ಕರ್ನಾಟಕ

karnataka

ETV Bharat / jagte-raho

ಬೀದರ್​​ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ: ಹಸಿವಿನಿಂದ ಮೃತಪಟ್ಟ ಶಂಕೆ - ಅಪರಿಚಿತ ಮಹಿಳೆ ಶವ

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಂದಗಾಂವ್ ಗ್ರಾಮದ ಹೊಲದಲ್ಲಿ 45 ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

dead body
ಶವ

By

Published : Aug 9, 2020, 4:07 AM IST

ಬೀದರ್:ಅಪರಿಚಿತ ಮಹಿಳೆಯೊಬ್ಬಳು ರಸ್ತೆ ಪಕ್ಕದ ಗದ್ದೆಯೊಂದರಲ್ಲಿ ಶವವಾಗಿ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮೃತ ಮಹಿಳೆ ಟಿಬಿ ರೋಗ ಬಾಧೆಯಿಂದ ಬಳಲುತ್ತಿದ್ದರಬಹುದು ಎಂದು ವೈದ್ಯರು ಸ್ಪಷ್ಟಿಕರಣ ನೀಡಿದ್ದಾರೆ.

ಜಿಲ್ಲೆಯ ಹುಮನಾಬಾದ್ ತಾಲೂಕಿನ ನಂದಗಾಂವ್ ಗ್ರಾಮದ ಹೊಲದಲ್ಲಿ 45 ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಮಹಿಳೆಯ ದೇಹ ನೋಡಿದರೇ ಮೇಲ್ನೋಟಕ್ಕೆ ಮಾನಸಿಕ ರೋಗದಿಂದ ಬಳಲುತ್ತಿರುವಂತೆ ಕಂಡು ಬರುತ್ತಾಳೆ. ಯಾವುದೋ ರೋಗ ಬಾಧೆಯಿಂದ ಬಳಲಿ, ಅನ್ನ- ನೀರು ಸಿಗದೆ ಹಸಿವಿನಿಂದ ಅಲ್ಲಿಯೆ ಕುಸಿದು ಬಿದ್ದು ಮೃತಪಟ್ಟಿರುವಂತ್ತಿದೆ ಎಂದು ದೂರುದಾರ ತುಕಾರಾಮ ಕಪ್ಪರಗಾಂವ್ ಹೇಳಿಕೆ ನೀಡಿದ್ದಾರೆ.

ಹಳ್ಳಿಖೇಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details