ಕರ್ನಾಟಕ

karnataka

ETV Bharat / jagte-raho

ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ನಡೀತು ದುರಂತ... ಬಾರದಲೋಕಕ್ಕೆ ತೆರಳಿದ ಯುವಜೋಡಿ! - ಹುಡುಗಿ ಆತ್ಮಹತ್ಯೆ

ಆ ಜೋಡಿಗೆ ಇನ್ನೂ ಚಿಕ್ಕ ವಯಸ್ಸು. ಕೆಲ ವರ್ಷಗಳ ಹಿಂದಿನಿಂದಲೂ ಆ ಜೋಡಿ ಪ್ರೀತಿಸುತ್ತಿತ್ತು. ಅನೇಕ ಪ್ರಯತ್ನಗಳ ನಂತರ ಯುವಕ-ಯುವತಿ ಲವ್​ ಮ್ಯಾರೇಜ್​ಗೆ ಹಿರಿಯರು ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು. ಇನ್ನೇನೂ ಮದುವೆ ನಡೆಯಬೇಕು ಎನ್ನುವಷ್ಟರಲ್ಲಿ ಅತ್ತ ಯುವಕ, ಇತ್ತ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲವ್​ ಮ್ಯಾರೇಜ್​

By

Published : May 12, 2019, 7:12 PM IST

ಸಂಗಾರೆಡ್ಡಿ: ಆ ಲವ್​ ಬರ್ಡ್ಸ್​ಗೆ ಹಿರಿಯರು ಮದುವೆ ಮಾಡಲು ನಿಶ್ಚಿಯಿಸಿದ್ದರು. ಇನ್ನೇನೂ ಅವರಿಬ್ಬರು​ ಗೃಹಸ್ಥಾಶ್ರಮಕ್ಕೆ ಕಾಲಿಡಬೇಕು ಅನ್ನುವಷ್ಟರಲ್ಲಿ ದೊಡ್ಡ ದುರಂತವೇ ನಡೆದಿದೆ. ಅತ್ತ ಯುವಕ ಆತ್ಮಹತ್ಯೆಗೆ ಶರಣಾದನೆಂದು ಇತ್ತ ಯುವತಿ ಕೂಡ ಪ್ರಾಣಬಿಟ್ಟಿದ್ದಾಳೆ.

ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ಅತ್ತ ಹುಡುಗ, ಇತ್ತ ಹುಡುಗಿ ಆತ್ಮಹತ್ಯೆ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಚಪ್ಟಾಲ್​ ಗ್ರಾಮದ ರವೀಂದರ್​ (20) ಮತ್ತು ಅನಿತ (18) ಕೆಲ ವರ್ಷಗಳಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರ ವಿಷಯ ಹಿರಿಯರಿಗೆ ತಿಳಿದಿದ್ದು, ಅನಿತಾಗೆ ಬೇರೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಆದ್ರೆ ಈ ವಿಷಯ ರವೀಂದರ್​ ಕುಟುಂಬಸ್ಥರ ಗಮನಕ್ಕೆ ಬಂದಾಗ ಅನಿತಾಗೆ ಬೇರೊಬ್ಬ ಯುವಕನ ಜೊತೆ ನಿಶ್ಚಯವಾಗಿದ್ದ ಈ ಮದುವೆ ಮುರಿದು ಬಿದ್ದಿತ್ತು. ಆಗ ಹಿರಿಯರೆಲ್ಲರೂ ಸೇರಿ ಅನಿತಾ - ರವೀಂದರ್​ ಜೋಡಿಗೆ ಇದೇ ತಿಂಗಳು 31ರಂದು ಮದುವೆ ಮಾಡಲು ಮುಹೂರ್ತ ನಿಗದಿ ಪಡಿಸಿದ್ದರು.

ಲವ್​ ಮ್ಯಾರೇಜ್​ಗೆ ಗ್ರೀನ್​ ಸಿಗ್ನಲ್​ ಸಿಕ್ಕರೂ ಅತ್ತ ಹುಡುಗ, ಇತ್ತ ಹುಡುಗಿ ಆತ್ಮಹತ್ಯೆ

ಇಂದು ಮದುವೆ ಬಟ್ಟೆ ತರಲು ಹೋದಾಗ ರವೀಂದರ್​ ಮನೆಯಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿತ್ತು. ಇದರಿಂದ ಮನಸ್ತಾಪ ಉಂಟಾಗಿ ರವೀಂದರ್​ ಹೊಲದಲ್ಲಿ ನೇಣಿಗೆ ಶರಣಾಗಿದ್ದಾನೆ. ರವೀಂದರ್​ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಅನಿತಾಗೆ ತಿಳಿದಿದೆ. ಕೂಡಲೇ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details