ಕಾಮೋಥೆ(ಮಹಾರಾಷ್ಟ್ರ):ನವೀಮುಂಬೈನ ಕಾಮೋಥೆಯಲ್ಲಿ ಭಾನುವಾರ ಸಂಜೆ ಅತಿ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜವರಾಯನ ರೂಪದಲ್ಲಿ ಬಂದ ಕಾರು... ಇಬ್ಬರ ದುರ್ಮರಣ, ನಾಲ್ವರಿಗೆ ಗಾಯ - ಕಾಮೋಥೆ
ಮಹಾರಷ್ಟ್ರದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಾರು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದಾರೆ.
ಜವರಾಯ
ಅಪಘಾತದಲ್ಲಿ ಗಾಯಗೊಂದಿರುವ ನಾಲ್ವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಳಿಕ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.