ಕರ್ನಾಟಕ

karnataka

ETV Bharat / jagte-raho

ಸಹೋದರನ ಅಗಲಿಕೆಯ ನೋವು ತಾಳದೇ ಅಣ್ಣ ನೇಣಿಗೆ ಶರಣು...! - ಅಣ್ಣ ನೇಣಿಗೆ ಶರಣು

ಅಣ್ತಮ್ಮಂದಿರು ದಾಯಾದಿಗಳು, ಆಸ್ತಿಗಾಗಿ ಹೊಡೆದಾಡಿಕೊಂಡು ಸಾಯುತ್ತಾರೆ ಎಂಬ ಮಾತು ಇಲ್ಲಿ ಸುಳ್ಳಾಗಿದೆ. ಸಹೋದರನ ಸಾವನ್ನು  ತಾಳದೇ ಹಿರಿಯ ಸಹೋದರ ಸಹ ನೇಣಿಗೆ ಶರಣಾಗಿದ್ದಾನೆ.

ಸಹೋದರ

By

Published : Jun 20, 2019, 10:54 AM IST

ಹೈದರಾಬಾದ್​:ಈ​ ಘಟನೆ ನಡೆದಿದ್ದು ಹೈದರಾಬಾದ್​ನಲ್ಲಿ. ಇಲ್ಲಿನ ಸಜನ್​ಲಾಲ್​ ಸ್ಟ್ರೀಟ್​ ನಿವಾಸಿ ಮಾರ್ಕಂಡೆಯ್ಯಾ ಲಕ್ಷ್ಮಣ ಬೈಕ್​ ಮೆಕಾನಿಕ್​. ಈತ ಮದ್ಯ ವ್ಯಸನಿ ಆಗಿರುವುದರಿಂದ ಹೆಂಡ್ತಿ ತವರು ಮನೆಗೆ ಹೋಗಿದ್ದಾಳೆ.

ಇನ್ನು ಲಕ್ಷ್ಮಣ ತನ್ನ ಸಹೋದರ ಮತ್ತು ಆತನ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. 20 ದಿನಗಳ ಹಿಂದೆ ಅನಾರೋಗ್ಯದಿಂದ ಲಕ್ಷಣ ಸಹೋದರ ಮೃತಪಟ್ಟಿದ್ದರು. ಆತನ ಸಾವಿನ ಚಿಂತೆ ಲಕ್ಷ್ಮಣಗ್​ಗೆ ಕಾಡತೊಡಗಿದೆ. ಬಳಿಕ ಇಬ್ಬರು ಮಕ್ಕಳು ಏನಾಗುತ್ತವೆ ಎಂಬ ಭಯ ಹುಟ್ಟಿಕೊಂಡಿದೆ.

ಮಂಗಳವಾರ ರಾತ್ರಿ ಲಕ್ಷ್ಮಣ್​ ತನ್ನ ಸಹೋದರನ ಸಾವಿನ ಚಿಂತೆಯಲ್ಲಿ ಹೆಚ್ಚು ಕುಡಿದಿದ್ದು, ಕುಡಿದ ಮತ್ತಿನಲ್ಲೇ ನೇಣಿಗೆ ಶರಣಾಗಿದ್ದಾನೆ. ಬುಧವಾರ ಬೆಳಗ್ಗೆ ಲಕ್ಷ್ಮಣ್​ ನೇಣಿಗೆ ಶರಣಾಗಿರುವುದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details