ಮಿರ್ಯಾಲಗೂಡದ ದುರ್ಗಮ್ಮರನ್ನು ಮದುವೆ ಆಗಿದ್ದರು. ದುರ್ಗಮ್ಮನ ಸೋದರ ಮಾವ ಮಲ್ಲೇಶ್ ಆಗಾಗ ಮನೆಗೆ ಬಂದು ಹೋಗುತ್ತಿದ್ದ.
ಮುಗುಲಯ್ಯನ ಎರಡನೇ ಮಗಳನ್ನು (17) ಮಾಯದ ಮಾತಗಳನ್ನಾಡಿ ಮಲ್ಲೇಶ್ (ಸಂಬಂಧದಲ್ಲಿ ಅಜ್ಜ) ತನ್ನ ಬಲೆಗೆ ಕೆಡವಿಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭವತಿಯಾಗಿದ್ದು, ಮನೆಯಲ್ಲಿ ಈ ಸುದ್ದಿ ತಿಳಿದಿದೆ. ಕೂಡಲೇ ಬಾಲಕಿಯ ಪೋಷಕರು ಮಲ್ಲೇಶ್ ಬಳಿ ವಾಗ್ವಾದಕ್ಕಿಳಿದ್ದಾರೆ. ಪಂಚಾಯತಿಯಲ್ಲಿ ಬಾಲಕಿಗೆ ನಷ್ಟ ಪರಿಹಾರ ನೀಡಬೇಕೆಂದು ಸ್ಥಳೀಯರು ತೀರ್ಮಾನಿಸಿದ್ದಾರೆ
ಇಷ್ಟೆಲ್ಲ ಆದ ನಂತರ ಬಾಲಕಿ ತೀವ್ರ ಮನಸ್ತಾಪಕ್ಕೆ ಗುರಿಯಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅಜ್ಜ ಮಲ್ಲೇಶ್ ಪರಾರಿಯಾಗಿದ್ದಾನೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಲ್ಲೇಶ್ ಪತ್ತೆಗೆ ಜಾಲ ಬೀಸಿದ್ದಾರೆ.