ಕರ್ನಾಟಕ

karnataka

ETV Bharat / international

'ಇದು ಯುದ್ಧದ ಸಮಯವಲ್ಲ'.. ಪುಟಿನ್​ಗೆ ತಿಳಿಹೇಳಿದ ಮೋದಿಗೆ ಯುಎಸ್​ ಮಾಧ್ಯಮಗಳು ಬಹುಪರಾಕ್​ - US media praises Modi

ಶಾಂಘೈ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಅವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಉಕ್ರೇನ್​ ಜೊತೆಗಿನ ಸಂಘರ್ಷ ಕೊನೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಮೋ ಕಾಳಜಿಗೆ ಯುಎಸ್ ಮಾಧ್ಯಮಗಳು ಜೈಕಾರ ಹಾಕಿವೆ.

US media praises Modi
US media praises Modi

By

Published : Sep 17, 2022, 9:08 AM IST

ವಾಷಿಂಗ್ಟನ್​​​:ಉಜ್ಬೇಕಿಸ್ತಾನದ ಸಮರ್ಕಂಡ್​​ನಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಗಳ ವಾರ್ಷಿಕ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಮುಖ್ಯವಾಗಿ 'ಇದು ಯುದ್ಧದ ಸಮಯವಲ್ಲ'. ಸಂಘರ್ಷ ಕೊನೆಗೊಳಿಸುವಂತೆ ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪುಟಿನ್​, ನಿಮ್ಮ ನಿಲುವು ಮತ್ತು ಕಳವಳ ನನಗೆ ಅರ್ಥವಾಗುತ್ತದೆ. ಸಂಘರ್ಷ ಶೀಘ್ರದಲ್ಲೇ ಕೊನೆಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು.

ಇದನ್ನೂ ಓದಿ:ಉತ್ಪಾದನಾ ಹಬ್ ಆಗಲಿದೆ ಭಾರತ: ಎಸ್​ಸಿಒ ಶೃಂಗದಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಫಿದಾ ಆಗಿರುವ ಅಮೆರಿಕದ ಮಾಧ್ಯಮಗಳು, ನಮೋ ಅವರನ್ನು ಹಾಡಿಹೊಗಳಿವೆ. ವಾಷಿಂಗ್ಟನ್ ಪೋಸ್ಟ್ ಮುಖ್ಯ ಪುಟದಲ್ಲೇ ನಮೋ ನಿರ್ಧಾರಕ್ಕೆ ಜೈಕಾರ ಹಾಕಿ ಸುದ್ದಿ ಪ್ರಕಟಿಸಿದೆ, 'ಸಾರ್ವಜನಿಕ ಸಭೆಯಲ್ಲೇ ಪುಟಿನ್​ ಅವರಿಗೆ ಮೋದಿ ಖಂಡಿಸಿದ್ದಾರೆ' ('In a stunning public rebuke, Modi told Putin) ಎಂದು ಹೆಡ್​ಲೈನ್ ನೀಡಿದೆ. ಇಂದಿನ ಯುಗ ಯುದ್ಧದ ಯುಗವಲ್ಲ. ಈ ಬಗ್ಗೆ ನಾನು ನಿಮ್ಮೊಂದಿಗೆ ಫೋನ್​​​ನಲ್ಲೂ ಸಹ ಮಾತನಾಡಿದ್ದೇನೆ ಎಂದು ಬರೆದುಕೊಂಡಿದೆ.

ದಿ ನ್ಯೂಯಾರ್ಕ್ ಟೈಮ್ಸ್ ಕೂಡ ಇದರ ಬಗ್ಗೆ ವರದಿ ಪ್ರಕಟಿಸಿದ್ದು, ಇದು ಯುದ್ಧದ ಯುಗವಲ್ಲ ಎಂದು ಭಾರತದ ನಾಯಕರು ಪುಟಿನ್​​ಗೆ ಹೇಳಿದ್ದಾರೆ ಎಂದು ಬರೆದುಕೊಂಡಿದೆ.

ಶಾಂಘೈ ಶೃಂಗಸಭೆಯಲ್ಲಿ ಮೋದಿ-ಪುಟಿನ್ ಮಾತುಕತೆ ನಡೆಸಿದ್ದರು. ಈ ವೇಳೆ ನಮೋ ಮಾತನಾಡಿ, ಇದು "ಯುದ್ಧದ ಸಮಯವಲ್ಲ" ಸಂಘರ್ಷವನ್ನು ಕೊನೆಗೊಳಿಸಿ ಎಂದು ಹೇಳಿದ್ದರು. ಈ ವೇಳೆ ಮಾತನಾಡಿದ್ದ ಪುಟಿನ್ ದುರದೃಷ್ಟವಶಾತ್, ಎದುರಾಳಿ ತಂಡ, ಉಕ್ರೇನ್ ನಾಯಕತ್ವ, ಸಂಧಾನ ಪ್ರಕ್ರಿಯೆಯನ್ನು ತಿರಸ್ಕರಿಸುವುದಾಗಿ ಘೋಷಿಸಿತು. ಜೊತೆಗೆ ಯುದ್ಧಭೂಮಿಯಲ್ಲಿ ಮಿಲಿಟರಿ ವಿಧಾನಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಬಯಸುವುದಾಗಿ ಹೇಳಿತ್ತು. ಹೀಗಾಗಿ, ಯುದ್ಧ ಘೋಷಣೆ ಅನಿವಾರ್ಯವಾಯಿತು ಎಂದು ಪುಟಿನ್ ತಿಳಿಸಿದರು.

ABOUT THE AUTHOR

...view details